ಗಟ್ಟಿಮೇಳ ಧಾರಾವಾಹಿಯಲ್ಲಿ ಅಹಲ್ಯಳಾಗಿ ಎಂಟ್ರಿ ಕೊಟ್ಟಿರುವ ಸೋನಿ ನಿಜಕ್ಕೂ ಯಾರು ಗೊತ್ತಾ? ?
ಗಟ್ಟಿಮೇಳ ಧಾರಾವಾಹಿಯಲ್ಲಿ ಅಹಲ್ಯಳಾಗಿ ಎಂಟ್ರಿ ಕೊಟ್ಟಿರುವ ಸೋನಿ ನಿಜಕ್ಕೂ ಯಾರು ಗೊತ್ತಾ? ?
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ಟಾಪ್ ಧಾರವಾಹಿಗಳಲ್ಲಿ ಗಟ್ಟಿಮೇಳ ಕೂಡ ಒಂದಾಗಿದೆ. ಹೌದು ಇದೀಗಾಗಲೇ ಗಟ್ಟಿಮೇಳ ಧಾರಾವಾಹಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಇನ್ನು ಧಾರವಾಹಿ ಅಷ್ಟೇ ಅಲ್ಲದೆ ಅದರಲ್ಲಿ ಅಭಿನಯಿಸುತ್ತಿರುವ ಸಾಕಷ್ಟು ಕಲಾವಿದರು ಕೂಡ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇನ್ನು ಧಾರಾವಾಹಿ ಪ್ರೇಕ್ಷಕರಿಗೆ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಗಳನ್ನು ನೀಡುತ್ತಿದೆ.
ಇನ್ನು ಈ ಧಾರಾವಾಹಿಯಲ್ಲಿ ವೇದಾಂತ ಆಗಿ ನಟಿಸುತ್ತಿರುವ ರಕ್ಷಿತ ಗೌಡ ಹಾಗೂ ಅಮೂಲ್ಯ ಪಾತ್ರದಲ್ಲಿ ನಟಿಸುತ್ತಿರುವ ನಿಶಾ ರವಿಕೃಷ್ಣನ್ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇನ್ನು ಇವರಿಬ್ಬರ ಪ್ರೇಮ ಕಹಾನಿಯಲ್ಲಿ ಹೊಸ ಹೊಸ ಟ್ವಿಸ್ಟ್ ಗಳು ಬಂದಿದ್ದು, ಇದೀಗ ಮತ್ತೊಂದು ಹುಡುಗಿಯ ಎಂಟ್ರಿಯಾಗಿದೆ. ಹೌದು ಇನ್ನು ಈ ಹುಡುಗಿ ವೇದಾಂತ್ ಅವರ ಹಳೆಯ ಪ್ರಿಯತಮೆ ಎಂದು ಕೂಡ ಹೇಳಲಾಗಿದೆ. ಇನ್ನು ಅವರು ಯಾರು? ಏನು? ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಹೌದು ಇದೀಗ ಗಟ್ಟಿಮೇಳ ಧಾರವಾಹಿಯ ವೇದಾಂತ ಹಾಗೂ ಅಮೂಲ್ಯ ಮಧ್ಯೆ ಅಹಲ್ಯಳ ಎಂಟ್ರಿಯಾಗಿದೆ. ಇನ್ನು ಅಹಲ್ಯ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ನಿಜವಾದ ಹೆಸರು ಸೋನಿ. ಹೌದು ನಟಿ ಸೋನಿ ಅವರು ಸಾಕಷ್ಟು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರು ಗಟ್ಟಿಮೇಳ ಧಾರವಾಹಿಯ ವೇದಾಂತ ಅವರ ಹಳೆಯ ಪ್ರಿಯತಮೆಯಾಗಿ ಅಹಲ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಹೀಗೆ ಆ ಪಾತ್ರದ ಮೂಲಕ ಗಟ್ಟಿಮೇಳ ಧಾರಾವಾಹಿಗೆ ಹೊಸ ಟ್ವಿಸ್ಟ್ ದೊರೆತಂತಾಗಿದೆ. ಇನ್ನು ಸೋನಿ ಅವರು ಖ್ಯಾತ ಮಾಡೆಲ್ ಕೂಡ ಹೌದು. ಅಷ್ಟೇ ಅಲ್ಲದೆ ಸಾಕಷ್ಟು ಸ್ಪರ್ಧಿಗಳಿಗೆ ಅವರು ಅನೇಕ ಕಿರೀಟಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಹೌದು ನಟಿ ಸೋನಿಯಾ ಅವರು ಸಾಕಷ್ಟು ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ‘ಮಿಸ್ ಟೀನ್ ಇಂಡಿಯಾ’ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅವರು ಫಿನಾಲೆವರೆಗೂ ತಲುಪಿದ್ದರು.
