ಅಧಿಕೃತ ಸಂಭಾವನೆಯ ಪಟ್ಟಿ, ಕಿರುತೆರೆಯ ನಟಿಯರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ಅಧಿಕೃತ ಸಂಭಾವನೆಯ ಪಟ್ಟಿ, ಕಿರುತೆರೆಯ ನಟಿಯರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಂತೆ ಈಗ ಕನ್ನಡ ಚಿತ್ರರಂಗಕ್ಕೆ ಸರಿಸಮಾನವಾಗಿ ಕನ್ನಡ ಕಿರುತೆರೆ ರಂಗ ಕೂಡ ಸಮಾನ ವೇಗದಲ್ಲಿ ಬೆಳೆಯುತ್ತಿದೆ. ಅದರಲ್ಲೂ ಈಗಂತೂ ಕನ್ನಡ ಚಿತ್ರಗಳಿಗಿಂತ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ದಾರವಾಹಿಗಳು ಅತ್ಯಂತ ಹೆಚ್ಚು ವೀಕ್ಷಕರನ್ನು ಹಾಗೂ ಅಭಿಮಾನಿಗಳನ್ನು ಪಡೆದಿದ್ದಾರೆ. ಚಲನಚಿತ್ರ ನಟರಂತೆ ಧಾರವಾಹಿಯ ನಟ-ನಟಿಯರು ಕೂಡ ಕರ್ನಾಟಕ ರಾಜ್ಯದಲ್ಲಿ ಅದೆಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇಂದು ಅಂತಹದೇ ನಟಿಯರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಕನ್ನಡ ಚಿತ್ರರಂಗದ ಕಿರುತೆರೆಯ ಧಾರವಾಹಿಗಳಲ್ಲಿ ನಟಿಸುತ್ತಿರುವ ನಟಿಯರ ಸಂಭಾವನೆ ಕುರಿತಂತೆ ನಿಮಗೆಲ್ಲ ತಿಳಿಯುವ ಕುತೂಹಲ ಇರಬಹುದು. ಇಂದು ಆ ಕುತೂಹಲವನ್ನು ತಣಿಸುವ ಕೆಲಸವನ್ನು ನಾವು ಮಾಡಲಿದ್ದೇವೆ. ಹೌದು ಕನ್ನಡ ಕಿರುತೆರೆಯ ಧಾರವಾಹಿಯ ಸ್ಟಾರ್ ನಟಿಯರ ಸಂಭಾವನೆ ಕುರಿತಂತೆ ಇನ್ನು ನಾವು ನಿಮಗೆ ಹೇಳಲಿದ್ದೇವೆ ಬನ್ನಿ.

ಕೊನೆಯ ಸ್ಥಾನದಲ್ಲಿ ಕೌಸ್ತುಭ ಕನ್ನಡ ಕಿರುತೆರೆಯ ಅತ್ಯಂತ ಕಿರಿಯ ವಯಸ್ಸಿನ ನಟಿ ಎಂದೇ ಇವರನ್ನು ಹೇಳಬಹುದು. ಕೌಸ್ತುಭ ರವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನನ್ನರಸಿ ರಾಧೆ ಎಂಬ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆ ವೀಕ್ಷಕರ ಮನ ಗೆದ್ದವರು. ಇವರು ಕೂಡ ಪ್ರತಿ ಎಪಿಸೋಡಿಗೆ 15 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

ಅಂಕಿತ ಅಮರ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನಮ್ಮನೆ ಯುವರಾಣಿ ಎಂಬ ಧಾರವಾಹಿ ಮೂಲಕ ಕನ್ನಡಿಗರ ಪ್ರೀತಿಯನ್ನು ಪಡೆದಿರುವ ನಟಿ ಅಂಕಿತ ಅಮಾರ್ ಪ್ರತಿ ಎಪಿಸೋಡಿಗೆ 15000 ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇವರು ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಭರತನಾಟ್ಯ ಹಾಗೂ ವಿವಿಧ ಪ್ರಕಾರದ ನೃತ್ಯದಲ್ಲಿ ಪರಿಣಿತಿ ಹೊಂದಿದವರು. ನಯನ ನಟಿ ನಯನ ಗಿಣಿರಾಮ ಎಂಬ ಧಾರವಾಹಿ ಮೂಲಕ ಈಗ ಜನರ ಮೆಚ್ಚುಗೆಯನ್ನು ಗೊಳಿಸಿ ಕೊಂಡಂತಹ ಯುವನಟಿ. ಯು ಇವರು ಕೂಡ ಪ್ರತಿ ಎಪಿಸೋಡಿಗೆ 15ರಿಂದ 20000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ಹಾಡುಗಾರಿಕೆಯಲ್ಲಿ ಕೂಡ ಇವರು ಪರಿಣಿತರು.

