ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಟಾಪ್ -10 ಧಾರವಾಹಿಗಳು ಯಾವುವು ಗೊತ್ತಾ?? ಇವುಗಳನ್ನು ನಿಮ್ಮ ಫೇವರಿಟ್ ಯಾವುದು??

ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಟಾಪ್ -10 ಧಾರವಾಹಿಗಳು ಯಾವುವು ಗೊತ್ತಾ?? ಇವುಗಳನ್ನು ನಿಮ್ಮ ಫೇವರಿಟ್ ಯಾವುದು??

ನಮಸ್ಕಾರ ಸ್ನೇಹಿತರೇ ಕಿರುತೆರೆ ಈಗ ದೊಡ್ಡ ಉದ್ಯಮವಾಗಿ ಬೆಳೆದಿದೆ. ಅದು ಧಾರವಾಹಿಗಳಂತೂ ಜನರ ಜೀವನದ ಜೊತೆಗೆ ಬೆರೆದು ಬಿಟ್ಟಿವೆ. ಮಹಿಳೆಯರಂತೂ ಧಾರಾವಾಹಿಗಳ ಪಾತ್ರದೊಳಗ್ಗೆ ತಲ್ಲೀನರಾಗಿಬಿಡುತ್ತಾರೆ. ಅಷ್ಟರ ಮಟ್ಟಿಗೆ ಕಿರುತೆರೆ ಜನರನ್ನ ಹಿಡಿದಿಡುವ ಕೆಲಸ ಮಾಡುತ್ತಿದೆ. ಕನ್ನಡ ಕಿರುತೆಯ ಮೊದಲ ಧಾರವಾಹಿ ಮನೆತನ. ಅದು ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅದೇ ರೀತಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಿ ವೀಕ್ಷಕರಿಂದ ಉತ್ತಮ ಎಂಬ ಬಿರುದು ಪಡೆದ ಟಾಪ್ -10 ಧಾರವಾಹಿಗಳು ಈ ಕೆಳಗಿನಂತಿವೆ.

ಟಾಪ್ -10 : ವಠಾರ – ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಧಾರವಾಹಿ 1000 ಕ್ಕಿಂತಲೂ ಹೆಚ್ಚು ಎಪಿಸೋಡ್ ಪ್ರಸಾರವಾಗಿತ್ತು. ಉದಯ ಟಿವಿಯ ಅಂದಿನ ಫೆವರೇಟ್ ಸೀರಿಯಲ್ಲುಗಳೊಲ್ಲಂದು ಇದು. ವಠಾರದಲ್ಲಿರುವ ಕುಟುಂಬಗಳ ನಡುವಿನ ಕತೆಯನ್ನ ತೋರಿಸಲಾಗಿತ್ತು.

ಟಾಪ್ -9 : ಗುಡ್ಡದ ಭೂತ – ಖ್ಯಾತ ಪಂಚಭಾಷಾ ನಟ ಪ್ರಕಾಶ್ ರೈ ಅಭಿನಯಿಸಿದ ಧಾರವಾಹಿ. ವಾರಕ್ಕೊಂದು ಕಂತು ಪ್ರಸಾರವಾಗುತ್ತಿತ್ತು. ಪತ್ತೇದಾರಿ ಶೈಲಿಯ ಧಾರವಾಹಿ ಆಗಿನ ಕಾಲದಲ್ಲಿಯೇ ಜನರನ್ನ ಹಿಡಿದಿಡುವಲ್ಲಿ ಸಫಲವಾಯಿತು. ಈ ಧಾರವಾಹಿಯನ್ನೇ ಮಾರ್ಪಾಡು ಮಾಡಿ ರಂಗಿತರಂಗ ಎಂಬ ಸಿನಿಮಾ ಸಹ ಬಂತು.

ಟಾಪ್ – 8 ಮತ್ತು ಟಾಪ್ 7 : ಬದುಕು – ಈಟಿವಿಯಲ್ಲಿ ಪ್ರಸಾರವಾದ ಧಾರವಾಹಿ. ಅತಿ ಹೆಚ್ಚು ಎಪಿಸೋಡುಗಳು ಪ್ರಸಾರವಾಗಿತ್ತು. ಹಲವಾರು ಭಾರಿ ನಟನಟಿಯರು ಬದಲಾಗಿದ್ದ ಧಾರವಾಹಿ ಇದು. ಇನ್ನು ಏಳನೇ ಸ್ಥಾನದಲ್ಲಿ ಕನ್ನಡತಿ- ಹೌದು ಇತ್ತೀಚಿಗೆ ಆರಂಭವಾಗಿದ್ದರೂ ಕೂಡ ಬಹಳ ಅರ್ಥ ಪೂರ್ಣ ಸಂಚಿಕೆಗಳ ಮೂಲಕ ಹಾಗೂ ವಿಶೇಷವಾದ ಸಂವಾದಗಳ ಮೂಲಕ ಈ ಧಾರವಾಹಿ ಈಗಾಗಲೇ ಶ್ರೇಷ್ಠ ಧಾರಾವಾಹಿಗಳ ಪಟ್ಟಿಗೆ ಸೇರಿಕೊಂಡಿದೆ.

