ಭಾರತ ತಂಡಕ್ಕೆ ಪಾದಾರ್ಪಣೆ ಮಾಡಲಿರುವ ಆರ್ಸಿಬಿ ತಂಡದ ಮತ್ತೊಬ್ಬ ಆಟಗಾರ, ಯಾರು ಮತ್ತು ಯಾವಾಗ ಗೊತ್ತೇ??

ಭಾರತ ತಂಡಕ್ಕೆ ಪಾದಾರ್ಪಣೆ ಮಾಡಲಿರುವ ಆರ್ಸಿಬಿ ತಂಡದ ಮತ್ತೊಬ್ಬ ಆಟಗಾರ, ಯಾರು ಮತ್ತು ಯಾವಾಗ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತದ ಹಲವಾರು ಅಂತರಾಷ್ಟ್ರೀಯ ಆಟಗಳಲ್ಲಿ ಕ್ರಿಕೆಟ್ ಆಟವು ಕೂಡ ಒಂದು. ಭಾರತ ಕ್ರಿಕೆಟ್ ತಂಡ ಏಕದಿನ ಪಂದ್ಯಗಳ ಐಸಿಸಿ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಹೊಂದಿದ್ದು, ಟಿ-20 ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಹೊಂದಿದ್ದು, ಟೆಸ್ಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಇದೀಗ ಭಾರತ ಕ್ರಿಕೆಟ್ ತಂಡ ಸಾಕಷ್ಟು ಯುವ ಆಟಗಾರರನ್ನು ಹೊಂದಿದ್ದು, ಎಲ್ಲ ಯುವ ಆಟಗಾರರು ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಇದೀಗಾಗಲೇ ಸಾಕಷ್ಟು ಆಟಗಾರರು ಹಲವಾರು ಸ್ಥಳೀಯ ಪಂದ್ಯಗಳ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.

ಅಷ್ಟೇ ಅಲ್ಲದೆ ಇದೀಗ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಯುವ ಆಟಗಾರರು ಪೈಪೋಟಿ ನಡೆಸಿದ್ದಾರೆ ಎಂದು ಹೇಳಬಹುದು. ಇನ್ನು ಇತ್ತೀಚಿಗೆ ಭಾರತ ಕ್ರಿಕೆಟ್ ತಂಡ ಯುವ ಆಟಗಾರರನ್ನು ಬಳಸಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ವಿಜೇತರಾಗಿ ಇತಿಹಾಸ ಸೃಷ್ಟಿಸಿದ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ಇತಿಹಾಸದ ಮೂಲಕ ಯುವ ಆಟಗಾರರು ನಾವು ಯಾವ ತಂಡಗಳಿಗೂ ಕೂಡ ಕಡಿಮೆ ಇಲ್ಲ ಎಂಬುದನ್ನು ಕೂಡ ಸಾಬೀತುಪಡಿಸಿದ್ದರು.

ಇನ್ನು ಇದೀಗ ಭಾರತ ಕ್ರಿಕೆಟ್ ತಂಡ ಶ್ರೀಲಂಕಾದ ಪ್ರವಾಸ ಕೈಗೊಳ್ಳಲಿದ್ದು, ಕ್ರಿಕೆಟ್ ತಂಡವನ್ನು ರೂಪಿಸುತ್ತಿದೆ. ಇನ್ನು ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ಅಂಗಳದಲ್ಲಿ ಸಾಕಷ್ಟು ಯುವ ಆಟಗಾರರ ಸಾಲು ದೊಡ್ಡದಾಗಿದೆ. ಹೌದು ಇದೀಗ ಶ್ರೀಲಂಕಾ ಪ್ರವಾಸಕ್ಕೆ ಮಾಡಿದ ಕ್ರಿಕೆಟ್ ತಂಡದಲ್ಲಿ ಯಾರಿಗೆ ಸ್ಥಾನ ನೀಡಬೇಕೆಂದು ಭಾರತ ಕ್ರಿಕೆಟ್ ಮಂಡಳಿಗೆ ತಿಳಿಯದಂತಾಗಿದೆ. ಹೌದು ಇದು ಈಗಾಗಲೇ ಸಾಕಷ್ಟು ಯುವ ಆಟಗಾರರು ತಮ್ಮ ಕೌಶಲ್ಯವನ್ನು ಐಪಿಎಲ್ ಪಂದ್ಯಾವಳಿಗಳ ಮೂಲಕ ಸಾಬೀತುಪಡಿಸಿದ್ದಾರೆ.

ಹಾಗಾಗಿ ಯಾವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ ಭಾರತ ಕ್ರಿಕೆಟ್ ಮಂಡಳಿಗೆ ಎದುರಾಗಿದೆ. ಇದೀಗ ಭಾರತದಲ್ಲಿ ಸಾಕಷ್ಟು ಯುವ ಆಟಗಾರರು ಇದ್ದು, ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸಿದ್ದಾರೆ. ಇನ್ನು ಐಪಿಎಲ್ ಪಂದ್ಯಾವಳಿಗಳಲ್ಲಿ ಸಾಕಷ್ಟು ಜನರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ಸಾಕಷ್ಟು ಆಟಗಾರರು ಲಭ್ಯವಿದ್ದು, ಅವರಲ್ಲಿ ಸಾಕಷ್ಟು ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಇನ್ನು ಇದೇ ತಂಡದ ಯುವ ಆಟಗಾರರೊಬ್ಬರು ಇದೀಗ ಭಾರತದ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ. ಆ ಯುವ ಆಟಗಾರ ಮತ್ತ್ಯಾರು ಅಲ್ಲ ಕರ್ನಾಟಕದ ದೇವದತ್ತ ಪಡಿಕಲ್. ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ದೇವದತ್ತ ಪಡಿಕಲ್ ಅವರು ಭಾರತದ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಹೌದು ಇವರು 2021ರ ಐಪಿಎಲ್ ಪಂದ್ಯಾವಳಿಯಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು, ಭಾರತ ಕ್ರಿಕೆಟ್ ಮಂಡಳಿಯನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.

ಎಲ್ಲದರ ಮಧ್ಯೆ ಇದೀಗ ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ ಬೇಕಾಗಿರುವುದರಿಂದ ದೇವದತ್ತ ಪಡಿಕಲ್ ಅವರು ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳು ಕಂಡು ಬರುತ್ತಿವೆ. ಇನ್ನು ಇವರು ಶ್ರೀಲಂಕಾ ಪ್ರವಾಸದ ಸೀಮಿತ ಓವರುಗಳ ಪಂದ್ಯದ ಮೂಲಕ ಅಂತರಾಷ್ಟ್ರೀಯ ಸೀಮಿತ ಓವರುಗಳ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನು ಇವರು ಶ್ರೀಲಂಕಾ ನೆಲದಲ್ಲಿ ಕೂಡ ಅದೇ ರೀತಿಯ ಸಾಮರ್ಥ್ಯವನ್ನು ತೋರಲಿ ಎಂದು ನಾವು ಈ ಮೂಲಕ ಹಾರೈಸೋಣ.