ಮತ್ತೊಂದು ಸಿಹಿ ಸುದ್ದಿ ನೀಡಲು ಸಿದ್ಧವಾದ ಅಗ್ನಿಸಾಕ್ಷಿ ವಿಜಯ್ ಸೂರ್ಯ, ಏನಂತೆ ಗೊತ್ತಾ??
ಮತ್ತೊಂದು ಸಿಹಿ ಸುದ್ದಿ ನೀಡಲು ಸಿದ್ಧವಾದ ಅಗ್ನಿಸಾಕ್ಷಿ ವಿಜಯ್ ಸೂರ್ಯ, ಏನಂತೆ ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುವಂತಹ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಧಾರವಾಹಿ ಕೂಡ ಒಂದಾಗಿದೆ, ಧಾರಾವಾಹಿ ಪ್ರಸಾರವಾಗುತ್ತಿದೆ ಎಂದರೇ ಉಳಿದ ಇನ್ಯಾವುದೇ ಚಾನಲ್ ಗಳು ಟಿಆರ್ಪಿ ಪಡೆದು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ಬಿಡುಗಡೆಯಾದ ಮೊದಲ ದಿನದಿಂದಲೂ ಕೂಡ ಕೊನೆಯ ಕ್ಷಣದವರೆಗೂ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಮೊದಲನೇ ಸ್ಥಾನವನ್ನು ಪಡೆದು ಕೊಂಡಿತ್ತು.
ಇಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಹಾಗೂ ಒಮ್ಮೆ ಸೆಳೆದ ಬಳಿಕ ತನ್ನಲ್ಲಿ ಹಿಡಿದಿಟ್ಟು ಕೊಳ್ಳುವಲ್ಲಿ ಅಗ್ನಿಸಾಕ್ಷಿ ಧಾರವಾಹಿ ಯಶಸ್ವಿಯಾಗಿತ್ತು. ಇನ್ನು ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು ವಿಜಯ್ ಸೂರ್ಯ ರವರು ಕೂಡ ಹೆಚ್ಚಿನ ಜನ ಪ್ರಿಯತೆಯನ್ನು ಪಡೆದು ಕೊಂಡಿದ್ದರು ಹಾಗೂ ಇದೆ ಜನಪ್ರಿಯತೆ ಅವರಿಗೆ ಸಾಕಷ್ಟು ಅವಕಾಶಗಳನ್ನು ಕೂಡ ಸಿಗುವಂತೆ ಮಾಡಿತು.
ಇನ್ನು ಇದಾದ ಮೇಲೆ ಸ್ಯಾಂಡಲ್ವುಡ್ನಲ್ಲಿ ನಟನಾಗಿ ಕೆಲಸ ಮಾಡಿ ತದ ನಂತರ ಇತ್ತೀಚೆಗೆ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ಇನ್ನು ಇದೀಗ ಮತ್ತೊಂದು ಸಿಹಿ ಸುದ್ದಿಯನ್ನು ಹಂಚಿಕೊಳ್ಳಲು ಸಿದ್ಧವಾಗಿರುವ ವಿಜಯ್ ಸೂರ್ಯರವರು ಲಾಕ್ ಡೌನ್ ಮುಗಿದ ಬಳಿಕ ಹೊಸ ಧಾರವಾಹಿ ಯೊಂದಿಗೆ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಇವರ ಧಾರವಾಹಿ ಪ್ರಸಾರವಾಗುತಿತ್ತು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲದ ಕಾರಣ ಕೊರೊನ ಮುಗಿದ ತಕ್ಷಣ ಇವರು ಧಾರವಾಹಿ ಆರಂಭಿಸುತ್ತಾರೆ ಎಂಬುದು ತಿಳಿದು ಬಂದಿದೆ.