ಹಿರಿಯರಿಂದ ಹಿಡಿದು ಮಕ್ಕಳವರೆಗೂ ಬಾಯಿ ಚಪ್ಪರಿಸಿ ತಿನ್ನುವ ಮಶ್ರೂಮ್ ಫ್ರೈಡ್ ರೈಸ್ ಮಾಡುವುದು ಹೇಗೆ ಗೊತ್ತೇ??

ಹಿರಿಯರಿಂದ ಹಿಡಿದು ಮಕ್ಕಳವರೆಗೂ ಬಾಯಿ ಚಪ್ಪರಿಸಿ ತಿನ್ನುವ ಮಶ್ರೂಮ್ ಫ್ರೈಡ್ ರೈಸ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು 10 ನಿಮಿಷಗಳಲ್ಲಿ ಹೋಟೆಲ್ ಶೈಲಿಯಲ್ಲಿ ಮಶ್ರೂಮ್ ಫ್ರೈಡ್ ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಸಾಮಾನ್ಯ ವಾಗಿ ನಾವು ಹೊರಡಗೆಯ ತಿನಿಸನ್ನು ಇಷ್ಟ ಪಡುತ್ತೇವೆ, ಆದರೆ ಅದೇ ರೀತಿಯಲ್ಲಿ ಮನೆಯಲ್ಲಿ ಮಾಡಿಕೊಂಡರೆ,ಆರೋಗ್ಯ ಹಾಗೂ ರುಚಿ ಎರಡು ಸಿಗ್ಗುತ್ತದೆ ಅಲ್ಲದೆ, ಹಾಗಿದ್ದರೇ ಇನ್ಯಾಕೆ ತಡ ಬನ್ನಿ ಮಶ್ರೂಮ್ ಮಶ್ರೂಮ್ ಫ್ರೈಡ್ ರೈಸ್ ಮಾಡುವುದು ಹೇಗೆ ಎಂದು ತಿಳಿದು ಕೊಳ್ಳೋಣ.

ಹೋಟೆಲ್ ಶೈಲಿಯಲ್ಲಿ ಮಶ್ರೂಮ್ ಫ್ರೈಡ್ ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು: 1 ಲೋಟ ಅಳತೆಯ ಅಕ್ಕಿಯಲ್ಲಿ ಮಾಡಿದ ಬಾಸುಮತಿ ಅನ್ನ, 100ಗ್ರಾಂ ಮಶ್ರೂಮ್, 1 ಈರುಳ್ಳಿ, 1 ಕ್ಯಾಪ್ಸಿಕಂ, 10 ಹುರುಳಿಕಾಯಿ, 4 ಹಸಿಮೆಣಸಿನಕಾಯಿ, 3 ಚಮಚ ಎಣ್ಣೆ, 4 – 5 ಬೆಳ್ಳುಳ್ಳಿ ಎಸಳು, 1 ಚಮಚ ವೈಟ್ ಪೆಪ್ಪರ್ ಪೌಡರ್, 1ಚಮಚ ಬ್ಲಾಕ್ ಪೆಪ್ಪರ್ ಪೌಡರ್, 1 ಚಮಚ ಸೋಯಾ ಸಾಸ್, 1 ಚಮಚ ವಿನೆಗರ್, 1 ಚಮಚ ಚಿಲ್ಲಿ ಸಾಸ್, ರುಚಿಗೆ ತಕ್ಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ಮಶ್ರೂಮ್ ಫ್ರೈಡ್ ರೈಸ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಮಶ್ರೂಮ್, ಸಣ್ಣಗೆ ಹಚ್ಚಿದ ಕ್ಯಾಪ್ಸಿಕಮ್, ಸಣ್ಣಗೆ ಹಚ್ಚಿದ ಹುರುಳಿಕಾಯಿ, ಸಣ್ಣಗೆ ಹಚ್ಚಿದ ಕ್ಯಾರೆಟ್ ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ 3 – 4 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮಾಡಿಕೊಂಡ ಅನ್ನ, ವೈಟ್ ಪೆಪ್ಪರ್ ಪೌಡರ್, ಬ್ಲಾಕ್ ಪೆಪ್ಪರ್ ಪೌಡರ್, ಚಿಲ್ಲಿ ಸಾಸ್, ವಿನೆಗರ್, ಸೋಯಾ ಸಾಸ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹೋಟೆಲ್ ಶೈಲಿಯಲ್ಲಿ ಮಶ್ರೂಮ್ ಫ್ರೈಡ್ ರೈಸ್ ಸವಿಯಲು ಸಿದ್ದ.