ಮದುವೆ ಮನೆಯ ಶೈಲಿಯಲ್ಲಿ ದಿಡೀರ್ ಅವಲಕ್ಕಿ ಚಿತ್ರಾನ್ನ ಹೀಗೆ ಮಾಡಿ ನೋಡಿ, ಎಲ್ಲರೂ ಪ್ಲೇಸ್ ಖಾಲಿ ಮಾಡ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಮದುವೆ ಮನೆಯ ಶೈಲಿಯಲ್ಲಿ ದಿಡೀರ್ ಅವಲಕ್ಕಿ ಚಿತ್ರಾನ್ನ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಈ ಅವಲಕ್ಕಿಯ ವಿಶೇಷವೆನೆಂದರೆ ಅಡುಗೆಯನ್ನು ಮಾಡುವಾಗ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ನೀವು ಉಪವಾಸದ ಸಮಯದಲ್ಲಿ ರುಚಿ ರುಚಿಯಾಗಿ ಈ ತಿಂಡಿಯನ್ನು ಸೇವಿಸಬಹುದು.

ಮದುವೆ ಮನೆಯ ಶೈಲಿಯಲ್ಲಿ ದಿಡೀರ್ ಅವಲಕ್ಕಿ ಚಿತ್ರಾನ್ನ ಮಾಡಲು ಬೇಕಾಗುವ ಸಾಮಗ್ರಿಗಳು:
2 ಬಟ್ಟಲು ಅವಲಕ್ಕಿ, 4 ಚಮಚ ಕಡಲೆಬೀಜ, 4 ಚಮಚ ತೆಂಗಿನಕಾಯಿ ತುರಿ,4 ಚಮಚ ಎಣ್ಣೆ, 1 ಚಮಚ ಕಡಲೆಬೇಳೆ,1 ಚಮಚ ಉದ್ದಿನ ಬೇಳೆ, 1 ಚಮಚ ನಿಂಬೆಹಣ್ಣಿನ ರಸ,7 – 8 ಹಸಿಮೆಣಸಿನಕಾಯಿ, 1 ಚಮಚ ಜೀರಿಗೆ, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಸಾಸಿವೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು , ರುಚಿಗೆ ತಕಷ್ಟು ಉಪ್ಪು.

ಮದುವೆ ಮನೆಯ ಶೈಲಿಯಲ್ಲಿ ದಿಡೀರ್ ಅವಲಕ್ಕಿ ಚಿತ್ರಾನ್ನ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಅವಲಕ್ಕಿ ಹಾಗೂ ನೀರನ್ನು ಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅದೇ ಬಟ್ಟಲಿಗೆ ನೀರನ್ನು ಹಾಕಿ 3 – 4 ನಿಮಿಷಗಳ ಕಾಲ ಅವಲಕ್ಕಿಯನ್ನು ನೆನೆಯಲು ಬಿಡಿ.ನಂತರ ಅವಲಕ್ಕಿಯನ್ನು ನೀರಿನಿಂದ ಬೇರ್ಪಡಿಕೊಂಡು 5 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ಹಾಗೂ ಕಡಲೆಬೀಜವನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಕಡಲೆಬೇಳೆ ಹಾಗೂ ಉದ್ದಿನಬೇಳೆಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸನಾಗೆ ಹಚ್ಚಿದ ಹಸಿಮೆಣಸಿನಕಾಯಿಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಕರಿಬೇವನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ ಅರಿಶಿನ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಇದಕ್ಕೆ ನೆನೆಸಿದ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ ಕಡಿಮೆ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ .ಕೊನೆಯದಾಗಿ ಇದಕ್ಕೆ ತೆಂಗಿನಕಾಯಿ ತುರಿ, ನಿಂಬೆ ಹಣ್ಣಿನ ರಸ ಹಾಗೂ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ದಿಡೀರ್ ಅವಲಕ್ಕಿ ಚಿತ್ರಾನ್ನ ಸವಿಯಲು ಸಿದ್ದ.

Post Author: Ravi Yadav