ಯುವರಾಜ್ ರವರ ಸ್ಥಾನ ತುಂಬುವ ಆಟಗಾರ ಸಿಕ್ಕ ಎಂದ ವೆಂಕಟೇಶ್ ಪ್ರಸಾದ್ ! ಆ ಕನ್ನಡಿಗ ಯಾರು ಗೊತ್ತೆ??

ಯುವರಾಜ್ ರವರ ಸ್ಥಾನ ತುಂಬುವ ಆಟಗಾರ ಸಿಕ್ಕ ಎಂದ ವೆಂಕಟೇಶ್ ಪ್ರಸಾದ್ ! ಆ ಕನ್ನಡಿಗ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವಕಪ್ ಹೀರೋ ಎಂದ ತಕ್ಷಣ ಇಡೀ ಭಾರತದಲ್ಲಿ ಒಬ್ಬ ಆಟಗಾರನ ಹೆಸರು ಮಾತ್ರ ಕೇಳಿ ಬರುತ್ತದೆ. ಪ್ರಮುಖ ಟೂರ್ನಮೆಂಟ್ ಗಳಲ್ಲಿ ಭಾರತವನ್ನು ಗೆಲುವಿನ ದಡಕೆ ಸೇರಿಸುವ ಕೆಲವೇ ಕೆಲವು ಆಟಗಾರರಲ್ಲಿ ಯುವರಾಜ ಸಿಂಗ್ ರವರ ಹೆಸರು ಅಗ್ರಸ್ಥಾನದಲ್ಲಿ ಇರುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ತಂಡ ಸಂಕಷ್ಟದಲ್ಲಿದ್ದಾಗ ಏಕಪಕ್ಷೀಯವಾಗಿ ಗೆಲುವಿನ ದಡ ಸೇರಿಸುವುದರಲ್ಲಿ ಯುವರಾಜ ಸಿಂಗ್ ಪ್ರಸಿದ್ಧರು.

ಹಲವಾರು ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಮಾಧ್ಯಮ ಕ್ರಮಾಂಕದ ಆಧಾರ ಸ್ಟ್ಯಾಮ್ಭ ವಾಗಿದ್ದ ಯುವರಾಜ್ ಸಿಂಗ್ ರವರು, ಭಾರತ ತಂಡ ಗೆಲ್ಲುವ ಸಾಧ್ಯತೆಯೇ ಇಲ್ಲದಂತಹ ಪಂದ್ಯಗಳನ್ನು ಕೂಡ ಗೆಲ್ಲಿಸಿಕೊಟ್ಟಿದ್ದಾರೆ. ಇವರ ಹಲವಾರು ಇನ್ನಿಂಗ್ಸ್ ಗಳು ಈಗಲೂ ಕೂಡ ನಮ್ಮ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ, ಅದರಲ್ಲಿಯೂ ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಒಮ್ಮೆ ಆಸ್ಟ್ರೇಲಿಯಾ ದೇಶದ ವಿರುದ್ಧ ಪಂದ್ಯ ಗೆಲ್ಲಿಸಿದ ರೀತಿ ಹಾಗೂ ಟಿ 20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ 6 ಬಾಲ್ ಗಳಿಗೆ 6 ಸಿಕ್ಸರ್ ಗಳಿಸಿದ ರೀತಿಯಂತೂ ಮರೆಯಲು ಸಾಧ್ಯವೇ ಇಲ್ಲ.

ಹೀಗೆ ಹೇಳುತ್ತಾ ಹೋದರೆ ಇವರು ಗೆಲ್ಲಿಸಿದ ಪಂದ್ಯಗಳ ಆಟಗಳ ಕುರಿತು, ಸಮಯ ಸಾಕಾಗುವುದಿಲ್ಲ, ಇನ್ನು ಇವರು ಅಂತಾರಾಷ್ಟ್ರೀಯ ತಂಡವಷ್ಟೇ ಅಲ್ಲದೆ, 19 ವರ್ಷದೊಳಗಿನ ವಿಶ್ವಕಪ್ ನಲ್ಲಿಯೂ ಕೂಡ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗೆ ಹಲವಾರು ವರ್ಷಗಳ ಭಾರತ ತಂಡದ ಸೇವೆ ಮಾಡಿ, ಕೊನೆಗೆ ಕ್ಯಾನ್ಸರ್ ಕೂಡ ಗೆದ್ದು ಬಂದಿದ್ದರು. ಇದೀಗ ನಿವೃತ್ತಿ ಪಡೆದು, ಪ್ರತಿ ನಿತ್ಯ ನೂರಾರು ಜನರಿಗೆ ಊಟ ಹಾಕುತ್ತಿದ್ದಾರೆ. ಆದರೆ ಇಷ್ಟೆಲ್ಲ ಸಾಧನೆ ಮಾಡಿದ ಇವರು ಕೊನೆಯ ದಿನಗಳಲ್ಲಿ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರ ಹೋದರು.

