ದರ್ಶನ್ ರವರ ಟಿಆರ್ಪಿ ಬ್ರೇಕ್ ಮಾಡುತ್ತಿದ್ದ ಬೆಳಗೆರೆ ರವರ ವೀಕೆಂಡ್ ವಿತ್ ರಮೇಶ್ ಅನ್ನು ಪ್ರಸಾರ ಮಾಡದೆ ಇರಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದು ಹಲವಾರು ಜನರಿಗೆ ತಮ್ಮ ಜೀವನದಲ್ಲಿ ಮುಂದಿನ ದಾರಿ ತೋರಿಸುವ ವೇದಿಕೆಗಳಾಗಿವೆ. ಇನ್ನು ಇಂತಹ ಕನ್ನಡದ ರಿಯಾಲಿಟಿ ಶೋಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದು. ಹೌದು ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡುತ್ತಿರುವ ಈ ರಿಯಾಲಿಟಿ ಶೋ ಸಾಕಷ್ಟು ಕಲಾವಿದರು ಹಾಗೂ ಸ್ಟಾರ್ ಗಳ ವೈಯಕ್ತಿಕ ಜೀವನದ ಬಗ್ಗೆ ವೀಕ್ಷಕರಿಗೆ ಪರಿಚಯ ಮಾಡಿಕೊಡುತ್ತದೆ

ಇಲ್ಲಿಯವರೆಗೆ ಈ ಶೋ ಕಿಚ್ಚ ಸುದೀಪ್, ದರ್ಶನ್, ಶಿವರಾಜಕುಮಾರ್, ಅನಂತನಾಗ್, ಸುಧಾ ಮೂರ್ತಿ, ಯೋಗರಾಜ್ ಭಟ್, ಅಂಬರೀಶ್, ರಕ್ಷಿತಾ, ಪುನೀತ್ ರಾಜಕುಮಾರ್, ಯಶ್ ಸೇರಿದಂತೆ ಸಾಕಷ್ಟು ನಟರು ಹಾಗೂ ಪ್ರಖ್ಯಾತ ವ್ಯಕ್ತಿಗಳನ್ನು ಅವರ ವೈಯಕ್ತಿಕ ಜೀವನದ ಬಗ್ಗೆ ಕುರಿತು ಹಲವಾರು ಮಾಹಿತಿಗಳನ್ನು ವೀಕ್ಷಕರಿಗೆ ತಿಳಿಸಿಕೊಟ್ಟಿದೆ. ಹೀಗೆ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತು ಅವರು ಬೆಳೆದು ಬಂದ ದಾರಿಯನ್ನು ವೀಕ್ಷಕರ ಮುಂದೆ ತೆರೆದಿಡುತ್ತದೆ.

ಇನ್ನು ಈ ರಿಯಾಲಿಟಿ ಶೋದಲ್ಲಿ ಕನ್ನಡದ ಖ್ಯಾತ ಪತ್ರಕರ್ತ ರವಿಬೆಳಗೆರೆಯವರ ಸಂದರ್ಶನ ಕೂಡ ಮಾಡಲಾಗಿತ್ತು. ಹೌದು ಇತ್ತೀಚಿಗಷ್ಟೇ ಇಹಲೋಕ ತ್ಯಜಿಸಿದ ರವಿಬೆಳಗೆರೆಯವರ ವೈಯಕ್ತಿಕ ಜೀವನದ ಬಗ್ಗೆ ಈ ಶೋ ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟಿತು. ಹೌದು ಬಳ್ಳಾರಿಯಿಂದ ಬೆಂಗಳೂರಿಗೆ ಕೇವಲ ಮುನ್ನೂರು ರೂಪಾಯಿ ಇಟ್ಟುಕೊಂಡು ಬಂದ ರವಿಬೆಳಗೆರೆಯವರು ಬೆಂಗಳೂರಿನಲ್ಲಿ ತಮ್ಮದೇ ಆದ ಪತ್ರಿಕೆಯನ್ನು ಪ್ರಾರಂಭಿಸಿದರು.

