ವಿರಾಟ್ ಕೊಹ್ಲಿಯ ನಂತರ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಭರವಸೆ ಮೂಡಿಸಿರುವ ಟಾಪ್ 5 ಆಟಗಾರರು ಯಾರು ಗೊತ್ತಾ??
ವಿರಾಟ್ ಕೊಹ್ಲಿಯ ನಂತರ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಭರವಸೆ ಮೂಡಿಸಿರುವ ಟಾಪ್ 5 ಆಟಗಾರರು ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಗುಂಪು ಕ್ರೀಡೆಯಲ್ಲಿ ಎಲ್ಲಾ ಆಟಗಾರರನ್ನು ಸರಿಯಾಗಿ ಮಾರ್ಗದರ್ಶನ ನೀಡಲು ಪ್ರತಿಯೊಂದು ತಂಡದಲ್ಲಿ ಒಬ್ಬ ನಾಯಕನ ಅವಶ್ಯಕತೆ ಇದ್ದೆ ಇರುತ್ತದೆ. ಹೌದು ತಂಡವನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಗೆಲುವಿನತ್ತ ಕೊಂಡೊಯ್ಯಲು ನಾಯಕನ ಪಾತ್ರ ಬಹುಮುಖ್ಯವಾದದ್ದು. ಇನ್ನು ಅದೇ ರೀತಿ ಭಾರತ ಕ್ರಿಕೆಟ್ ತಂಡದಲ್ಲಿ ಕೂಡ ನಾಯಕನ ಅವಶ್ಯಕತೆ ಇದ್ದೇ ಇರುತ್ತದೆ. ಈ ಹಿಂದೆ ಖ್ಯಾತ ಕ್ರಿಕೆಟ್ ಆಟಗಾರ ಎಂ. ಎಸ್. ಧೋನಿ ಅವರು ನಾಯಕರಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿಕೊಂಡು ಹೋಗಿದ್ದರು.
ಅದೇ ರೀತಿ ಇದೀಗ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಅವರು ತಂಡವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅನಂತರ ಯಾರು ನಾಯಕರಾಗುತ್ತಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಇನ್ನು ಈ ಪ್ರಶ್ನೆಗೆ ಉತ್ತರ ಎಂಬಂತೆ ಭಾರತ ಕ್ರಿಕೆಟ್ ತಂಡದಲ್ಲಿ ಟಾಪ್-5 ಆಟಗಾರರು ನಾಯಕನ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾರೆ. ಹಾಗಾದರೆ ಅವರು ಯಾರು ಎಂಬುದನ್ನು ನೋಡೋಣ ಬನ್ನಿ.
ಇನ್ನು ಇಂತಹ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ರಿಷಬ್ ಪಂತ್ ಅವರು 5ನೇ ಸ್ಥಾನದಲ್ಲಿದ್ದಾರೆ. ಹೌದು ಈ ಹಿಂದೆ ಇವರು ಯಾವುದೇ ತಂಡವನ್ನು ಮುನ್ನಡೆಸಿದ್ದರು ಕೂಡ ವಿಕೆಟ್ ಕೀಪರ್ ಆಗಿ ಭಾರತ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿಯ ನಂತರ ನಾಯಕನ ಸ್ಥಾನ ಸಿಕ್ಕರೂ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಆಲ್-ರೌಂಡರ್ ಆಗಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಮ್ಮ ಕಾಯಕವನ್ನು ಪ್ರದರ್ಶಿಸಿರುವ ಹಾರ್ದಿಕ್ ಪಾಂಡ್ಯ ಇದ್ದಾರೆ. ಇನ್ನು ಇವರು ತಮ್ಮ ಹೆಚ್ಚಿನ ಗಮನವನ್ನು ಫಿಟ್ನೆಸ್ ಕಡೆಗೆ ನೀಡಿ ಭಾರತ ತಂಡದಲ್ಲಿ ಕಾಯಂ ಸ್ಥಾನ ಪಡೆದರೆ ಇವರು ವಿರಾಟ್ ಕೊಹ್ಲಿ ಅವರ ನಂತರ ನಾಯಕನ ಸ್ಥಾನ ಪಡೆಯಬಹುದು.
ಇನ್ನು ಮೂರನೇ ಸ್ಥಾನದಲ್ಲಿ ಇದೀಗಾಗಲೇ ಕೆಲವು ಪಂದ್ಯಗಳಿಗೆ ಉಪನಾಯಕನಾಗಿ ಕಾಣಿಸಿಕೊಂಡಿರುವ ನಮ್ಮ ಕನ್ನಡಿಗ ಕೆ. ಎಲ್. ರಾಹುಲ್ ಅವರಿದ್ದಾರೆ. ಆದರೆ ಇನ್ನೆರಡು ವರ್ಷಗಳ ನಂತರ ನಡೆಯುವ ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಅವರು ನಾಯಕರಾಗಿರುವ ಕಾರಣ 2027ರ ವೇಳೆಗೆ ಇವರು ಸಮರ್ಥರಾಗಿದ್ದಲ್ಲಿ ನಾಯಕರಾಗುವ ಸಾಧ್ಯತೆಗಳಿವೆ. ಇನ್ನು ಎರಡನೇ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರಿದ್ದಾರೆ. ಇನ್ನು ಇವರು ಏಳು ವರ್ಷಗಳವರೆಗೆ ಸಮರ್ಥ ಬ್ಯಾಟ್ಸ್ಮನ್ ಆಗಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಾಯಂಗೊಳಿಸಿಕೊಂಡರೆ ಇವರೂ ನಾಯಕರಾಗಬಹುದು.
ಇನ್ನು ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು ಮೊದಲನೆ ಸ್ಥಾನದಲ್ಲಿ ಶುಭ್ಮನ್ ಗಿಲ್ ಅವರು ವಿರಾಟ್ ಕೊಹ್ಲಿ ನಂತರ ಭಾರತದ ನಾಯಕರಾಗಬಹುದು. ಹೌದು ಇದು ಕೇಳಿದರೆ ಆಶ್ಚರ್ಯವೆನಿಸಬಹುದು. ಆದರೆ ಯುವಕರಾಗಿರುವುದರಿಂದ ಇವರು ಮುಂದಿನ ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದರೆ 2027ರ ವೇಳೆಗೆ ಸಮರ್ಥ ಬ್ಯಾಟ್ಸ್ಮನ್ ಎನಿಸಿಕೊಂಡರೆ ಇವರು ವಿರಾಟ್ ಕೊಹ್ಲಿ ನಂತರ ಭಾರತ ಕ್ರಿಕೆಟ್ ತಂಡದ ನಾಯಕರು ಎಲ್ಲಾ ಸಾಧ್ಯತೆಗಳಿವೆ. ಇನ್ನು ಈ ಆಟಗಾರರಲ್ಲಿ ವಿರಾಟ್ ಕೊಹ್ಲಿ ಆನಂತರ ನಾಯಕನ ಸ್ಥಾನ ಯಾರು ಪಡೆಯುತ್ತಾರೆ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.