ರುಚಿಯಷ್ಟೇ ಅಲ್ಲದೇ, ಉತ್ತಮ ಬಿಸಿನೆಸ್ ಐಡಿಯಾ ಆಗಿರುವ ಹುಣಸೆ ಹಣ್ಣಿನ ಉಪ್ಪಿನಕಾಯಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹುಣಸೆ ಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹುಣಸೆ ಹಣ್ಣಿನ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು: ಕಾಲು ಕೆಜಿ ಹುಣಸೆಹಣ್ಣು, 1 ಬಟ್ಟಲು ಬೆಲ್ಲ, 2 – 3 ಚಮಚ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, 2 – 3 ಚಮಚ ಸಣ್ಣಗೆ ಹಚ್ಚಿದ ಶುಂಠಿ, 1 ಚಮಚ ಸಾಸಿವೆ, 4 ಚಮಚ ಅಚ್ಚ ಖಾರದ ಪುಡಿ, 1 ಚಮಚ ಪೆಪ್ಪರ್ ಪೌಡರ್, ಅರ್ಧ ಚಮಚ ಮೇತಿ ಪೌಡರ್, 1 ಚಮಚ ಧನಿಯಾ ಪುಡಿ, 1 ಚಮಚ ಜೀರಿಗೆ ಪುಡಿ, ಅರ್ಧ ಚಮಚ ಅರಿಶಿನ ಪುಡಿ, ಸ್ವಲ್ಪ ಇಂಗು, 2 ಚಮಚ ಉಪ್ಪು, ಸ್ವಲ್ಪ ಎಣ್ಣೆ.

ಹುಣಸೆ ಹಣ್ಣಿನ ಉಪ್ಪಿನಕಾಯಿ ಮಾಡುವ ವಿಧಾನ: ಮೊದಲಿಗೆ ಹುಣಸೆ ಹಣ್ಣಿನಲ್ಲಿರುವ ನಾರು ಹಾಗೂ ಸಿಪ್ಪೆಯನ್ನು ಬಿಡಿಸಿಕೊಳ್ಳಿ. ನಂತರ ಒಂದು ಬಟ್ಟಲಿಗೆ ಹುಣಸೆ ಹಣ್ಣು ಹಾಗೂ ನೀರನ್ನು ಹಾಕಿ ನೆನೆಯಲು ಬಿಡಿ. ನಂತರ ಕೈ ನ ಸಹಾಯದಿಂದ ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಒಂದು ಮಿಕ್ಸ್ ಜಾರಿಗೆ ಹುಣಸೆ ಹಣ್ಣು ಹಾಗೂ ಹುಣಸೆ ಹಣ್ಣಿನ ರಸವನ್ನು ಹಾಕಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 – 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, ಸಣ್ಣಗೆ ಹಚ್ಚಿದ ಶುಂಠಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮೇತಿ ಪುಡಿ, ಸ್ವಲ್ಪ ಇಂಗನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೆಲ್ಲವನ್ನು ಹಾಕಿ ಬೆಲ್ಲ ಕರಗುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆ ಹಣ್ಣಿನ ಪೇಸ್ಟ್ ಅನ್ನು ಹಾಕಿ 2 – 3 ನಿಮಿಷಗಳ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿ ಹುಣಸೆ ಹಣ್ಣಿನ ಬಣ್ಣ ಬದಲಾಗುವವರೆಗೂ ಫ್ರೈ ಮಾಡುತ್ತಾ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಅಚ್ಚ ಖಾರದ ಪುಡಿ, ಪೆಪ್ಪರ್ ಪೌಡರ್, ಧನಿಯಾ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು 3 – 4 ನಿಮಿಷಗಳ ಕಾಲ ಬೇಯಿಸಿಕೊಂಡರೆ ಹುಣಸೆ ಹಣ್ಣಿನ ಉಪ್ಪಿನಕಾಯಿ ಸವಿಯಲು ಸಿದ್ದ. ಇದನ್ನು 2 – 3 ತಿಂಗಳುಗಳ ಕಾಲ ಸ್ಟೋರ್ ಮಾಡಬಹುದು.

Post Author: Ravi Yadav