ರಾಹುಲ್ ದ್ರಾವಿಡ್ ಬೈಯೋಪಿಕ್ ಸಿನಿಮಾದಲ್ಲಿ ಬಂದ ಅವಕಾಶವನ್ನು ತಿರಸ್ಕರಿಸಿದ ಕಿಚ್ಚ ಸುದೀಪ್, ಕಾರಣವೇನಂತೆ ಗೊತ್ತಾ??

ರಾಹುಲ್ ದ್ರಾವಿಡ್ ಬೈಯೋಪಿಕ್ ಸಿನಿಮಾದಲ್ಲಿ ಬಂದ ಅವಕಾಶವನ್ನು ತಿರಸ್ಕರಿಸಿದ ಕಿಚ್ಚ ಸುದೀಪ್, ಕಾರಣವೇನಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರೀಡಾ ರಂಗದ ಇತಿಹಾಸದಲ್ಲಿ ಅದೆಷ್ಟೋ ತಾರೆಗಳನ್ನು ನೋಡಿದ್ದೇವೆ. ಭಾರತೀಯ ಕ್ರೀಡೆಯಲ್ಲಿ ಕ್ರಿಕೆಟ್ ನಂ 1ಸ್ಥಾನದಲ್ಲಿದೆ ಎಂದರೆ , ಆ ರಂಗದ ಕ್ರೀಡಾಪಟುಗಳ ಶ್ರಮ ಹಾಗೂ ಸಾಧನೆ ಕ್ರಿಕೆಟ್ ನ್ನು ಇಂದು ಉಚ್ಚ ಮಟ್ಟದಲ್ಲಿರಿಸಿದೆ. ಇಂದಿಗೂ ಲೆಕ್ಕ ಹಾಕಿ ನೋಡಿದರೆ ಕ್ರಿಕೇಟಿಗರಿಗೆ ಸಿಗೋವಷ್ಟು ಸಂಭಾವನೆಯಾಗಲಿ ಹೆಸರಾಗಲೀ ಬೇರೆ ಯಾವ ಕ್ಷೇತ್ರದ ಕ್ರೀಡಾಪಟುಗಳಿಗೂ ಸಿಕ್ಕಿಲ್ಲ.

ಕ್ರಿಕೆಟ್ ಇತಿಹಾಸದಲ್ಲಿ ಕೂಡ ಅದೆಷ್ಟೋ ಮಂದಿ ಕ್ರಿಕೇಟಿಗರು ಮಿಂಚಿ ಮರೆಯಾಗಿದ್ದಾರೆ. ಮೊದಲ ಹಂತದಲ್ಲಿ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ , ನಂತರದಲ್ಲಿ ಸುನೀಲ್ ಗಾವಸ್ಕರ್ , ಕಪಿಲ್ ದೇವ್ ನಂತರ ಅಝರುದ್ದೀನ್ , ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ , ಸೆಹ್ವಾಗ್, ಧೋನಿ , ರೈನಾ, ಕೊಹ್ಲಿ , ರೋಹಿತ್ ಹೀಗೆ ಜನರು ಕ್ರಿಕೇಟಿಗರನ್ನು ಸ್ಟಾರ್ ಮಾಡಿದ ಉದಾಹರಣೆಗಳು ನಮ್ಮ ಕಣ್ಣೆದುರಲ್ಲೇ ಇದೆ.

ಈಗ ನಾವು ಹೇಳೋಕೆ ಹೊರಟಿರೋದು ಭಾರತೀಯ ಕ್ರಿಕೆಟ್ ತಂಡದ ” ದ ವಾಲ್ ” ಎಲ್ಲರ ನೆಚ್ಚಿನ ಜ್ಯಾಮಿ , ಕನ್ನಡ ಮಣ್ಣಿನ ಕ್ರಿಕೆಟಿಗ ರಾಹುಲ್ ದ್ರಾವಿಡ್ ರವರ ಬಗ್ಗೆ. ಪಾಕಿಸ್ತಾನ, ಆಸ್ಟ್ರೇಲಿಯಾ , ಇಂಗ್ಲೆಂಡ್ ಹೀಗೆ ಬಲಿಷ್ಠ ಬೌಲಿಂಗ್ ಪಡೆ ಹೊಂದಿರುವ ತಂಡಗಳೆದುರು ಬಲಿಷ್ಠ ಗೋಡೆಯಂತೆ ನಿಂತು ಭಾರತವನ್ನು ಆದೆಷ್ಟೊ ಬಾರಿ ಸೋಲಿನ ದವಡೆಯಿಂದ ಪಾರು ಮಾಡಿದ ಲೋನ್ ವಾರಿಯರ್ ದ್ರಾವಿಡ್ .