ಮೊಕ್ಷಿತ ಪೈ ಪಾರು ಧಾರವಾಹಿಯ ಮೂಲಕ ಕನ್ನಡಿಗರ ಮನದಲ್ಲಿ ನೆಲೆಸಿರುವ ನಟಿ ಮೊಕ್ಷಿತ ಪೈ ಪ್ರತಿ ಎಪಿಸೋಡಿಗೆ ಸಂಪಾದಿಸುವ ಸಂಭಾವನೆ 20000 ರೂಪಾಯಿಗಳು. ಅಶ್ವಿನಿ ಮುದ್ದು ಲಕ್ಷ್ಮಿ ಧಾರಾವಾಹಿಯ ಮೂಲಕ ಕನ್ನಡಿಗ ಕಿರುತೆರೆಯ ವೀಕ್ಷಕರ ಜನಮಾನಸದಲ್ಲಿ ಮೆಚ್ಚುಗೆಯ ನಟಿಯಾಗಿ ಕಾಣಿಸಿಕೊಂಡಿರುವ ಅಶ್ವಿನಿ ಪ್ರತಿ ಎಪಿಸೋಡಿಗೆ 20000 ರೂಪಾಯಿಗಳನ್ನು ಪಡೆಯುತ್ತಾರೆ. ಭವ್ಯ ಗೌಡ ಟ್ರೋಲಿಗರಿಂದ ಸಖತ್ ಟ್ರೋಲ್ ಆದರೂ ಧಾರವಾಹಿ ಮೂಲಕ ವೀಕ್ಷಕರ ಮನ ಗೆದ್ದವರು ಭವ್ಯ ಗೌಡ. ಗೀತ ದಾರವಾಹಿ ಮೂಲಕ ಖ್ಯಾತಿಯನ್ನು ಹೊಂದಿರುವ ಭವ್ಯ ಗೌಡ ಪ್ರತಿ ಎಪಿಸೋಡಿಗೆ 15000 ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಅಮೂಲ್ಯ ಗೌಡ ಕಮಲಿ ಎಂಬ ದಾರವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಈಕೆ ನಿಜಜೀವನದಲ್ಲಿ ಸಕ್ಕತ್ ಮಾಡರ್ನ್. ನಟಿ ಅಮೂಲ್ಯ ಗೌಡರವರು ಪ್ರತಿ ಸಂಚಿಕೆಗೆ 25000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಕಾವ್ಯಶ್ರೀ ಗೌಡ ಕಾವ್ಯಶ್ರೀ ಗೌಡ ನಟನೆಯನ್ನು ಎಷ್ಟು ಹಚ್ಚಿಕೊಂಡವರೆಂದರೆ ನಟನೆಗಾಗಿ ಮನೆಯವರ ಇಚ್ಛೆಯ ವಿರುದ್ಧವಾಗಿ ನಟಿಸಲು ಬಂದವರು. ಹಿಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಎಂಬ ಧಾರವಾಹಿ ಮೂಲಕ ಕನ್ನಡಿಗರ ಮನದಲ್ಲಿ ನೆಲೆಸಿರುವ ಕಿರುತೆರೆ ನಟಿ. ದಾರವಾಹಿ ಅಷ್ಟೊಂದು ಜನಪ್ರಿಯತೆ ಪಡೆದಿಲ್ಲವಾದರೂ ಕಾವ್ಯಶ್ರೀ ರವರ ಮಂಗಳಗೌರಿ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಇವರು ಪ್ರತಿ ಎಪಿಸೋಡಿಗೆ ಪಡೆಯುವ ಸಂಭಾವನೆ ಬರೋಬ್ಬರಿ 25000 ರೂಪಾಯಿಗಳು.

