ಪ್ರಿಯಾಂಕ ತಿಮ್ಮೇಶ್ ಅವರಿಗೆ ನೀವು ಶಮಂತ್ ಅವರನ್ನು ಮದುವೆಯಾಗುತ್ತೀರಾ? ಎಂದಾಗ ನೀಡಿದ ಷಾಕಿಂಗ್ ಉತ್ತರವೇನು ಗೊತ್ತೇ??

ಪ್ರಿಯಾಂಕ ತಿಮ್ಮೇಶ್ ಅವರಿಗೆ ನೀವು ಶಮಂತ್ ಅವರನ್ನು ಮದುವೆಯಾಗುತ್ತೀರಾ? ಎಂದಾಗ ನೀಡಿದ ಷಾಕಿಂಗ್ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಕನ್ನಡದ ಬಿಗ್ ಬಾಸ್ ವಿಶೇಷ ರೀತಿಯಾಗಿತ್ತು. ಏಕೆಂದರೆ ಹಲವಾರು ಘಟನೆಗಳು ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿ ನಡೆದಿದ್ದವು. ಹೌದು ಈ ಬಾರಿಯ ಬಿಗ್ ಬಾಸ್ ತಡವಾಗಿ ಪ್ರಾರಂಭವಾಗಿದ್ದು, ಕಿಚ್ಚ ಸುದೀಪ್ ಅವರು ಮೂರು ವಾರಗಳವರೆಗೆ ಬರದೇ ಇದ್ದದ್ದು, ಬಿಗ್ ಬಾಸ್ ಮಧ್ಯದಲ್ಲಿ ನಿಂತು ಹೋಗಿದ್ದು ಹೀಗೆ ಹಲವಾರು ಘಟನೆಗಳು ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿ ನಡೆದವು.

ಅಷ್ಟೇ ಅಲ್ಲದೆ ಪ್ರತಿ ಸೀಸನ್ ನಲ್ಲಿ ಕೇವಲ ಒಂದೊಂದು ಜೋಡಿ ಮಾತ್ರ ಸುದ್ದಿಯಾಗುತ್ತಿತ್ತು. ಆದರೆ ಈ ಸೀಸನಲ್ಲಿ ಮೂರು ಜೋಡಿಗಳು ಸುದ್ದಿಯಲ್ಲಿವೆ. ಈ ಮೂಲಕ ಇದು ಕೂಡ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲನೆಯದಾಗಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹುಡುಗರು ಹುಡುಗಿಯರನ್ನು ಹಾಗೂ ಹುಡುಗಿಯರು ಹುಡುಗರ ಹಿಂದೆ ಬಿದ್ದರೆ ಮಾತ್ರ ವಿಜೇತರಾಗಲು ಸಾಧ್ಯ ಎಂಬ ಭಾವನೆ ಎಲ್ಲರಲ್ಲಿ ಮೂಡಿತ್ತು. ಅಷ್ಟೇ ಅಲ್ಲದೇ ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಕೂಡ ಆಗಿತ್ತು. ಏಕೆಂದರೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಹುಡುಗರು ಹುಡುಗಿಯರ ಹಿಂದೆ ಸುತ್ತುತ್ತಿದ್ದರು.

ಇದೆಲ್ಲ ನೋಡಿ ವೀಕ್ಷಕರು ಸಾಕಷ್ಟು ಪ್ರೇಮ ಕಹಾನಿಗಳು ಹೊರಬರುತ್ತವೆ ಎಂದು ಕುತೂಹಲದಿಂದ ನೋಡುತ್ತಿದ್ದರು. ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಇದು ಒಂದು ಟ್ರೆಂಡ್ ಆಗಿ ಬೆಳೆದಿದೆ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಈ ಬಾರಿ ಬಿಗ್ ಬಾಸ್ ಸೀಸನ್ ನಲ್ಲಿ ಮೂರು ಜೋಡಿಗಳು ಸುದ್ದಿಯಾಗಿದೆ. ಬಿಗ್ ಬಾಸ್ ಪ್ರಾರಂಭದ ದಿನಗಳಲ್ಲಿ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ಅವರ ಜೋಡಿ, ಮಧ್ಯಂತರದಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಅವರ ಜೋಡಿ, ಇನ್ನು ಕೊನೆಯ ದಿನಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಪ್ರಿಯಂಕ ತಿಮ್ಮೇಶ್ ಹಾಗೂ ಶಮಂತ್ ಅವರ ಜೋಡಿ ಸುದ್ದಿಯಾದವು

ಮೊದಮೊದಲು ಮಂಜು ಹಾಗೂ ದಿವ್ಯ ಸುರೇಶ್ ಅವರು ಜೋಡಿಯಾಗಿ ಪ್ರೀತಿ ಮದುವೆ ಹೀಗೆ ಸಾಕಷ್ಟು ವಿಷಯಗಳಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದರು. ನಂತರ ಬಿಗ್ ಬಾಸ್ ಮನೆಯ ಟಾಸ್ಕ್ ಗಳ ಮೂಲಕ ಅರವಿಂದ್ ಹಾಗೂ ದಿವ್ಯ ಉರುಡುಗ ಅವರ ಪರಿಚಯವಾಗಿ, ಮದುವೆಯ ವಿಷಯಕ್ಕೂ ಕೂಡ ಹೋಗಿದ್ದುಂಟು. ಇದೀಗ ಪ್ರಿಯಂಕ ತಿಮ್ಮೇಶ್ ಹಾಗೂ ಶಮಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಹೌದು ಇನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ನಟಿ ಪ್ರಿಯಾಂಕ ತಿಮ್ಮೇಶ್ ಅವರು ಸಾಕಷ್ಟು ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ನೀವು ಹಾಗೂ ಸಂಬಂಧ ಅವರ ಜೋಡಿ ತುಂಬಾ ಚೆನ್ನಾಗಿದೆ… ಅವರನ್ನು ನೀವು ಮದುವೆಯಾಗುತ್ತೀರಾ ಎಂದು ಕೇಳಿದ್ದಾರೆ. ಇನ್ನು ಈ ಪ್ರಶ್ನೆಗೆ ಉತ್ತರಿಸಿದ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ‘ನಾನು ಕುಳ್ಳಿ ಅವನು ಹೈಟ್’ ಎಂದು ಇಕ್ಕಟ್ಟಿನ ಉತ್ತರವನ್ನು ನೀಡಿದ್ದಾರೆ. ಇನ್ನು ಇವರಿಬ್ಬರ ಜೋಡಿ ನಿಜಜೀವನದಲ್ಲಿ ಒಂದಾಗುತ್ತದಾ? ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.