ಬಿಗ್ ನ್ಯೂಸ್: ಭಾರತ ಕ್ರಿಕೆಟ್ ತಂಡಕ್ಕೆ ಶ್ರೀಘ್ರದಲ್ಲಿಯೇ ಹೊಸ ನಾಯಕ?? ಯಾರಂತೆ ಗೊತ್ತಾ??

ಬಿಗ್ ನ್ಯೂಸ್: ಭಾರತ ಕ್ರಿಕೆಟ್ ತಂಡಕ್ಕೆ ಶ್ರೀಘ್ರದಲ್ಲಿಯೇ ಹೊಸ ನಾಯಕ?? ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಸದ್ಯ ಭಾರತೀಯ ಕ್ರಿಕೇಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಂಬುದು ನಿಮಗೆ ಗೊತ್ತಿದೆ. ವಿರಾಟ್ ಕೊಹ್ಲಿ 2014 ರಲ್ಲಿ ಮೊದಲ ಭಾರಿಗೆ ಟೆಸ್ಟ್ ತಂಡದ ನಾಯಕತ್ವ ವಹಿಸಿದರು. ನಂತರ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳಿ, ಸಂಪೂರ್ಣ ನಾಯಕತ್ವವನ್ನ ಕೊಹ್ಲಿಗೆ ಬಿಟ್ಟು ಕೊಟ್ಟರು. ನಂತರ 2017ರ ನಂತರ ಏಕದಿನ ಹಾಗೂ ಟಿ20 ತಂಡದ ನಾಯಕತ್ವವನ್ನು ಸಂಪೂರ್ಣ ವಿರಾಟ್ ಕೊಹ್ಲಿಯವರೇ ನಿರ್ವಹಿಸಿದ್ದರು.

ಈ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ಉತ್ತಮವಾಗಿ ನಿರ್ವಹಿಸಿ, ಆಸೀಸ್ ನೆಲದಲ್ಲಿ ಭಾರತ ಐತಿಹಾಸಿಕ ದಿಗ್ವಿಜಯ ಸಾಧಿಸಿತು. ಆಗಿನಿಂದಲೇ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ಅಜಿಂಕ್ಯಾ ರಹಾನೆಗೆ ಬಿಟ್ಟುಕೊಟ್ಟು ತಾವು ಬ್ಯಾಟಿಂಗ್ ನಲ್ಲಿ ಹೆಚ್ಚು ಗಮನವಹಿಸಬೇಕು ಎಂಬ ಧ್ವನಿ ಕೇಳಲಾರಂಭವಾಯಿತು. ಆದರೇ ನಂತರ ಆ ಕೂಗು ಅಷ್ಟೇ ಬೇಗ ಮಾಯವಾಯಿತು.

ಈಗ ಮತ್ತೆ ವಿರಾಟ್ ಕೊಹ್ಲಿ ನಾಯಕತ್ವ ಅಲುಗಾಡಲು ಶುರುವಾಗುತ್ತಿದೆ. ಭಾರತದ ಮಾಜಿ ಕ್ರಿಕೇಟರ್ ಹಾಗೂ ಆಯ್ಕೆ ಸಮಿತಿ ತಂಡದ ಮುಖ್ಯಸ್ಥ ಕಿರಣ್ ಮೋರೆ, ವಿರಾಟ್ ಆದಷ್ಟು ಬೇಗ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಗರಡಿಯಲ್ಲಿ ಪಳಗಿರುವ ಕ್ಯಾಪ್ಟನ್ ಕೊಹ್ಲಿ, ಧೋನಿ ಹಾದಿಯಂತೇ ರೋಹಿತ್ ಶರ್ಮಾಗೆ ನಾಯಕತ್ವ ಹಸ್ತಾಂತರಿಸಬೇಕು ಎಂದು ಹೇಳಿದ್ದಾರೆ. ರೋಹಿತ್ ನಾಯಕರಾಗಿರುವ ಮುಂಬೈ ಇಂಡಿಯನ್ಸ್ ತಂಡ ಐದು ಭಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ‌. ಅದಕ್ಕೆ ರೋಹಿತ್ ಶರ್ಮಾರವರ ಚಾಣಾಕ್ಷ ನಾಯಕತ್ವವೇ ಕಾರಣ ಎಂದು ತಿಳಿಸಿದ್ದಾರೆ.

ಕಳೆದ ಭಾರಿ ಐಪಿಎಲ್ ನಲ್ಲಿ ಮುಂಬೈ ತಂಡ ಜಯಗಳಿಸಿದಾಗ, ಭಾರತದ ಮಾಜಿ ಕ್ರಿಕೇಟರ್ ಹಾಗೂ ದೆಹಲಿಯ ಸಂಸದ ಗೌತಮ್ ಗಂಭೀರ್ ಸಹ ಇದೇ ಅಭಿಪ್ರಾಯ ಪಟ್ಟಿದ್ದರು. ಇಂಗ್ಲೆಂಡ್ ಮಾದರಿಯಲ್ಲಿ ಭಾರತವೂ ಸಹ ಮೂರು ಮಾದರಿ ಕ್ರಿಕೇಟ್ ಗಳಿಗೆ ಮೂರು ಜನ ನಾಯಕರನ್ನ ಘೋಷಿಸಿದರೇ, ಚಾಂಪಿಯನ್ ಆಟಗಾರರು ತಮ್ಮ ಆಟವನ್ನು ಎಂದಿನಂತೆ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಬಹುದು ಎಂದು ಹೇಳಿದ್ದರು.

ಅವರ ಪ್ರಕಾರ ಟೆಸ್ಟ್ ನಾಯಕತ್ವವನ್ನು ಅಜಿಂಕ್ಯಾ ರಹಾನೆ, ಏಕದಿನ ನಾಯಕತ್ವವನ್ನು ವಿರಾಟ್ ಕೊಹ್ಲಿ ಹಾಗೂ ಟಿ20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ನಿರ್ವಹಿಸಬೇಕು. ಆಗ ತಂಡದ ಸಮತೋಲನ ಪ್ರದರ್ಶನ ಕಂಡು ಬರುತ್ತದೆ ಎಂದು ಹೇಳಿದ್ದಾರೆ. ಏಕದಿನ, ಟೆಸ್ಟ್, ಟಿ20 ತಂಡಕ್ಕೆ ನಾಯಕ ಯಾರಿರಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.