ಟಾಪ್ 6 ಮತ್ತು ಟಾಪ್ 5 : ಮಾಂಗಲ್ಯ – ರಾತ್ರಿ 09:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿ. ಹಲವಾರು ಜನರಿಗೆ ಈ ಧಾರವಾಹಿಯ ಟೈಟಲ್ ಸಾಂಗ್ ನೆನಪಿರಬಹುದು. ಇನ್ನು ಐದನೇ ಸ್ಥಾನದಲ್ಲಿ ಪಾಪಪಾಂಡು – ಕನ್ನಡದ ಮೊದಲ ಹಾಸ್ಯ ಧಾರವಾಹಿ ಹಾಗೂ ದಿನಕ್ಕೊಂದು ಕತೆ ಎಂಬಂತೆ ಪ್ರಸಾರವಾಗತೊಡಗಿತು. ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳ ಯಶಸ್ವಿ ಪ್ರದರ್ಶನ ಸಹ ಕಂಡಿತು. ಸಿಹಿಕಹಿ ಚಂದ್ರು ಇದರ ನಿರ್ದೇಶಕರು.

ಟಾಪ್ -4 ಮತ್ತು ಟಾಪ್ 3: ದಂಡಪಿಂಡಗಳು – ನಿರ್ದೇಶಕ ಫಣಿ ರಾಮಚಂದ್ರ ನಿರ್ದೇಶಿಸಿದ ಈ ಧಾರವಾಹಿ ಬಹಳಷ್ಟು ಜನಪ್ರಿಯವಾಗಿತ್ತು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿಯ ಟೈಟಲ್ ಸಾಂಗ್ ಇಂದಿಗೂ ಪಾಪ್ಯುಲರ್. ಇನ್ನು ಟಾಪ್ ಮೂರನೇ ಸ್ಥಾನದಲ್ಲಿ ಸಿಲ್ಲಿಲಲ್ಲಿ : ಕನ್ನಡದ ಮತ್ತೊಂದು ಹಾಸ್ಯ ಧಾರವಾಹಿ. ಅತಿ ಹೆಚ್ಚು ಜನಪ್ರಿಯವಾಗಿತ್ತು. ಸಾವಿರಕ್ಕಿಂತಲೂ ಹೆಚ್ಚು ಕಂತುಗಳು ಪ್ರಸಾರವಾಗಿತ್ತು. ವಿಜಯ್ ಪ್ರಸಾದ್ ನಿರ್ದೇಶಕರು. ಆಗಿನ ಕಾಲದ ಎಲ್ಲಾ ವಯಸ್ಸಿನವರು ಈ ಧಾರಾವಾಹಿಯ ಅಭಿಮಾನಿಗಳಾಗಿದ್ದರು.

ಟಾಪ್ – 2 ಮತ್ತು ಟಾಪ್ 1: ಮೂಡಲಮನೆ – ನಿರ್ದೇಶಕಿ ವೈಶಾಲಿ ಕಾಸರವಳ್ಳಿ ನಿರ್ದೇಶನದ ಈ ಧಾರವಾಹಿ ಉತ್ತರ ಕರ್ನಾಟಕ ಶೈಲಿಯಲ್ಲಿ ಚಿತ್ರೀಕರಣವಾಗಿತ್ತು. ರಾತ್ರಿ 09:30 ಕ್ಕೆ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿ ಹಲವಾರು ಕ್ಲಾಸ್ ಪ್ರೇಕ್ಷಕರನ್ನು ಸೆಳೆದಿತ್ತು. ಇನ್ನು ಮೊದಲನೇ ಸ್ಥಾನದಲ್ಲಿ ಮಾಯಾಮೃಗ ಮತ್ತು ಮುಕ್ತ – ಟಿ.ಎನ್.ಸೀತಾರಾಂ ನಿರ್ದೇಶನದ ಈ ಎರಡು ಧಾರವಾಹಿಗಳು ಕಿರುತೆರೆಯ ಸೂಪರ್ ಹಿಟ್ ಧಾರವಾಹಿಗಳು. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಯಾಮೃಗದಲ್ಲಿ ಸಂಸಾರ ಸಂಭಂದಿತ ಕಥಾ ವಸ್ತು ಇದ್ದರೇ, ಮುಕ್ತದಲ್ಲಿ ಕೋರ್ಟ್ ಕಲಾಪಗಳ ಸಂಭಾಷಣೆಗಳು ಬಹಳಷ್ಟು ಜನಪ್ರಿಯತೆ ಪಡೆದಿದ್ದವು. ನೀವು ವೀಕ್ಷಿಸಿದ ಟಾಪ್ 10 ಧಾರವಾಹಿಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.