ಕನ್ನಡ ಭಾಷೆ ಕುರಿತು ಹೊಸ ಶಪಥ ಮಾಡಿದ ಕಣ್ಣಿ ಅದಿರಿಂದಿ ಗಾಯಕಿ ಮಂಗ್ಲಿ ! ಶಪಥವೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಬಂಜಾರ ಶೈಲಿಯ ಜಾನಪದ ಸೊಗಡಿನ ಹಾಗೂ ವಿಭಿನ್ನ ಧ್ವನಿಯ ಮೂಲಕ ಹಾಡುಗಳನ್ನು ಹಾಡುವ ಮೂಲಕ ತೆಲುಗಿನಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಮಂಗ್ಲಿ ರವರ ಕುರಿತು ನಿಮಗೆಲ್ಲರಿಗೂ ತಿಳಿದಿರುತ್ತದೆ. ಇವರು ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಹೆಚ್ಚೇನು ಜನಪ್ರಿಯತೆಯನ್ನು ಪಡೆದುಕೊಂಡಿರಲಿಲ್ಲ

ಆದರೆ ದರ್ಶನ್ ರವರ ರಾಬರ್ಟ್ ಸಿನಿಮಾದ ಜನಪ್ರಿಯ ಹಾಡುಗಳಲ್ಲಿ ಒಂದಾದ ಕಣ್ಣೇ ಅದಿರಿಂದಿ ಹಾಡಿಗೆ ತೆಲುಗಿನಲ್ಲಿ ಧ್ವನಿ ನೀಡುವ ಮೂಲಕ ಅದರಲ್ಲಿಯೂ ರಾಬರ್ಟ್ ಸಿನಿಮಾದ ಪಂಕ್ಷನ್ ಒಂದರಲ್ಲಿ ಲೈವ್ ಆಗಿ ಹಾಡನ್ನು ಹಾಡುವ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಮಂಗ್ಲಿ ರವರು ಜನಪ್ರಿಯತೆಯನ್ನು ಪಡೆದು ಕೊಂಡರು. ಎಲ್ಲಿ ನೋಡಿದರೂ ಕೆಲವೊಂದಷ್ಟು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಮಂಗ್ಲಿ ರವರ ಹೆಸರು ಜೋರಾಗಿ ಕೇಳಿ ಬರುತ್ತಿತ್ತು.

ಹೀಗೆ ಕೇವಲ ಒಂದೇ ಹಾಡಿನ ಮೂಲಕ ಮಂಗ್ಲಿ ರವರು ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡು ಕರ್ನಾಟಕದಲ್ಲಿ ಕೂಡ ಚಿರಪರಿಚಿತ ಸೆಲೆಬ್ರೆಟಿ ಆದರು, ಇದಾದ ಬಳಿಕ ಇತ್ತೀಚೆಗೆ ಪ್ರಚಾರಕ್ಕಾಗಿ ಆಗಮಿಸಿದಾಗ ಮಂಗ್ಲಿ ರವರು ಕನ್ನಡದ ಅಭಿಮಾನಿಗಳಿಗೆ ನಾನು ಮನ ಸೋತಿದ್ದೇನೆ, ಕನ್ನಡ ಬಹಳ ಸುಂದರವಾದ ಭಾಷೆ, ನಾನು ಈಗಾಗಲೇ ಸ್ವಲ್ಪ ಕನ್ನಡವನ್ನು ಮಾತನಾಡಬಲ್ಲೆ ಖಂಡಿತ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಂಪೂರ್ಣವಾಗಿ ಕನ್ನಡ ಕಲಿಯುತ್ತೇನೆ ಎಂದು ಭರವಸೆ ನೀಡಿದ್ದಾರೆ.

Post Author: Ravi Yadav