ಭಾರತೀಯ ಕ್ರಿಕೆಟ್ ಲೋಕದ ನತದೃಷ್ಟ ಟಾಪ್ 5 ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಕನ್ನಡಿಗರೇ ಹೆಚ್ಚು.

ಭಾರತೀಯ ಕ್ರಿಕೆಟ್ ಲೋಕದ ನತದೃಷ್ಟ ಟಾಪ್ 5 ಕ್ರಿಕೆಟಿಗರು ಯಾರ್ಯಾರು ಗೊತ್ತೇ?? ಕನ್ನಡಿಗರೇ ಹೆಚ್ಚು.

ನಮಸ್ಕಾರ ಸ್ನೇಹಿತರೇ ಪ್ರತಿಭೆ, ಸಾಮರ್ಥ್ಯ ಎಲ್ಲರ ಬಳಿಯೂ ಇರತ್ತೆ. ಆದರೇ ಅದನ್ನ ಹೊರ ಜಗತ್ತಿಗೆ ತೋರಿಸಲು ಅವಕಾಶಗಳು ಸಹ ಅಷ್ಟೇ ಅವಶ್ಯಕ. ಆದರೇ ಭಾರತದಂತಹ ಸ್ಪರ್ಧಾತ್ಮಕ ದೇಶಗಳಲ್ಲಿ ಎಷ್ಟೇ ಪ್ರತಿಭೆ, ಸಾಮರ್ಥ್ಯವಿದ್ದರೂ ಅವಕಾಶವಂಚಿತರಾಗಿ ಬಹಳಷ್ಟು ಜನ ನಿರಾಶಾವಾದಿಗಳಾಗಿರುತ್ತಾರೆ. ಭಾರತೀಯ ಕ್ರಿಕೇಟ್ ಜಗತ್ತಿನಲ್ಲಿಯೂ ಸಹ ಹೀಗೆ. ಪ್ರತಿಭೆ ಹಾಗೂ ಸಾಮರ್ಥ್ಯದಡಿಯಲ್ಲಿ ತಂಡಕ್ಕೆ ಆಯ್ಕೆಯಾದರೂ ಕೆಲವೊಮ್ಮೆ ಅವಕಾಶಗಳಿಗೆ ಕಾಯಬೇಕಾಗುತ್ತದೆ. ಒಂದು ವೇಳೆ ಅವಕಾಶ ಸಿಕ್ಕರೂ ಆ ಸಮಯದಲ್ಲಿ ಸೂಕ್ತ ಪ್ರದರ್ಶನ ನೀಡಲಾಗದೆ, ತಂಡದಿಂದ ಹೊರಬಿದ್ದ ದೊಡ್ಡ ಆಟಗಾರರ ಪಟ್ಟಿಯೇ ಇದೆ. ಅಂತಹ ನತದೃಷ್ಟ ಟಾಪ್ -5 ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಟಾಪ್ 5 – ವಿನಯ್ ಕುಮಾರ್: ದಾವಣೆಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಕರ್ನಾಟಕ ರಣಜಿ ತಂಡದ ನಾಯಕರು ಸಹ. ಕರ್ನಾಟಕ ರಣಜಿ ಚಾಂಪಿಯನ್ ಆಗಲೂ ಇವರೇ ಪ್ರಮುಖ ಕಾರಣ. ರಣಜಿ ಸೀಸನ್ ನಲ್ಲಿ ಅತಿ ಹೆಚ್ಚು ವಿಕೇಟ್ ಪಡೆದ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಇನ್ನು ಐಪಿಎಲ್ ನಲ್ಲಿಯೂ ಸಹ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದವರು. ಇದೆಲ್ಲಾ ಅಂಶದಿಂದ ಭಾರತೀಯ ತಂಡದಲ್ಲಿ ಸ್ಥಾನ ಸಹ ಪಡೆದಿದ್ದರೂ. ಆದರೇ ಒಂದೆರೆಡು ಕೆಟ್ಟ ಸ್ಪೆಲ್ ಗಳಿಂದ ಭಾರತೀಯ ತಂಡದಿಂದ ಹೊರಬಿದ್ದರು. ಅಲ್ಲಿನಿಂದ ಮತ್ತೆ ತಂಡದೊಳಗೆ ಬರಲು ಆಗಲಿಲ್ಲ.

