ಎಲ್ಲರೂ ಕೇಳಿ ಇಷ್ಟ ಪಟ್ಟು ಮಾಡಿಸಿಕೊಳ್ಳುವ ಬೆಂಡೆಕಾಯಿ ಮಸಾಲಾ ಮಾಡುವುದು ಹೇಗೆ ಗೊತ್ತೇ?

ಎಲ್ಲರೂ ಕೇಳಿ ಇಷ್ಟ ಪಟ್ಟು ಮಾಡಿಸಿಕೊಳ್ಳುವ ಬೆಂಡೆಕಾಯಿ ಮಸಾಲಾ ಮಾಡುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಇಂದು ನಾವು ಬೆಂಡೆಕಾಯಿ ಮಸಾಲಾ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಬೆಂಡೆಕಾಯಿ ಮಸಾಲಾ ಮಾಡಲು ಬೇಕಾಗುವ ಸಾಮಗ್ರಿಗಳು: 5 ಲವಂಗ, 1 ಇಂಚು ಚಕ್ಕೆ,1 ಚಮಚ ಅಚ್ಚ ಖಾರದ ಪುಡಿ,ಸ್ವಲ್ಪ ಅರಿಶಿನ ಪುಡಿ, ಅರ್ಧ ಚಮಚ ಧನಿಯಾ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಮೆಂತ್ಯ ಪುಡಿ, 1 ಚಮಚ ಕಡಲೆ ಹಿಟ್ಟು, 1 ಚಮಚ ಶುಂಠಿ – ಬೆಳ್ಳುಳ್ಳಿ ಪೇಸ್ಟ್,2 ಟೊಮೇಟೊ, 2 – 3 ಚಮಚ ಮೊಸರು,1 ಬಟ್ಟಲು ಎಣ್ಣೆ,10 – 12 ಬೆಂಡೆಕಾಯಿ, ರುಚಿಗೆ ತಕಷ್ಟು ಉಪ್ಪು,1 ಈರುಳ್ಳಿ.

ಬೆಂಡೆಕಾಯಿ ಮಸಾಲಾ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ 5 ಲವಂಗ, 1 ಇಂಚು ಚಕ್ಕೆ,1 ಚಮಚ ಅಚ್ಚ ಖಾರದ ಪುಡಿ,ಸ್ವಲ್ಪ ಅರಿಶಿನ ಪುಡಿ, ಅರ್ಧ ಚಮಚ ಧನಿಯಾ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಕಾಲು ಚಮಚ ಮೆಂತ್ಯ ಪುಡಿ, 1 ಚಮಚ ಕಡಲೆ ಹಿಟ್ಟು, 1 ಚಮಚ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಹಾಗೂ ನೀರನ್ನು ಹಾಕಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಜಾರಿಗೆ 2 ಟೊಮೇಟೊ, 2 – 3 ಚಮಚ ಮೊಸರನ್ನು ಹಾಕಿ ಪೇಸ್ಟ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಬಟ್ಟಲಿನಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಉದ್ದನೆ ಹಚ್ಚಿದ ಬೆಂಡೆಕಾಯಿ ಹಾಗೂ ಸ್ವಲ್ಪ ಉಪ್ಪನ್ನು ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಬಟ್ಟಲು ನೀರನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿಕೊಂಡ ಟೊಮೇಟೊ ಹಾಗೂ ಮೊಸರಿನ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಎಣ್ಣೆ ತೇಲುವವರೆಗೂ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಫ್ರೈ ಮಾಡಿಕೊಂಡ ಬೆಂಡೆಕಾಯಿಯನ್ನು ಹಾಕಿ 1 – 2 ನಿಮಿಷಗಳ ಕಾಲ ಬೇಯಿಸಿಕೊಂಡರೆ ಬೆಂಡೆಕಾಯಿ ಮಸಾಲಾ ಸವಿಯಲು ಸಿದ್ದ.