ಗೌತಮಿ ಜಾದವ್ ಸತ್ಯ ಧಾರವಾಹಿ ಮೂಲಕ ಈಗಾಗಲೇ ಕನ್ನಡ ವೀಕ್ಷಕರ ಮನಗೆದ್ದಿರುವ ನಟಿ ಗೌತಮಿ ಜಾದವ್ ಪ್ರತಿ ಎಪಿಸೋಡ್ ಗೆ 35000 ರೂಪಾಯಿಯನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂಬುದು ಮೆಚ್ಚುವ ವಿಷಯ. ರಂಜನಿ ರಾಘವನ್ ರಂಜನಿ ರಾಘವನ್ ಅಂದಿನಿಂದ ಇಂದಿನವರೆಗೂ ಕನ್ನಡ ಕಿರುತೆರೆಯ ಧಾರವಾಹಿ ಕ್ಷೇತ್ರ ದಲ್ಲಿ ಕೇಳಿಕೊಂಡು ಬಂದಂತಹ ಪ್ರಮುಖ ಹೆಸರುಗಳಲ್ಲಿ ಒಂದು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟಗೌರಿ ಮದುವೆ ಎಂಬ ಐಕಾನಿಕ್ ಧಾರಾವಾಹಿ ಇಂದ ಹಿಡಿದು ಇಂದಿನ ಸೂಪರ್ ಹಿಟ್ ದಾರವಾಹಿ ಕನ್ನಡಿತಿ ಯವರೆಗೂ ಕನ್ನಡ ವೀಕ್ಷಕರ ಮನ ಗೆದ್ದ ಕಿರುತೆರೆ ನಟಿ ರಂಜನಿ ರಾಘವನ್. ನಟಿ ರಂಜನಿ ರಾಘವನ್ ಪ್ರತಿ ಎಪಿಸೋಡ್ ಗೆ 30 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ.

ನಿಶಾ ಮಿಲನ ಕನ್ನಡ ಕಿರುತೆರೆ ವೀಕ್ಷಕರಿಗೆ ಹೆಸರು ಚಿರಪರಿಚಿತ ಎಂಬುದು ನಮಗೆ ಗೊತ್ತು. ಕಿರುತೆರೆಯ ಧಾರವಾಹಿಯಲ್ಲಿ ನಟಿಸುವ ಮೂಲಕ ಕನ್ನಡಿಗರ ಮನ ಗೆದ್ದವರು ನಟಿ ನಿಶಾ ಮಿಲನ. ಈ ಹಿಂದೆ ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದ ಈಕೆ ಈಗ ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸಿ ಪ್ರತಿ ಎಪಿಸೋಡಿಗೆ 35000 ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಮೇಘ ಶೆಟ್ಟಿ ಮೇಘ ಶೆಟ್ಟಿ ಎಂಬ ಹೆಸರು ಈಗ ಕಿರುತೆರೆಗಳಲ್ಲಿ ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಓಡಾಡುತ್ತಿದೆ. ಹೌದು ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರವಾಹಿ ಮೂಲಕ ಪ್ರಸಿದ್ಧಿಗೆ ಬಂದ ಮೇಘ ಶೆಟ್ಟಿ ಈಗ ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಎಂಟ್ರಿ ನೀಡಲು ಸಿದ್ಧರಾಗಿದ್ದಾರೆ. ಅವರು ಜೊತೆ ಜೊತೆಯಲಿ ಧಾರಾವಾಹಿ 1 ಎಪಿಸೋಡ್ ಗೆ 40000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ನಿಮ್ಮ ನೆಚ್ಚಿನ ಕಿರುತೆರೆಯ ನಟಿಯರು ಪ್ರತಿ ಎಪಿಸೋಡಿಗೆ ಎಷ್ಟು ಹಣವನ್ನು ಸಂಪಾದಿಸುತ್ತಾರೆ. ಕಿರುತೆರೆಯ ಧಾರವಾಹಿಗಳಲ್ಲಿ ಕೂಡಾ ಈ ಮಟ್ಟದ ಸಂಭಾವನೆ ಪಡೆಯುವುದು ಅವರ ಪ್ರತಿಭೆಯಿಂದ ಮಾತ್ರವಲ್ಲದೆ ಇನ್ನೇನು ಅಲ್ಲ. ಈ ಲಿಸ್ಟ್ ನಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಹಾಗೂ ಅವರ ಸಂಭಾವನೆ ಏನೆಂದು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.