ಟಾಪ್ 4 : ಮಯಾಂಕ್ ಅಗರ್ ವಾಲ್. ಉತ್ತಮ ಆರಂಭಿಕ ಬ್ಯಾಟ್ಸಮನ್. ಸಿಕ್ಕ ಅವಕಾಶದಲ್ಲಿ ದ್ವಿಶತಕ ಭಾರಿಸಿದ ಆಟಗಾರ್. ಐಪಿಎಲ್ ನಲ್ಲಿಯೂ ಅಷ್ಟೇ ಅತ್ಯುತ್ತಮವಾದ ಆಟಗಾರ. ಆದರೇ ಆಸ್ಟ್ರೇಲಿಯಾದಲ್ಲಿ ಆಡಿದ ಎರಡು ಕೆಟ್ಟ ಇನ್ನಿಂಗ್ಸ್ ನಿಂದ ಬೆಂಚ್ ಕಾಯುವ ಪರಿಸ್ಥಿತಿ ಬಂದಿದೆ‌. ತಂಡದಲ್ಲಿದ್ದರೂ 11ರೊಳಗೆ ಸ್ಥಾನ ಪಡೆಯುವ ಸಾಧ್ಯತೆ ಬಹುತೇಖ ಕಡಿಮೆ.

ಟಾಪ್ 3 : ಸಂಜು ಸ್ಯಾಮ್ಸನ್ – ಪ್ರತಿಭಾವಂತ ಕೇರಳದ ಬ್ಯಾಟ್ಸ್ ಮನ್. ಆದರೇ ಸ್ಥಿರ ಪ್ರದರ್ಶನದ ಕೊರತೆ. ಹಾಗಾಗಿಯೇ ತಂಡಕ್ಕೆ ಬಂದಷ್ಟೇ ಬೇಗ ಹೊರ ಹೊಗುತ್ತಾರೆ. ವಿಕೇಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ರಿಷಭ್ ಪಂತ್ ಸ್ಥಾನ ಗಟ್ಟಿಯಾಗಿರುವ ಕಾರಣ ಸಂಜು ಟೀಂ ಇಂಡಿಯಾಗೆ ಆಡುವ ಕನಸು ಬಹುತೇಕ ತೆರೆಮರೆಗೆ ಹೋಗುವ ಸಾಧ್ಯತೆಯಿದೆ.

ಟಾಪ್2: ಮನೀಶ್ ಪಾಂಡೆ – ಕನ್ನಡಿಗ ಪಾಂಡೆ ನಿಜಕ್ಕೂ ನತದೃಷ್ಠ ಆಟಗಾರ. ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಗೆ ಹೇಳಿ ಮಾಡಿಸಿದಂತಹ ವ್ಯಕ್ತಿ. ಐಪಿಎಲ್ ನಲ್ಲಿ ಶತಕ ಗಳಿಸಿದ ಮೊದಲ ಇಂಡಿಯನ್ ಬ್ಯಾಟ್ಸ್ ಮನ್. ಆದರೇ ಅವಕಾಶ ಸಿಕ್ಕಾಗ ಬ್ಯಾಟಿಂಗ್ ಸಿಗಲಿಲ್ಲ. ಬ್ಯಾಟಿಂಗ್ ಸಿಕ್ಕರೇ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗಲಿಲ್ಲ. ಹಾಗಾಗಿ ಪಾಂಡೆ ತಮ್ಮ ಸ್ಥಾನ ಇನ್ನು ಗಟ್ಟಿಯಾಗಿಲ್ಲ.

ಟಾಪ್ 1: ದಿನೇಶ್ ಕಾರ್ತಿಕ್ – ಧೋನಿಗಿಂತಲೂ ಮೊದಲು ಟೀಂ ಇಂಡಿಯಾಕ್ಕೆ ಆಯ್ಕೆಯಾದ ವಿಕೇಟ್ ಕೀಪರ್ ಬ್ಯಾಟ್ಸ್ ಮನ್. ಆದರೇ ಧೋನಿ ಇರುವ ಕಾರಣಕ್ಕೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಸಿಗಲಿಲ್ಲ. ಎಲ್ಲಾ ಬ್ಯಾಟಿಂಗ್ ಕ್ರಮಾಂಕಗಳಲ್ಲಿಯೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಮಾಡಿದರೂ ಅವಕಾಶ ವಂಚಿತ ನತದೃಷ್ಠ ಬ್ಯಾಟ್ಸ್ ಮನ್ ಆಗಿದ್ದಾರೆ. ವಯಸ್ಸಿನ ಕಾರಣಕ್ಕೆ ಮುಂದೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಸಹ ಅಸಾಧ್ಯ.