ಹೌದು ಮೊದಲ ದಿನಪತ್ರಿಕೆಗಳ ವಿತರಕರಾಗಿ ಕೆಲಸ ಮಾಡಿದವರು ನಂತರ ಹಾಲಿನ ಬೂ-ತ್ ಗಳಲ್ಲಿ ಕೂಡ ಕೆಲಸ ಮಾಡಿದರು. ನಂತರ ತಮ್ಮದೇ ಆದ ಹಾಯ್ ಬೆಂಗಳೂರು ಎಂಬ ದಿನ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಕೆಲವೇ ಕೆಲವು ದಿನಗಳಲ್ಲಿ ಕರ್ನಾಟಕದ ನಂಬರ್1 ದಿನಪತ್ರಿಕೆ ಆಯ್ತು. ಇನ್ನು ಇತ್ತೀಚಿಗಷ್ಟೇ ರವಿ ಬೆಳಗೆರೆ ಅವರನ್ನು ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋದಲ್ಲಿ ಕರೆಸಿ ಸಂದರ್ಶನ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಆ ಎಪಿಸೋಡನ್ನು ತೆಗೆದುಹಾಕಲಾಗಿತ್ತು. ಇನ್ನು ಇದಕ್ಕೆ ಕಾರಣ ಇದೀಗ ತಿಳಿದು ಬಂದಿದ್ದು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ.

ಹೌದು ನಟ ರಮೇಶ್ ಅರವಿಂದ್ ಅವರು ರವಿ ಬೆಳಗೆರೆ ಅವರನ್ನು ಸುಮಾರು 8 ಗಂಟೆಗಳ ಕಾಲ ಸಂದರ್ಶನ ಮಾಡಿದ್ದರು. ಈ ಸಮಯದಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ, ತಂದೆ ತಾಯಿಯ ಬಗ್ಗೆ, ಇಬ್ಬರು ಹೆಂಡತಿಯರ ಬಗ್ಗೆ, ಅವರ ಪತ್ರಿಕೆಯ ಬಗ್ಗೆ ಹೀಗೆ ನಾನಾ ವಿಷಯಗಳನ್ನು ಚರ್ಚಿಸಲಾಗಿತ್ತು. ಆದರೆ ಅದನ್ನು ಎಡಿಟ್ ಮಾಡಿ ಕೇವಲ ನಾಲ್ಕು ಗಂಟೆಯ ಎಪಿಸೋಡ್ ಮಾಡಲಾಗಿತ್ತು.

ಇಷ್ಟೆಲ್ಲಾ ಆದ ಬಳಿಕ ಇನ್ನೇನು ಪ್ರಸಾರ ಮಾಡಬೇಕೆನ್ನುವಷ್ಟರಲ್ಲಿ ವಾಹಿನಿಯ ಮುಂಬೈ ಹೆಡ್ ಫೋನ್ ಮೂಲಕ ಮೂಲಕ ಇದನ್ನು ಪ್ರಸಾರ ಮಾಡದಿರಲು ಆದೇಶ ನೀಡಿದರು. ಏಕೆಂದರೆ ಈ ಹಿಂದೆ ರವಿಬೆಳಗೆರೆ ಅವರು ತಮ್ಮ ಪತ್ರಿಕೆಯಲ್ಲಿ ಸಾಕಷ್ಟು ಅ-ಪ-ಪ್ರ-ಚಾರ ಮಾಡಿದ್ದಾರಂತೆ. ಆದ್ದರಿಂದ ಇವರನ್ನು ಸಂದರ್ಶಿಸಿದ ಎಪಿಸೋಡನ್ನು ಪ್ರಸಾರ ಮಾಡದೆ ತೆಗೆದು ಹಾಕಲಾಗಿತ್ತು. ಇನ್ನು ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Post Author: Ravi Yadav