70 ಕೋಟಿ ಆಸ್ತಿ ನೀಡಿ ಮದುವೆಯಾಗುತ್ತೇನೆ, ಆದರೆ ಭಾರತೀಯನೇ ಬೇಕು ಎಂದ ಮಾಡೆಲ್, ಈಕೆಯ ಶರತ್ತುಗಳೇನು ಗೊತ್ತೇ??

70 ಕೋಟಿ ಆಸ್ತಿ ನೀಡಿ ಮದುವೆಯಾಗುತ್ತೇನೆ, ಆದರೆ ಭಾರತೀಯನೇ ಬೇಕು ಎಂದ ಮಾಡೆಲ್, ಈಕೆಯ ಶರತ್ತುಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಸಂಸ್ಕೃತಿಯಲ್ಲಿ ಮದುವೆಯೆಂಬುದು ಒಂದು ಪವಿತ್ರವಾದ ಬಂಧನ. ಗಂಡು-ಹೆಣ್ಣಿನ ಮಧ್ಯೆ ಬಾಂಧವ್ಯವನ್ನು ಸದೃಢವಾಗಿ ಬೆಸೆಯಲು ಈ ಮಾಂಗಲ್ಯ ಎಂಬ ದಾರ ಬೇಕೇ ಬೇಕು. ಇನ್ನು ಭಾರತದಲ್ಲಿ ಮದುವೆಯೆಂಬುದು ಏಳೇಳು ಜನ್ಮದವರೆಗೂ ಕೂಡ ಮುಂದುವರೆವಂತಹ ಒಂದು ಶ್ರೇಷ್ಠ ಸಂಬಂಧ ಎಂದು ಪರಿಗಣಿಸಲಾಗುತ್ತದೆ. ಇನ್ನು ಭಾರತದಲ್ಲಿ ಮದುವೆ ಜಗತ್ತಿನಲ್ಲಿಯೇ ಬಹಳ ವಿಶಿಷ್ಟವಾದ ಸ್ಥಾನಮಾನ ಹೊಂದಿದೆ.

ಹೀಗಾಗಿ ಅನೇಕ ಅಂತರಾಷ್ಟ್ರೀಯ ಯುವತಿಯರು ಭಾರತೀಯ ಯುವಕನನ್ನು ಮದುವೆಯಾಗಬೇಕೆಂಬ ಆಸೆಯನ್ನು ವ್ಯಕ್ತ ಪಡಿಸುತ್ತಲೇ ಇರುತ್ತಾರೆ. ಏಕೆಂದರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಚ್ಛೇದನ ಎಂಬುದು ತೀರ ವಿರಳವಾದ ಮಾತು. ಅಷ್ಟೇ ಅಲ್ಲದೆ ಭಾರತೀಯರು ಜೀವನಪೂರ್ತಿ ಒಬ್ಬರಿಗೊಬ್ಬರು ಆಧಾರವಾಗಿ ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಇದು ಅಷ್ಟೇ ಸತ್ಯ ಕೂಡ ಹೌದು. ಇದೀಗ ಅಂತರಾಷ್ಟ್ರೀಯ ಮಾಡೆಲ್ ಒಬ್ಬರು ಭಾರತೀಯ ಹುಡುಗ ಬೇಕೆಂದು ಹೇಳಿದ್ದಾರಂತೆ. ಆದರೆ ಆಕೆಯನ್ನು ಮದುವೆಯಾಗಲು ಕೆಲವು ಷರತ್ತುಗಳನ್ನು ಕೂಡ ವಿಧಿಸಿದ್ದಾರೆ.

