ದೀರ್ಘ ರಜಕ್ಕಾಗಿ ಒಂದೇ ಹುಡುಗಿಯನ್ನು 4 ಬಾರಿ ಮದುವೆಯಾದ ಭೂಪ ! ಕೊನೆಗೆ ಕಂಪನಿ ಮಾಡಿದ್ದೇನು ಗೊತ್ತಾ?

ದೀರ್ಘ ರಜಕ್ಕಾಗಿ ಒಂದೇ ಹುಡುಗಿಯನ್ನು 4 ಬಾರಿ ಮದುವೆಯಾದ ಭೂಪ ! ಕೊನೆಗೆ ಕಂಪನಿ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಒಂದೊಂದು ಕಚೇರಿಗಳಲ್ಲಿ ಒಂದೊಂದು ನಿಯಮಗಳು ಜಾರಿಯಲ್ಲಿರುತ್ತವೆ. ಇನ್ನು ಭಾರತ ದೇಶದಲ್ಲಿ ಹೋಲಿಸಿದರೆ ಕಚೇರಿಗಳಲ್ಲಿ ನಿಯಮಗಳ ಕಡಿಮೆ ಆದರೆ ಕೆಲವೊಂದು ದೇಶಗಳಲ್ಲಿ ಕಾರ್ಮಿಕ ನೀತಿಯು ಬಹಳ ಕಠಿಣವಾಗಿರುತ್ತದೆ, ಇನ್ನು ಯಾವುದೇ ದೇಶದಲ್ಲಿ ಆದರೂ ಕೂಡ ರಜಾ ದಿನಗಳ ವಿಷಯ ಬಂದಾಗ ಕಾರ್ಮಿಕರ ನೀತಿ ಒಂದರಂತೆ ಕಾಣುತ್ತದೆ ಯಾಕೆಂದರೆ ಯಾರು ಕೂಡ ಉದ್ಯೋಗಿಗಳಿಗೆ ರಜಾ ಕೊಡಲು ಮೀನಾಮೇಶ ಎಣಿಸುತ್ತಾರೆ.

ಅದರಂತೆ ಇಲ್ಲಿ ಒಬ್ಬ ಬ್ಯಾಂಕ್ ಉದ್ಯೋಗಿ ತನ್ನ ಬದುಕಿಗಾಗಿ ರಜೆ ಬೇಕು ಎಂಬ ಕಾರಣಕ್ಕೆ ರಜೆ ಪಡೆದು ಕೊಳ್ಳುವುದು ಹೋದಾಗ ಆತನಿಗೆ ಮದುವೆಗೆ ಕೇವಲ ಎಂಟು ದಿನಗಳು ಮಾತ್ರ ರಜೆ ನೀಡಲಾಗುತ್ತದೆ ಎಂಬುದು ತಿಳಿದು ಬಂದಿದೆ, ಎಂಟು ದಿನಗಳು ಸಾಕಾಗುವುದಿಲ್ಲ ಪ್ರೇಯಸಿಯ ಜೊತೆ ಹೊರಗಿನ ಪ್ರಪಂಚ ನೋಡಬೇಕು ಎಂಬ ಕಾರಣಕ್ಕೆ ಆತ ಮದುವೆಯಾಗುವುದು, ತದನಂತರ ಎಂಟು ದಿನಗಳ ಬಳಿಕ ಕಾನೂನಾತ್ಮಕವಾಗಿ ಡಿವೋರ್ಸ್ ನೀಡುವುದು ಮತ್ತೆ ಅದೇ ಹುಡುಗಿಯನ್ನು ಎಂಟನೇ ದಿನ ಮದುವೆಯಾಗಿ ಮತ್ತೆ ಎಂಟು ದಿನ ರಜೆ ಪಡೆದು ಕೊಳ್ಳುವ ಮೂಲಕ ನಾಲ್ಕು ಬಾರಿ ಮದುವೆಯಾಗಿ ಮೂರು ಬಾರಿ ಡಿವೋರ್ಸ್ 32 ದಿನಗಳ ಕಾಲ ರಜೆ ಪಡೆದುಕೊಂಡಿದ್ದಾನೆ.

ಕೊನೆಗೆ ಈತನ ಮಸಲತ್ತಿನ ಕುರಿತು ಬ್ಯಾಂಕ್ ಆಡಳಿತ ಮಂಡಳಿಗೆ ತಿಳಿದು ರಜೆ ಕೊಡಲು ನಿರಾಕರಿಸಿತು, ಕೂಡಲೇ ಉದ್ಯೋಗಿ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿ ನಿಯಮಗಳ ಪ್ರಕಾರ ಮದುವೆಗೆ ರಜಾ ನೀಡುತ್ತಿಲ್ಲ ಎಂದು ದೂರನ್ನು ನೀಡಿದ್ದ, ದೂರಿನ ಅನ್ವಯ ವಿಚಾರಣೆ ನಡೆಸಿ ಮದುವೆಗೆ ರಜೆ ನೀಡಲೇಬೇಕು ಹಾಗೂ ರಜೆ ತೆಗೆದುಕೊಂಡ 32 ದಿನಗಳಿಗೆ ವೇತನ ಕೂಡ ನೀಡಬೇಕು ಎಂಬ ಆದೇಶ ಹೊರ ಬರುತ್ತದೆ. ಆದರೆ ಇದೇ ಸಮಯದಲ್ಲಿ ಕಾನೂನು ಉಲ್ಲಂಘನೆ ಎಂಬ ಆಧಾರದ ಮೇರೆಗೆ ಉದ್ಯೋಗಿಗೆ 53 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