ತೂಗುದೀಪ ಶ್ರೀನಿವಾಸ್ ಅವರ ಮೊದಲ ಮನೆಯನ್ನು ಮೊದಲ ಬಾರಿಗೆ ತೋರಿಸುತ್ತೇವೆ ನೋಡಿ, ಇದನ್ನು ಕಟ್ಟಿಸಿಕೊಟ್ಟ ಸ್ಟಾರ್ ನಟನ್ಯಾರು ಗೊತ್ತೇ??

ತೂಗುದೀಪ ಶ್ರೀನಿವಾಸ್ ಅವರ ಮೊದಲ ಮನೆಯನ್ನು ಮೊದಲ ಬಾರಿಗೆ ತೋರಿಸುತ್ತೇವೆ ನೋಡಿ, ಇದನ್ನು ಕಟ್ಟಿಸಿಕೊಟ್ಟ ಸ್ಟಾರ್ ನಟನ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಇತಿಹಾಸವನ್ನು ಕೆದಕಿದರೆ ರಾಜ್ ಕಮಾರ್ , ಕಲ್ಯಾಣ್ ಕುಮಾರ್ ಹೀಗೆ ವಿಂಟೇಜ್ ಯುಗದಲ್ಲಿ ಈ ಚಿತ್ರರಂಗವನ್ನು ಆಳಿದ ನಟ ಸಾಮ್ರಾಟರು ಹಲವಾರು ಜನ ಇದ್ದಾರೆ. ನಾಯಕನಟರು ತಮ್ಮ ಮುಖ್ಯ ಭೂಮಿಕೆಯ ನಟನೆಯ ಮೂಲಕ ಭಕ್ತ ಜನಸಾಗರವನ್ನು ಸಂಪಾದಿಸೋದು ನೀವು ನೋಡರ್ತಿರಾ, ಆದರೆ ನಾಯಕನಟ ಹೊರತಾಗಿ ನೀವು ಅಭಿಮಾನಿಗಳನ್ನು ಹೊಂದಿರುವ ನಟರನ್ನು ನೋಡುವುದು ಅಪರೂಪ.

ಆದರೆ ಈ ಒಬ್ಬ ನಟ ಖಳನಾಯಕನಾಗಿ ಹಾಗೂ ಪೋಷಕನಟನಾಗಿ ಪಾತ್ರ ನಿರ್ವಹಿಸಿದರೂ ಕೂಡ ತಮ್ಮ ಸಿನಿಜೀವನದಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದ್ದರು. ಅವರು ಇನ್ನ್ಯಾರೂ ಅಲ್ಲ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ತಂದೆ ಕನ್ನಡ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ತೂಗುದೀಪ ಶ್ರೀನಿವಾಸ್.1943 ರ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನಲ್ಲಿ ಎಂಟು ಜನ ಒಡಹುಟ್ಟಿದವರೊಂದಿಗೆ ಹುಟ್ಟಿ ಪ್ರೀತಿಯಿಂದ ಬೆಳೆದವರು. ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡರೂ ತೂಗುದೀಪ ಶ್ರೀನಿವಾಸ್ ರವರ ಛಲ ಬಿಡದೆ ಶಿಕ್ಷಣವನ್ನು ಕಲಿಯಲು ಹೋದವರು.

ಬಿ.ಎಸ್ಸಿ . ಕಲಿಯುವ ಸಂದರ್ಭದಲ್ಲಿ ಎಂ.ಪಿ. ಶಂಕರ್ ರವರ ನಾಟಕಗಳಿಂದ ಪ್ರೇರಿತರಾಗಿ ಅವರ ನಾಟಕ ಕಂಪನಿಯನ್ನು ಸೇರಿ ಅಲ್ಲಿಂದ ಭಡ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ ಚಿತ್ರರಂಗದಲ್ಲಿ ಕಷ್ಟ ಪಟ್ಟು ಇಷ್ಟ ಪಟ್ಟು ತಮ್ಮ ಪಾತ್ರದ ಮೂಲಕ ಜನರನ್ನು ರಂಜಿಸಲು ಪ್ರಾರಂಭಿಸಿದರು . ಇವರು ಪಾತ್ರಗಳನ್ನು ಎಷ್ಟು ಸೀರಿಯಸ್ ಆಗಿ ತೆಗೆದು ಕೊಳ್ಳುತ್ತಿದ್ದರೆಂದರೆ ಪಾತ್ರದ ಚಿತ್ರೀಕರಣದ ಸಂದರ್ಭದಲ್ಲಿ ಪಾತ್ರದಲ್ಲಿ ಪರಕಾಯ ಪ್ರವೇಶವನ್ನೇ ಮಾಡಿಬಿಡುತ್ತಿದ್ದರು.ಅವರ ನಟನೆಯನ್ನು ನೋಡಲು ವೀಕ್ಷಕರು ಕಾತುರರಾಗಿ ಕಾಯುತ್ತಿದ್ದರು.

