ಶ್ರೀಲಂಕಾ ವಿರುದ್ಧ ಯಾವ್ಯಾವ ಆಟಗಾರರನ್ನು ಕಣಕ್ಕೆ ಇಳಿಸಬೇಕು ಎಂದು ಆಯ್ಕೆ ಮಾಡಿ ಹರ್ಷ, ಬೋಗ್ಲೆ. ಸ್ಥಾನ ಪಡೆದ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆಡಲು ಇಂಗ್ಲೆಂಡ್ ಗೆ ತೆರಳಲಿದೆ. ಆ ಟೆಸ್ಟ್ ಮುಗಿದ ನಂತರ ಇಂಗ್ಲೆಂಡ್ ವಿರುದ್ದ ಏಕದಿನ, ಟಿ 20, ಹಾಗೂ ಟೆಸ್ಟ್ ಸರಣಿ ಆಡಲಿದೆ. ಇದೊಂದು ಸುದೀರ್ಘ ಪ್ರವಾಸವಾಗಲಿದೆ. ಇದರ ಮಧ್ಯೆ ಜುಲೈನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ದ 3 ಏಕದಿನ ಹಾಗೂ 5 ಟಿ 20 ಪಂದ್ಯಗಳ ಸರಣಿ ಆಡಲಿದೆ. ಇದಕ್ಕಾಗಿ ಬಿಸಿಸಿಐ ಎ ತಂಡದಲ್ಲಿ ಸ್ಥಾನ ಪಡೆಯದ ಪ್ರತಿಭಾವಂತ ಆಟಗಾರರು ಹಾಗೂ ಬೆಂಚ್ ಕಾಯಿಸಿದವರಿಗೆ ಅವಕಾಶ ನೀಡುತ್ತದೆ ಎಂಬುದನ್ನ ಓದಿರುತ್ತಿರಿ. ಈಗ ಖ್ಯಾತ ಕ್ರಿಕೇಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ , ಶ್ರೀಲಂಕಾವನ್ನು ಅದರ ನೆಲದಲ್ಲಿಯೇ ಮಣಿಸಲು ಈ ತಂಡ ಸೂಕ್ತ ಎಂದು ಒಂದು ತಂಡವನ್ನ ರಚಿಸಿದ್ದಾರೆ. ಆ ತಂಡ ಹೇಗಿದೆ ಎಂಬುದನ್ನ ತಿಳಿದುಕೊಳ್ಳೊಣ ಬನ್ನಿ.

ತಂಡದ ಆರಂಭಿಕರಾಗಿ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಆಡಲಿದ್ದಾರೆ. ಲೆಫ್ಟ್ ಹ್ಯಾಂಡ್ ಮತ್ತು ರೈಟ್ ಹ್ಯಾಂಡ್ ಕಾಂಬಿನೇಷನ್ ಮೊದಲ 15 ಓವರ್ ಗಳಲ್ಲಿ ರನ್ನುಗಳ ಮಳೆಯನ್ನೇ ಸುರಿಸುತ್ತಾರೆ ಎಂಬ ನಂಬಿಕೆ ಹರ್ಷ ಅವರದು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ಕನ್ನಡಿಗ ಮನೀಶ್ ಪಾಂಡೆ, ಕೇರಳದ ವಿಕೇಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇರಲಿದ್ದಾರೆ. ಫಿನಿಶರ್ ಆಗಿ ಕೃನಾಲ್ ಪಾಂಡ್ಯ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ.

ಇನ್ನು ವೇಗದ ಬೌಲರ್ ಗಳಾಗಿ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಾಹರ್ ಇರಲಿದ್ದಾರೆ. ಇವರಿಗೆ ಸಾಥ್ ನೀಡಲು ಹಾರ್ದಿಕ್ ಪಾಂಡ್ಯ, ಅವಶ್ಯಕತೆ ಬಿದ್ದಲ್ಲಿ ಮೂರನೇ ವೇಗಿ ಆಗಿ ಕಾರ್ಯನಿರ್ವಹಿಸಬಹುದು. ಇನ್ನು ಸ್ಪಿನ್ನರ್ ಗಳಾಗಿ ಕುಲ್ – ಚಾ ಜೋಡಿ ಇರಲಿದೆ. 2019ರ ವಿಶ್ವಕಪ್ ನಂತರ ಕುಲ್ ದೀಪ್ ಯಾದವ್ ಹಾಗೂ ಯುಜವೇಂದ್ರ ಚಾಹಲ್ ಒಟ್ಟಾಗಿ ಒಂದು ಪಂದ್ಯದಲ್ಲೂ ಆಡಿಲ್ಲ. ಶ್ರೀಲಂಕಾದಂತಹ ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಖಂಡಿತವಾಗಿಯೂ ಕುಲ್ – ಚಾ ಜೋಡಿ ತನ್ನ ಹಳೇಯ ಕಮಾಲ್ ನ್ನ ಮರುಸೃಷ್ಠಿ ಮಾಡಲಿದೆ ಎಂದು ಹರ್ಷ ಭೋಗ್ಲೆ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಒಟ್ಟು ತಂಡದಲ್ಲಿ ಐವರು ತಜ್ಞ ಬ್ಯಾಟ್ಸ್ ಮನ್ ಗಳು, ನಾಲ್ವರು ತಜ್ಞ ಬೌಲರ್ ಗಳು ಹಾಗೂ ಇಬ್ಬರು ಆಲ್ ರೌಂಡರ್ ಗಳಿದ್ದಾರೆ. ತಂಡ ಯುವ ಹಾಗೂ ಅನುಭವಿಗಳ ಸಮತೋಲಿತವಾಗಿದ್ದು ಖಂಡಿತವಾಗಿಯೂ ಶ್ರೀಲಂಕಾ ನೆಲದಲ್ಲಿ ಕಪ್ ಗೆದ್ದು ಬರಲಿದೆ ಎಂದು ಹರ್ಷ ಭೋಗ್ಲೆ ವಿಶ್ವಾಸ ವ್ಯಕ್ತಪಡಿಸಿದರು. ನಿಮ್ಮ ನೆಚ್ಚಿನ ತಂಡವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ. ಒಟ್ಟಾರೆಯಾಗಿ ತಂಡ ಹೀಗಿದೆ: ಪೃಥ್ವಿ ಶಾ, ಶಿಖರ್ ಧವನ್, ಸೂರ್ಯ ಕುಮಾರ್ ಯಾದವ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ (ನಾಯಕ) ದೀಪಕ್ ಚಾಹರ್, ಕುಲ್ ದೀಪ್ ಯಾದವ್, ಯುಜವೇಂದ್ರ ಚಾಹಲ್.

Post Author: Ravi Yadav