ರಾಹುಲ್ ದ್ರಾವಿಡ್ ಇರೋವಷ್ಟು ದಿನ ಭಾರತೀಯ ಟೆಸ್ಟ್ ಕ್ರಿಕೆಟ್ ನ ಟಾಪ್ ಆರ್ಡರ್ ಬ್ಯಾಟಿಂಗ್ ಸ್ಟ್ರಾಂಗ್ ಆಗಿತ್ತು ಎಂದರೆ . ತಪ್ಪಾಗಲಾರದು. ರಾಹುಲ್ ದ್ರಾವಿಡ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಮೇಲೂ ಸುಮ್ಮನೆ ಕೂತಿರಲಿಲ್ಲ , ಭಾರತೀಯ ಅಂಡರ್ – 19 ಕ್ರಿಕೆಟ್ ತಂಡದ ಕೋಚ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕೆ.ಎಲ್. ರಾಹುಲ್, ರಿಶಭ್ ಪಂತ್ , ಸಂಜು ಸ್ಯಾಮ್ಸನ್ , ಪೃಥ್ವಿ ಶಾ ಹೀಗೆ ನೂರಾರು ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಅದರಲ್ಲಿ ಕೆಲವರು ಭಾರತೀಯ ಕ್ರಿಕೆಟ್ ತಂಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದರೆ, ಕೆಲವರು ಐಪಿಎಲ್ ನಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದರು , ಇನ್ನೂ ಹಲವರು ಅಂತರಾಜ್ಯ ರಣಜಿ ಪಂದ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಈಗಾಗಲೇ ರಾಹುಲ್ ದ್ರಾವಿಡ್ ರವರ ಭಾರತೀಯ ಕ್ರಿಕೆಟ್ ತಂಡದ ಮುಂದಿನ ಅವಧಿಯ ಪ್ರಧಾನ ಕೋಚಾ ಆಗಿ ಆಯ್ಕೆಯಾಗಬೇಕೆನ್ನುವ ಕೂಗು ಜಾಸ್ತಿಯಾಗಿದೆ.ಇದರ ನಡುವೆಯೇ ಇನ್ನೊಂದು ಸುದ್ದಿ ಕೂಡ ಹೊರಬಿದ್ದಿದೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡದ ತಾರೆಗಳಾದ ಅಜರುದ್ದೀನ್ , ಸಚಿನ್ ತೆಂಡೂಲ್ಕರ್, ಧೋನಿ ರವರ ಕುರಿತಂತೆ ಬಯೋಪಿಕ್ ಗಳು ಬಿಡುಗಡೆಯಾಗಿ ಯಶಸ್ವಿಯಾಗಿವೆ ಹಾಗೂ ಈಗ ಕಪಿಲ್ ದೇವ್ ರವರ ಕುರಿತಂತೆ ಕೂಡ ಬಯೋಪಿಕ್ ರೆಡಿಯಾಗುತ್ತಿದೆ. ರಾಹುಲ್ ದ್ರಾವಿಡ್ ರವರ ಕುರಿತಂತೆ ಬಯೋಪಿಕ್ ಕೂಡ ತೆರೆಮರೆಯಲ್ಲಿಯೇ ಸಜ್ಜಾಗುವ ಸೂಚನೆ ಸಿಕ್ಕಿದೆ.

ಯಾಕೆಂದರೆ ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ರವರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯ ಸಂದರ್ಶನದಲ್ಲಿ ಸ್ವತಃ ಕಿಚ್ಚ ಸುದೀಪ್ ರವರೇ ಹೇಳಿದ ಮಾತು ” ನನಗೆ ರಾಹುಲ್ ದ್ರಾವಿಡ್ ರವರ ಬಯೋಪಿಕ್ ಗೆ ಅವಕಾಶ ಬಂದಿತ್ತು. ಆದರೆ ಅವರ ಪಾತ್ರಕ್ಕೆ ಯುವ ನಟರು ಸೂಕ್ತವಾದ ಆಯ್ಕೆ. ನಾನು ಕೂಡ ರಾಹುಲ್ ರವರ ಅಭಿಮಾನಿಗಳಲ್ಲೊಬ್ಬ ಹಾಗಾಗಿ ಅವರ ಪಾತ್ರವನ್ನು ಯಂಗ್ ನಟ ನಿರ್ವಹಿಸಿದರೆ ಪರಿಪೂರ್ಣವಾಗಬಹುದು. ನಾನು ಕೂಡ ಅವರ ಬಯೋಪಿಕ್ ನೋಡಲು ಕಾತರನಾಗಿದ್ದೇನೆ ಎಂದರು. ನಿಮಗೇನನ್ನಿಸುತ್ತಿದೆ ಸ್ನೇಹಿತರೇ, ರಾಹುಲ್ ದ್ರಾವಿಡ್ ರವರ ಪಾತ್ರವನ್ನು ಯಾರು ಸೂಕ್ತವಾಗಿ ನಿರ್ವಹಿಸಬಲ್ಲರು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.