ನೀವು ಊಹಿಸಲು ಸಾಧ್ಯವಾಗದಂತಹ ವಿಶೇಷತೆಗಳನ್ನು ಹೊಂದಿರುವ ಪುರಿಯ ಜಗನ್ನಾಥ ವಿಶೇಷತೆಗಳನ್ನು ತಿಳಿಯಿರಿ.

ನೀವು ಊಹಿಸಲು ಸಾಧ್ಯವಾಗದಂತಹ ವಿಶೇಷತೆಗಳನ್ನು ಹೊಂದಿರುವ ಪುರಿಯ ಜಗನ್ನಾಥ ವಿಶೇಷತೆಗಳನ್ನು ತಿಳಿಯಿರಿ.

ನಮಸ್ಕಾರ ಸ್ನೇಹಿತರೇ ಧರ್ಮದ ನಾಡು ಭಾರತ. ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವು ಒಂದು. ವಿಶಿಷ್ಟವಾದ ಹಿನ್ನೆಲೆ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.

ಮರದಿಂದಲೇ ನಿರ್ಮಿಸಲಾಗಿರುವ ಈ ಅದ್ಭುತ ದೇವಾಲಯವು ಭಾರತದ ಚಾರ್‌ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದು. ಇಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಹಾಗೂ ರಥಯಾತ್ರೆ ಹೆಸರುವಾಸಿಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಕಥೆಯ ಪ್ರಕಾರ ಇಂದ್ರದ್ಯುಮ್ನ ಎಂಬ ರಾಜನಿಗೆ ಕನಸಿನಲ್ಲಿ ವಿಷ್ಣು ಕಾಣಿಸಿಕೊಂಡ ತರುವಾಯ ಇಂದ್ರದ್ಯುಮ್ನನು ಈ ದೇವಾಲಯವನ್ನು ಕಟ್ಟಿಸಿದ ಎನ್ನಲಾಗುತ್ತದೆ.

ಪುರಿಯ ಜಗನ್ನಾಥ ದೇವಾಲಯವು ಯಾವುದೇ ವೈಜ್ಞಾನಿಕ ವಿವರಣೆಯ ತನಿಖೆಗೆ ಒಳಗಾಗದೆ, ಇಂದಿಗೂ ಕೆಲವು ರಹಸ್ಯಗಳನ್ನು ಒಳಗೊಂಡಿದೆ. ಈ ರಹಸ್ಯಗಳು ಭಗವಾನ್ ಜಗನ್ನಾಥನ ಪವಾಡ ಎಂದು ಜನರು ನಂಬುತ್ತಾರೆ. ಈ ಪ್ರಸಿದ್ಧ ಕ್ಷೇತ್ರವನ್ನು ಒಮ್ಮೆ ನೋಡುವುದರ ಮೂಲಕ ಅಥವಾ ದೇವರ ದರ್ಶನವನ್ನು ಪಡೆಯುವುದರ ಮೂಲಕ ಮುಕ್ತಿಯನ್ನು ಪಡೆಯಬಹುದು.

ಗೋಪುರದ ಮೇಲಿನ ಧ್ವಜ: ಈ ಪವಿತ್ರ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಇರುವ ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಒಂದು ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿ ಇದೆ ಎನ್ನುವುದನ್ನು ತಿಳಿಸುತ್ತದೆ.

ಸುದರ್ಶನ ಚಕ್ರ: ದೇವಸ್ಥಾನದಲ್ಲಿ ಇರುವ ಸುದರ್ಶನ ಚಕ್ರವು ೨೦ ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಎಂದರೆ, ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುವುದು. ಅಲ್ಲದೆ ಈ ಚಕ್ರವನ್ನು ನೀವು ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರುವಂತೆ ತೋರುವುದು.

