ಗಟ್ಟಿಮೇಳ ಧಾರಾವಾಹಿಗೆ ಬಿಗ್ ಶಾಕ್ ನೀಡಿದ ನೆಟ್ಟಿಗರು, ಬಿಜೆಪಿ ಕಾರ್ಯಕರ್ತರ ಅಭಿಯಾನಕ್ಕೆ ಬಾರಿ ಬೆಂಬಲ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಬಹಳ ಅತ್ಯುತ್ತಮವಾಗಿ ಮೂಡಿ ಬರುತ್ತಿರುವ ಗಟ್ಟಿಮೇಳ ಧಾರವಾಹಿ ಗೆ ಇದೀಗ ಸಂಕಷ್ಟ ಎದುರಾಗಿದೆ, ಒಂದು ವೇಳೆ ಗಟ್ಟಿಮೇಳ ಧಾರವಾಹಿಯ ನಿರ್ಮಾಣ ತಂಡ ಸರಿಯಾದ ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಖಂಡಿತ ಧಾರವಾಹಿಗೆ ಬುದ್ಧಿ ಕಲಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಒಂದು ಆರಂಭವಾಗಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯ ನಟರಾಗಿರುವ ಪವನ್ ಕುಮಾರ್ ರವರು ಕೋರೋಣ ಇಂದ ತಮ್ಮವರನ್ನು ಕಳೆದುಕೊಂಡ ಕಾರಣ ವೀಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಹೀಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಕೆಲವೊಂದು ವಿವಾದಾತ್ಮಕ ಹೇಳಿಕೆಗಳು ಬಂದಿವೆ ಎಂಬ ಕಾರಣಕ್ಕೆ ಇದೀಗ ಗಟ್ಟಿಮೇಳ ಧಾರಾವಾಹಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಮ ಮಂದಿರ ವಿಚಾರದಲ್ಲಿ ಮಾತನಾಡಿದ ಕಾರಣಕ್ಕಾಗಿ ಪವನ್ ಕುಮಾರ್ ಅವರ ವಿರುದ್ಧ ಹಲವಾರು ಜನ ಆಕ್ಷೇಪ ವ್ಯಕ್ತಪಡಿಸಿದ್ದು ಗಟ್ಟಿಮೇಳ ಧಾರಾವಾಹಿ ಕೂಡಲೇ ಪವನ್ ರವರನ್ನು ಧಾರವಾಹಿಯಿಂದ ಕೈಬಿಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ ಎಂಬ ಸಂದೇಶಗಳು ಬಾರಿ ಸಂಖ್ಯೆಯಲ್ಲಿ ಕೇಳಿ ಬಂದಿವೆ. ಅಭಿಯಾನ ಮೊದಲು ಆರಂಭದಲ್ಲಿ ಕೆಲವು ಜನರ ಬಾಯಲ್ಲಿ ಕೇಳಿ ಬಂದಿತ್ತಾದರೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಸದ್ದು ಮಾಡಲು ಆರಂಭಿಸಿದೆ. ಈ ಅಭಿಯಾನದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ

Facebook Comments

Post Author: Ravi Yadav