ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಎಂದರೆ ಒಂಥರ ರಂಗೀನ್ ರಿಯಾಲಿಟಿ ಶೋ. ಕನ್ನಡ ಕಿರುತೆರೆಯ ಇತಿಹಾಸದ ಅತೀ ದೊಡ್ಡ ರಿಯಾಲಿಟಿ ಶೋ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಿರೂಪಣೆಯಲ್ಲಿ ಪ್ರಾರಂಭವಾಗುವ ಶೋ . ನೂರು ದಿನಗಳ ಕಾಲದ ಯುದ್ದದಲ್ಲಿ ಗೆದ್ದವರಿಗೆ ಅರ್ಧ ಕೋಟಿ ನೀಡುವ ಯೋಜನೆಯೇ ಬಿಗ್ ಬಾಸ್ ಎಂದು ಶಾರ್ಟ್ ಆಂಡ್ ಸ್ವೀಟ್ ಆಗಿ ಹೇಳಬಹುದು.
ಈ ಬಾರಿಯ ಬಿಗ್ ಬಾಸ್ ಕನ್ನಡದ 8ನೇ ಸೀಸನ್ ಅದ್ಧೂರಿಯಾಗಿಯೇ ಪ್ರಾರಂಭವಾಗಿ , ಸಲೀಸಾಗಿ ಮುಂದುವರೆದಿತ್ತು. ಇತ್ತ ಕರೋನಾದ ಬಿಸಿಯಿದ್ದರೂ ಅದು ಸ್ಪರ್ಧಿಗಳಿಗೆ ಮುಟ್ಟುತ್ತಿರಲಿಲ್ಲ. ಆದರೆ ಯಾವಾಗ ನಿರೂಪಕರಾದ ಕಿಚ್ಚ ಸುದೀಪ್ ರವರಿಗೆ ಎರಡು ವಾರ ಬೆಂಬಡದೇ ಅನಾರೋಗ್ಯ ಕಾಡಲು ಪ್ರಾರಂಭವಾಯಿತೋ ಆಗ ಬಿಗ್ ಬಾಸ್ ನ 8ನೇ ಸೀಸನ್ ಹಳಿ ಹಿಡಿಯಲು ಪ್ರಾರಂಭವಾಯಿತು. ನಂತರ ಕರೋನಾದ ಬಿಗಿ ನಿಯಮಗಳ ಪ್ರಕಾರ ಬಿಗ್ ಬಾಸ್ ರದ್ದಾಗಿ ಸ್ಪರ್ಧಿಗಳು ಹೊರಬಂದಿದ್ದು ಆಯಿತು.
ಬಿಗ್ ಬಾಸ್ ಗೆ ಹೋದ್ಮೇಲೆ ಜನರ ದೃಷ್ಟಿಯಲ್ಲಿ ಸೆಲಬ್ರೆಟಿ ಸ್ಟೇಟಸ್ ಸಿಗೋದಂತೂ ಗ್ಯಾರಂಟಿ. ಎಲ್ಲರೂ ಅಂದುಕೊಂಡಂತೆ ಬಿಗ್ ಬಾಸ್ ನ ಎಲ್ಲರ ಮೆಚ್ಚುಗೆಯ ಸ್ಪರ್ದಿಗಳು ಮಂಜು ಅಥವಾ ಅರವಿಂದ್ ಆಗಿರಬಹುದು ಎನ್ನಲಾಗುತ್ತಿತ್ತು . ಆದರೆ ನಿಜವಾದ ಅದೃಷ್ಟ ಒಲಿದು ಬಂದಿದ್ದು ಪ್ರಶಾಂತ್ ಸಂಬರ್ಗಿಯವರಿಗೆ. ಹೌದು ಬಿಗ್ ಬಾಸ್ ನ್ನು ಬಿಟ್ಟು ಹೊರಬರುತ್ತಿದ್ದಂತೆ ಪ್ರಶಾಂತ್ ಸಂಬರ್ಗಿಯವರಿಗೆ ಈಗಾಗಲೇ 3 ಚಿತ್ರದ ಆಫರ್ ಬಂದಿದ್ದು ಅದರಲ್ಲಿ ರವಿ ಶ್ರೀವತ್ಸ , ಎನ್ ಕುಮಾರ್ ಹಾಗೂ ಹಂಸಲೇಖ ರವರ ನಿರ್ದೇಶನದಲ್ಲಿ ಮೂಡಿಬರುವ ಚಿತ್ರಗಳಿವು, ಪ್ರಶಾಂತ್ ಸಂಬರ್ಗಿಯವರು ಸೈನ್ ಕೂಡ ಮಾಡಿದ್ದಾಗಿದೆ. ಅಲ್ಲದೇ ಜಾಹೀರಾತು ಆಫರ್ ಕೂಡ ಬಂದಿದೆ ಎನ್ನಲಾಗುತ್ತಿದೆ. ಕೇಳದೆ ಬಂದಿರುವ ಅದೃಷ್ಟದಿಂದಾಗಿ ಪ್ರಶಾಂತ್ ಸಂಬರ್ಗಿಯವರಂತೂ ಫುಲ್ ಖುಷ್ ,ಇದರ ಕುರಿತಂತೆ ನಿಮಗೇನು ಅನ್ನಿಸಿತು ಕಾಮೆಂಟ್ ಮಾಡಿ.