ಹೌದು ಇವರು ನಿವೃತ್ತಿ ಪಡೆದುಕೊಂಡ ಫಾರ್ಮ್ ನಲ್ಲಿ ಇರಲಿಲ್ಲ ಆದರೆ ಇವರ ಲೆಜೆಂಡರಿ ಆಟವನ್ನು ಯಾರೂ ಕೂಡ ಮರೆಯಲು ಸಾಧ್ಯವಿಲ್ಲ. ಪ್ರಮುಖ ಟೂರ್ನಮೆಂಟ್ ಗಳಲ್ಲಿ ಇವರು ನೀಡಿದ ಪ್ರದರ್ಶನವಂತೂ ಅದ್ಭುತ. ಇನ್ನು ಹೀಗಿರುವಾಗ ಇವರು ನಿವೃತ್ತಿಯಾದ ಮೇಲೆ ಮತ್ತೊಬ್ಬರು ಯುವರಾಜ್ ಸಿಂಗ್ ತಂಡಕ್ಕೆ ಸಿಗಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದು ಸತ್ಯವು ಆದಂತಿದೆ, ಯಾಕೆಂದರೆ ಭಾರತ ಕ್ರಿಕೆಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಹಲವಾರು ವರ್ಷಗಳಿಂದ ಕಾಯಂ ಆಟಗಾರ ಸಿಕ್ಕಿಲ್ಲ.

ಇರುವುದರಲ್ಲಿ ಶ್ರೇಯಸ್ ಅಯ್ಯರ್ ರವರು ಕೊಂಚ ಪರವಾಗಿಲ್ಲ, ಅವರನ್ನು ಹೊರತು ಪಡಿಸಿದರೆ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ ಸೇರಿದಂತೆ ಹಲವಾರು ಆಟಗಾರು ಈ ಕ್ರಮಾಂಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿದರು, ಆದರೆ ಇವರ ಸ್ಥಾನವನ್ನು ತುಂಬುವುದರಲ್ಲಿ ಯಾರು ಕೂಡ ಯಶಸ್ವಿಯಾಗಲಿಲ್ಲ, ಆದರೆ ಇದೀಗ ಆ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ರವರು ಪರಿಹಾರ ಕಂಡು ಕೊಂಡಂತೆ ಕಾಣುತ್ತಿದೆ.

ಇದೀಗ ಮಾಜಿ ಕ್ರಿಕೆಟಿಗ ಹಾಗೂ ನಮ್ಮ ನಿಮ್ಮೆಲ್ಲರ ನೆಚ್ಚಿನ ವೆಂಕಟೇಶ್ ಪ್ರಸಾದ್ ರವರು ಮಾತನಾಡಿ ಭಾರತ ತಂಡಕ್ಕೆ ಯುವರಾಜ ಸಿಂಗ್ ಸ್ಥಾನವನ್ನು ತುಂಬುವಂತಹ ಆಟಗಾರ ಒಬ್ಬ ಸಿಕ್ಕಿದ್ದಾರೆ, ಆತ ಇತ್ತೀಚಿನ ಐಪಿಎಲ್ ದಿನಗಳಲ್ಲಿ ಬಹಳ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮತ್ಯಾರು ಅಲ್ಲ ಅವನೇ ದೇವದತ್ತ ಪಡಿಕಲ್, ಖಂಡಿತ ಈತನು ಒಮ್ಮೆ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರೆ ಯುವರಾಜ ಸಿಂಗ್ ಸ್ಥಾನವನ್ನು ಯಶಸ್ವಿಯಾಗಿ ತುಂಬುತ್ತಾನೆ ಎಂದು ಯುವ ಆಟಗಾರನ ಕುರಿತು ಭರವಸೆಯ ಮಾತುಗಳನ್ನು ಆಡಿದ್ದಾರೆ. ಈ ಆಯ್ಕೆಯ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.