ಮುಂಬೈ ತಂಡದಿಂದ ಮತ್ತೊಬ್ಬ ಆಟಗಾರನನ್ನು ವರ್ಗಾವಣೆ ಮಾಡಿಸಿಕೊಂಡು ಆರ್ಸಿಬಿ, ಆರ್ಸಿಬಿ ತಂಡಕ್ಕೆ ಮತ್ತಷ್ಟು ಬಲ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಆಸ್ಟ್ರೇಲಿಯ ದೇಶದ ಆಟಗಾರರಾಗಿರುವ ಆಡಮ್ ಜಂಪ ಹಾಗೂ ಕೆನ್ ರಿಚರ್ಡ್ಸನ್ ರವರು ತಮ್ಮ ವೈಯಕ್ತಿಕ ಕಾರಣಗಳಿಂದ ಆರ್ ಸಿ ಬಿ ತಂಡವನ್ನು ಬಿಟ್ಟು ಹೋಗುವ ಮೂಲಕ ಆಸ್ಟ್ರೇಲಿಯ ದೇಶಕ್ಕೆ ಮರಳಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಅದೇ ಕಾರಣಕ್ಕಾಗಿ ಆರ್ಸಿಬಿ ತಂಡದಿಂದ ಅಧಿಕೃತ ಆದೇಶ ಪಡೆದು ಕೊಂಡು ಬಿಡುಗಡೆಯಾಗಿರುವ ಇಬ್ಬರು ಆಟಗಾರರು ಇದರ ಆಸ್ಟ್ರೇಲಿಯ ದೇಶದಲ್ಲಿ ವಿಮಾನಗಳಿಗೆ ಅನುವು ಮಾಡಿ ಕೊಡದೇ ಇರುವ ಕಾರಣ ಮುಂಬೈನಲ್ಲಿ ಸಿಲುಕಿ ಕೊಂಡಿದ್ದಾರೆ.

ಆರ್ ಸಿ ಬಿ ತಂಡವನ್ನು ಬಿಟ್ಟು ಇಬ್ಬರು ಆಟಗಾರರು ಹೊರ ಹೋಗಿ ಇನ್ನು ತಮ್ಮ ದೇಶ ತಲುಪದೇ ಇರುವ ಸಂದರ್ಭದಲ್ಲಿ ಆರ್ಸಿಬಿ ತಂಡ ಒಂದು ಹೆಜ್ಜೆ ಮುಂದೆ ಹೋಗಿ ಬಲಾಡ್ಯ ಆಟಗಾರನನ್ನು ತನ್ನ ತಂಡಕ್ಕೆ ಆಯ್ಕೆ ಮಾಡಿ ಕೊಂಡಿದ್ದೆ. ಹೌದು ಸ್ನೇಹಿತರೇ ಇದರಿಂದ ಆರ್ಸಿಬಿ ತಂಡದ ಬೌಲಿಂಗ್ ಪಡೆ ಮತ್ತಷ್ಟು ಬಲಿಷ್ಠವಾಗಲಿದೆ.

ಇದೀಗ ಬಂದಿರುವ ಐಪಿಎಲ್ ಮೂಲಗಳ ಪ್ರಕಾರ ಮುಂಬೈ ತಂಡದಲ್ಲಿ ನೆಟ್ ಬೌಲರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ನ್ಯೂಜಿಲೆಂಡ್ ತಂಡದ ಕುಗ್ಗಿಲಿನ್ ಅವರನ್ನು ಕೆನ್ ರಿಚರ್ಡ್ಸನ್ ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದು ಈ ಆಟಗಾರ ಈಗಾಗಲೇ ಬಯೋ ಬಬಲ್ ನಲ್ಲಿ ಮುಂಬೈ ತಂಡದ ಜೊತೆ ಇರುವ ಕಾರಣ ನೇರವಾಗಿ ಯಾವುದೇ ಕೊರೋನಾ ನಿಯಮಗಳನ್ನು ಅನುಸರಿಸದೇ ಆರ್ ಸಿ ಬಿ ತಂಡವನ್ನು ಸೇರ್ಪಡೆ ಮಾಡಿಕೊಳ್ಳಬಹುದು. ಒಂದು ವೇಳೆ ಅಗತ್ಯಬಿದ್ದಲ್ಲಿ ಕಂಡಿತ ಇವರ ಬೌಲಿಂಗನ್ನು ಆರ್ಸಿಬಿ ತಂಡ ಬಳಸಿ ಕೊಳ್ಳ ಬಹುದಾಗಿದೆ.

Facebook Comments

Post Author: Ravi Yadav