ನಂತರ ಅವರು ಅದೇ ವರ್ಷ ಅಂದರೆ 2017ರಲ್ಲಿ ‘ಮಿಸ್ ಇಂಡಿಯಾ ಎಲೈಟ್ ಮಾಡೆಲ್’ ಸ್ಪರ್ಧೆಯಲ್ಲಿ ಭಾಗವಹಿಸಿ ಇದರಲ್ಲಿ ವಿಜಯವನ್ನು ಪಡೆಯುತ್ತಾರೆ. ಇದು ಅವರ ಮೊದಲ ಕಿರೀಟವಾಗಿತ್ತು. ಇನ್ನು ಇದರ ನಂತರ 2018ರಲ್ಲಿ ‘ಫೇಸ್ ಆಫ್ ಮೈಸೂರು’ ಸ್ಪರ್ಧೆಯಲ್ಲಿ ಕಣಕ್ಕಿಳಿದು ಇದರಲ್ಲಿ ಕೂಡ ಸಫಲರಾದರು. ನಂತರ ಅದೇ ವರ್ಷ ‘ಮಿಸ್ ಟೀನ್ ಇಂಟರ್ನ್ಯಾಷನಲ್ ಸೌತ್ ಇಂಡಿಯಾ’ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಆದರೆ ಅವನು ಕೂಡ ತಮ್ಮ ಮುಡಿಗೇರಿಸಿಕೊಂಡರು. ಇಲ್ಲಿಯವರೆಗೆ ಮೂರು ಕಿರೀಟಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದ ಸೋನಿ ಅವರು ನಂತರ 2018ರಲ್ಲಿ ‘ಗ್ಲೆನ್ ಆನನ್ ಸೂಪರ್ ಮಾಡೆಲ್’ ಎಂಬ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಹೀಗೆ ಸೋನಿ ಅವರು 5 ಬ್ಯೂಟಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಫೈನಲಿಸ್ಟ್ ಆಗಿದ್ದರು. ಈ ಸ್ಪರ್ಧೆಗಳಲ್ಲಿ ಒಂದು ಸ್ಪರ್ಧೆಯನ್ನು ಹೊರತುಪಡಿಸಿ ಉಳಿದ ನಾಲ್ಕು ಸ್ಪರ್ಧೆಗಳಲ್ಲಿ ಇವರ ವಿಜೇತರಾಗಿದ್ದಾರೆ. ಹೀಗೆ ನಾಲ್ಕು ಕಿರೀಟಗಳನ್ನು ಮುಡಿಗೇರಿಸಿಕೊಂಡ ಸೋನಿ ಅವರು ಇದೀಗ ಗಟ್ಟಿಮೇಳ ಧಾರವಾಹಿಯಲ್ಲಿ ಅಹಲ್ಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಇವರ ಸೌಂದರ್ಯಕ್ಕೆ ಹಾಗೂ ಇವರ ನಟನೆಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನು ಈ ಕನ್ನಡದ ಚೆಲುವೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.