ದೇವಾಲಯದ ವಿನ್ಯಾಸ ಮತ್ತು ವಾಸ್ತುಶೈಲಿ: ಈ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೆ ಇರುವುದು. ಈ ದೇವಾಲಯದ ಒಳಗೆ ಹಾಗೂ ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದೊಂದು ಪ್ರಕೃತಿಯ ಪವಾಡ ಹಾಗೂ ದೈವ ಶಕ್ತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಪ್ರವೇಶ ದ್ವಾರಗಳ ವಿಶೇಷತೆ: ಈ ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತಗಳ ತರಂಗ ಕೇಳುವುದು. ಈ ದೇವಾಲಯದ ಒಳ ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿವೆ. ಇದರ ಮುಖ್ಯ ದ್ವಾರಕ್ಕೆ ಸಿಂಗದ್ವಾರ ಎಂದು ಕರೆಯುತ್ತಾರೆ. ಇಲ್ಲಿಂದ ಒಳಗೆ ದೇವರ ದರ್ಶನಕ್ಕೆ ತೆರಳುವಾಗ ಶಬ್ದಗಳ ತರಂಗಗಳು ಅಥವಾ ಧ್ವನಿಯು ಕೇಳುತ್ತವೆ. ಅದೇ ದ್ವಾರದ ಮೂಲಕ ನೀವು ಹಿಂತಿರುಗಿ ಬರುವಾಗ ಕೇಳುವುದಿಲ್ಲ. ಅಂತೆಯೇ ದೇವಸ್ಥಾನದ ಒಳಗೆ ಹೋದ ನಂತರ ದೀರ್ಘ ಸಮಯಗಳ ಕಾಲವೂ ಈ ಶಬ್ದಗಳು ಕೇಳುವುದಿಲ್ಲ.

ಸಮುದ್ರದ ಗಾಳಿಯ ರಹಸ್ಯ: ಪ್ರಪಂಚದ ಯಾವುದೇ ಸಮುದ್ರ ಪ್ರದೇಶಗಳಿಗೆ ಹೋದರೆ, ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿ ಗಾಳಿಗಳು ಸಮುದ್ರದಿಂದ ಭೂಮಿಯೆಡೆಗೆ ಬೀಸುತ್ತವೆ. ಅಂತೆಯೇ ಸಂಜೆಯ ಹೊತ್ತಾದಂತೆ ಭೂಮಿಯಿಂದ ಸಮುದ್ರದ ಕಡೆಗೆ ಗಾಳಿ ಬೀಸುವುದು. ಆದರೆ ಈ ಪ್ರಕೃತಿಯ ನಿಯಮಗಳು ಪುರಿ ಜಗನ್ನಾಥ ದೇವಾಲಯದ ಬಳಿ ಇರುವ ಸಮುದ್ರದಲ್ಲಿ ತದ್ವಿರುದ್ಧವಾದ ನಿಯಮದಲ್ಲಿ ಉಂಟಾಗುವು.

ಪ್ರಸಾದದ ತಯಾರಿಕೆ: ಉರುವಲು ಬಳಸಿಯೇ ವಿಶೇಷ ಸವಿಯ ಪ್ರಸಾದವನ್ನು ಇಲ್ಲಿ ತಯಾರಿಸಲಾಗುತ್ತದೆ. ಇಲ್ಲಿ ಮಾಡುವ ಅಡುಗೆ ಅಥವಾ ಪ್ರಸಾದಕ್ಕೆ ಮಣ್ಣಿನ ಮಡಿಕೆಯನ್ನೇ ಬಳಸಲಾಗುವುದು. ಪ್ರಸಾದ ತಯಾರಿಗೆ 7 ಮಡಿಕೆಯನ್ನು ಬಳಸಲಾಗುವುದು. ಆ ಮಡಿಕೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ತಯಾರಿಸುತ್ತಾರೆ. ತುತ್ತ ತುದಿಯಲ್ಲಿ ಇರುವ ಮಡಿಕೆಯ ಪ್ರಸಾದವು ಮೊದಲು ಬೇಯುತ್ತದೆ. ನಂತರ ಅದರ ಕೆಳಗಿರುವ ಮಡಿಕೆ, ಹೀಗೆ ಮೇಲಿನಿಂದ ಕೆಳಭಾಗದ ವರೆಗೂ ಒಂದಾದನಂತರ ಒಂದರಂತೆ ಬೇಯುವುದು. ಇಂತಹ ವಿಸ್ಮಯಗಳಿರುವ ಕ್ಷೇತ್ರಕ್ಕೆ ನಿವೋಮ್ಮೆ ತೆರಳಲೇಬೇಕು.