ಹೀರೋ ಎಂಟ್ರಿಗೆ ಬಿದ್ದಷ್ಟೇ ಚಪ್ಪಾಳೆ ಹಾಗೂ. ವಿಶಲ್ ಗಳು ತೂಗುದೀಪ ಶ್ರೀನಿವಾಸ್ ರವರ ಖಳನಾಯಕ ಪಾತ್ರದ ಎಂಟ್ರಿಗೆ ಬೀಳುತ್ತಿತ್ತು. ಕನ್ನಡದ ನಟಸಾರ್ವಭೌಮ ಡಾ. ರಾಜ್ ಕುಮಾರ್ ಸಹ ತಮ್ಮ ಚಿತ್ರದಲ್ಲಿ ತೂಗುದೀಪ ಶ್ರೀನಿವಾಸ್ ರವರನ್ನು ಖಾಯಂ ಇರಿಸಿಕೊಳ್ಳುತ್ತಿದ್ದರು. ಯಾಕೆಂದರೆ ತೂಗುದೀಪ ಶ್ರೀನಿವಾಸ್ ಹಾಗೂ ಅಣ್ಣಾವ್ರ ಸ್ನೇಹ ಅಂತಹ ಗಾಢವಾಗಿತ್ತು. ತೂಗುದೀಪ ಶ್ರೀನಿವಾಸ್ ರವರ ನಿಷ್ಕಲ್ಮಶ ಮನಸ್ಸಿನ ಸ್ನೇಹ ಅಣ್ಣಾವ್ರಿಗೆ ಅವರ ಮೇಲೆ ವಿಶೇಷ ಕಾಳಜಿ ಇಡುವ ಹಾಗೇ ಮಾಡಿತ್ತು. ಒಮ್ಮೆ ತೂಗುದೀಪ ಶ್ರೀನಿವಾಸ್ ರವರು ಮೈಸೂರಿನಲ್ಲಿ ಒಂದೊಳ್ಳೆ ಮನೆ ಕಟ್ಟಬೇಕು ಎಂದು ವಿಚಾರ ಮಾಡಿದಾಗ ಅವರ ಬಳಿ ಹಣದ ಅಭಾವವಿತ್ತು,

ಇದರಿಂದಾಗಿ ಅವರು ಮನೆ ಕಟ್ಟುವ ಯೋಚನೆಯನ್ನು ಬಿಟ್ಟುಬಿಟ್ಟಿದ್ದರು. ಆದರೆ ಇದನ್ನು ತಿಳಿದ ಅಣ್ಣಾವ್ರು ಸ್ನೇಹಿತರಾದ ತೂಗುದೀಪ ಶ್ರೀನಿವಾಸ್ ರವರ ಮನೆ ಕಟ್ಟುವ ಕಾರ್ಯಕ್ಕೆ ಸಾಥ್ ನೀಡಿ ಮೈಸೂರಿನಲ್ಲಿ ತೂಗುದೀಪ ಶ್ರೀನಿವಾಸ್ ರವರ ಹೊಸ ಮನೆ ನಿರ್ಮಾಣಕ್ಕೆ ರೂವಾರಿಯಾದರೂ. ಇದರ ಫಲಿತಾಂಶವಾಗಿ ತೂಗುದೀಪ ಶ್ರೀನಿವಾಸ್ ರವರ ಅಣ್ಣಾವ್ರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ತಮ್ಮ ಮನೆಗೆ ಮುಪಾ ಕೃಪಾ ಎಂಬ ನಾಮಧೇಯ ಇಟ್ಟರು. ಮುಪಾ ಅಂದರೆ ಮುತ್ತುರಾಜ್ ( ಅಣ್ಣಾವ್ರ ನಿಜ ಹೆಸರು ) ಹಾಗೂ ಪಾರ್ವತಮ್ಮ . ಇದಲ್ಲವೇ ಸ್ನೇಹಕ್ಕೆ ನೀಡುವ ಪರಿಶುದ್ಧ ಗೌರವ.

ಮೈಸೂರಿನಲ್ಲಿ ಇರುವಾಗ ತೂಗುದೀಪ ಶ್ರೀನಿವಾಸ್ ರವರು ತಮ್ಮ ಲೂನಾ ದಲ್ಲಿ ಗೆಳೆಯರ ಮನೆಗೆ ಭೇಟಿ ಮಾಡಲು ಹೋಗುತ್ತಿದ್ದರು. ಬಿಡುವಿನ ಸಂದರ್ಭದಲ್ಲಿ ತೂಗುದೀಪ ಶ್ರೀನಿವಾಸ್ ರವರ ಲೂನಾ ಸವಾರಿ ಮೈಸೂರಿನ ಜನರ ಕಣ್ಣನ್ನು ತಣಿಸಿತ್ತು. ಮನೆಯಲ್ಲಿ ಮುದ್ದಿನ ಮಡದಿ , ಚಿತ್ರರಂಗದಲ್ಲಿ ಒಳ್ಳೆಯ ಬೇಡಿಕೆ , ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಸುಖ ಸಂಸಾರದ ಕನಸನ್ನು ಹೊತ್ತು ಸಾಗುತ್ತಿದ ನಟನ ಬದುಕಿನಲ್ಲಿ ವಿಧಿ ಬೇರೆಯದೆ ಆಟ ಆಡಿತ್ತು. ತೂಗುದೀಪ ಶ್ರೀನಿವಾಸ್ ರವರ ಕಿಡ್ನಿ ಸಮಸ್ಯೆಯಿಂದ ಕೆಲವೇ ವರ್ಷಗಳಲ್ಲಿ ವಿಧಿವಶರಾದರು.

ಅದೃಷ್ಟ ವೆಂದರೆ ಚಿತ್ರರಂಗದಲ್ಲಾಗಲೀ ಕರ್ನಾಟಕ ಜನತೆಯಾಗಲೀ ಇಂದಿಗೂ ತೂಗುದೀಪ ಶ್ರೀನಿವಾಸ್ ರವರನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಅವರು ನಟರಾಗಿ ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಕೊಡುಗೆ. ಹಾಗೂ ಅವರ ಪುತ್ರರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ನಿರ್ದೇಶಕನಾಗಿ ದಿನಕರ್ ತೂಗುದೀಪ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಹೆಸರು ಮಾಡಿ ತಮ್ಮ ತಂದೆಯ ಹೆಸರನ್ನು ಕೂಡ ಎತ್ತರದಲ್ಲಿ ರಾರಾಜಿಸುವಂತೆ ಮಾಡಿದ್ದಾರೆ.