ಹೌದು ಅಂತರಾಷ್ಟ್ರೀಯ ಮಾಡೆಲ್ ಆಗಿರುವ ರಷ್ಯಾ ಮೂಲದ ಮಹಿಳೆಯೊಬ್ಬರು ತನಗೆ ಮದುವೆಯಾಗಲು ಭಾರತೀಯ ಹುಡುಗ ಬೇಕು ಎಂದು ಮ್ಯಾಟ್ರಿಮೋನಿ ವೆಬ್ಸೈಟಿನಲ್ಲಿ ಪೋಸ್ಟ್ ಮಾಡಿದ್ದಾರೆ. ಹೌದು ಅಂತರಾಷ್ಟ್ರೀಯ ಮಾಡೆಲ್ ಆಗಿರುವ ಇವರು ಸುಮಾರು 70 ಕೋಟಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ತನ್ನ ಮದುವೆಯಾದರೆ ಸಂಪೂರ್ಣ ಆಸ್ತಿ ತನ್ನ ಗಂಡನಿಗೆ ಹೋಗುತ್ತದೆ ಎಂದು ಕೂಡ ಹೇಳಿದ್ದಾರೆ.

ಇಷ್ಟೆಲ್ಲಾ ಆಸೆ ತೋರಿಸಿ ಸುಂದರ ಬೆಡಗಿ ಕೆಲವು ಷರತ್ತುಗಳನ್ನು ಕೂಡ ನೀಡಿದ್ದಾಳೆ. ಇನ್ನು ಆ ಶರತ್ತುಗಳಿಗೆ ಭಾರತೀಯ ವರ ಒಪ್ಪಿಕೊಂಡರೆ ಮಾತ್ರ ಅವಳು ಮದುವೆಯಾಗುತ್ತಾಳಂತೆ. ಹೌದು ಸುಂದರ ಬೇಡಿಕೆಯನ್ನು ಮದುವೆಯಾದವರಿಗೆ 70 ಕೋಟಿಗಿಂತ ಹೆಚ್ಚು ಆಸ್ತಿ ಆಕೆಯ ಪತಿಯ ಪಾಲಾಗುತ್ತದೆ. ಇನ್ನು ಆಕೆ ವಿಧಿಸಿರುವ ಷರತ್ತುಗಳನ್ನು ನೋಡುವುದಾದರೆ, ಭಾರತದಲ್ಲಿ ಒಂದು ಬಾರಿ ಮದುವೆಯಾದರೆ ವಿಚ್ಛೇದನ ಪಡೆದುಕೊಳ್ಳುವುದಿಲ್ಲ ಅದು ನಿಜವಾದ ಪ್ರೀತಿ ಅನ್ನಿಸುತ್ತದೆ. ಇನ್ನು ತನ್ನನ್ನು ಮದುವೆಯಾಗುವ ವ್ಯಕ್ತಿ ನನ್ನ ಜೊತೆಗೆ ಸಂಪೂರ್ಣ ಜೀವನ ಇರುತ್ತೇನೆ ಎಂದು ಮಾತು ನೀಡಿ ಆತನನ್ನು ಜೀವನಪೂರ್ತಿ ಪ್ರೀತಿಸಬೇಕು.

ನಾನು ತಪ್ಪು ಮಾಡಿದರೆ ಅಥವಾ ಏನಾದರೂ ಕಡಿಮೆಯಾದರೆ ಅದನ್ನು ಸರಿಪಡಿಸಿ ನನ್ನ ಜೊತೆ ಜೀವನ ಕಳೆಯಬೇಕು ಹಾಗೂ ನನ್ನನ್ನು ಗೌರವಿಸಿ ಪ್ರೀತಿಸಬೇಕು ಎಂಬ ಷರತ್ತುಗಳನ್ನು ಸುಂದರ ಬೆಡಗಿ ನೀಡಿದ್ದಾಳೆ. ಏನೇ ಹೇಳಿದರು ಕೂಡ ಈ ಶರತ್ತುಗಳನ್ನು ಒಪ್ಪಿಕೊಂಡವರಿಗೂ ಆ ಸುಂದರ ಬೆಡಗಿ ಹಾಗೂ ಆಕೆಯ ಆಸ್ತಿ ಸಂಪೂರ್ಣವಾಗಿ ದೊರೆಯುತ್ತದೆ. ಇನ್ನು ಆಕೆಯನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆ ಎಂಬುದನ್ನು ಕಾದು ನೋಡ ಬೇಕಾಗಿದೆ.