ಹೋಟೆಲ್ ಶೈಲಿಯಲ್ಲಿ ಮನೆಯಲ್ಲಿಯೇ ಬಾಯಿ ಚಪ್ಪರಿಸುವಂತೆ ಮೆಂತ್ಯ ಪಲಾವ್ ಮಾಡುವುದು ಹೇಗೆ ಗೊತ್ತೇ??

ಹೋಟೆಲ್ ಶೈಲಿಯಲ್ಲಿ ಮನೆಯಲ್ಲಿಯೇ ಬಾಯಿ ಚಪ್ಪರಿಸುವಂತೆ ಮೆಂತ್ಯ ಪಲಾವ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಮೆಂತ್ಯ ಪಲಾವ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟಲ್ ಶೈಲಿಯಲ್ಲಿ ಮೆಂತ್ಯ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಕೆಜಿ ಅಕ್ಕಿ, 1 ಬಟ್ಟಲು ಮೆಂತ್ಯ ಸೊಪ್ಪು,3 ಈರುಳ್ಳಿ, 3 ಟೊಮೇಟೊ, ಅರ್ಧ ಬಟ್ಟಲು ಹಸಿಬಟಾಣಿ, 8 – 10 ಹಸಿಮೆಣಸಿನಕಾಯಿ, ಸ್ವಲ್ಪ ಪುದೀನ, 50 ml ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು,ಅರ್ಧ ಬಟ್ಟಲು ತೆಂಗಿನಕಾಯಿ ತುರಿ, ಸ್ವಲ್ಪ ಅರಿಶಿನ ಪುಡಿ, 2 ಚಮಚ ತುಪ್ಪ, 1 ಚಮಚ ನಿಂಬೆ ಹಣ್ಣಿನ ರಸ, 2 ಚಮಚ ಮೊಸರು,1 ಬೆಳ್ಳುಳ್ಳಿ ಗಡ್ಡೆ,ಸ್ವಲ್ಪ ಶುಂಠಿ, 1 ಚಮಚ ಧನಿಯಾ, 4 ಏಲಕ್ಕಿ, 6 ಲವಂಗ, 4 ಚಕ್ಕೆ, 1 ಸ್ಟಾರ್ ಹೂವು, 2 ಅನಾನಸ್ ಹೂವು, 1 ಚಮಚ ಸೋಂಪು ಕಾಳು, ರುಚಿಗೆ ತಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ಮೆಂತ್ಯ ಪಲಾವ್ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಅಕ್ಕಿ ಹಾಗೂ ನೀರನ್ನು ಹಾಕಿ 2 -3 ಬಾರಿ ಚೆನ್ನಾಗಿ ತೊಳೆದು ಮತ್ತೆ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ, 2 ಲವಂಗ, 2 ಚಕ್ಕೆ, 2 ಏಲಕ್ಕಿ, 1 ಸ್ಟಾರ್ ಹೂವು, 2 ಅನಾನಸ್ ಹೂವು, ಅರ್ಧ ಚಮಚ ಸೊಪ್ಪು ಕಾಳು, ಧನಿಯಾ, ಶುಂಠಿ, ಬೆಳ್ಳುಳ್ಳಿ,ಅರಿಶಿನ ಪುಡಿ, ಪುದೀನ, 1 ಚಮಚ ಎಣ್ಣೆಯನ್ನು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ ಹಾಗೂ ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಚಕ್ಕೆ, ಲವಂಗ, ಸೋಂಪು ಕಾಳು, ಏಲಕ್ಕಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಮೆಂತ್ಯ ಸೊಪ್ಪು ಹಾಗೂ ಉದ್ದನೆ ಹಚ್ಚಿದ 2 ಈರುಳ್ಳಿಯನ್ನು ಹಾಕಿ 4 – 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಸಣ್ಣಗೆ ಹಚ್ಚಿದ ಟೊಮ್ಯಾಟೊವನ್ನು ಹಾಕಿ ಸಾಫ್ಟ್ ಆಗುವವರೆಗೂ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇದಕ್ಕೆ ರುಬ್ಬಿದ ಮಸಾಲೆ, ಹಸಿಬಟಾಣಿ, ನಿಂಬೆ ಹಣ್ಣಿನ ರಸ,ಮೊಸರು, ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ 3 ಲೋಟ ನೀರನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಹೋಟಲ್ ಶೈಲಿಯಲ್ಲಿ ಮೆಂತ್ಯ ಬಾತ್ ಸವಿಯಲು ಸಿದ್ದ.