ಅಬ್ದುಲ್ ಕಲಾಂ ರವರು ವಹಿಸಿದ ಜವಾಬ್ದಾರಿಯನ್ನು ಅರ್ಧಕ್ಕೆ ಬಿಟ್ಟ ತಮಿಳು ಹಾಸ್ಯ ನಟ ವಿವೇಕ್ ! ಏನು ಗೊತ್ತಾ??

ಅಬ್ದುಲ್ ಕಲಾಂ ರವರು ವಹಿಸಿದ ಜವಾಬ್ದಾರಿಯನ್ನು ಅರ್ಧಕ್ಕೆ ಬಿಟ್ಟ ತಮಿಳು ಹಾಸ್ಯ ನಟ ವಿವೇಕ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ತಮಿಳು ಚಿತ್ರರಂಗದಲ್ಲಿ ಹಾಗೂ ತೆಲುಗಿನ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಕೆಲಸ ಮಾಡುವ ಮೂಲಕ ಜನರನ್ನು ನಕ್ಕುನಲಿಸುವ ರಲ್ಲಿ ಯಶಸ್ವಿಯಾಗಿದ್ದ ಖ್ಯಾತ ನಟ ವಿವೇಕ್ ರವರು ಇಹಲೋಕ ತ್ಯಜಿಸಿರುವುದು ನಿಮಗೆಲ್ಲರಿಗೂ ತಿಳಿದಿದೆ. ಕರ್ನಾಟಕದ ಗಣ್ಯ ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಚಿತ್ರರಂಗಗಳ ಸೆಲೆಬ್ರೆಟಿಗಳು ಅವರಿಗೆ ಸಂತಾಪ ಸೂಚಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಹಾಸ್ಯನಟ ವಿವೇಕ್ ರವರು ಕರ್ನಾಟಕದಲ್ಲಿಯೂ ಕೂಡ ಚಿರಪರಿಚಿತ ಮುಖ ವಾಗಿದ್ದರು, ಅದರಲ್ಲಿಯೂ ಕನ್ನಡದ ವರಾಗಿದ್ದು ರಶ್ಮಿಕಾ ರವರು ಒಮ್ಮೆ ಸಾಲುಮರದ ತಿಮ್ಮಕ್ಕ ರವರ ಕುರಿತು ಮಾತನಾಡಲು ತಡವರಿಸಿದಾಗ ಸಾಲುಮರದ ತಿಮ್ಮಕ್ಕ ರವರ ಕುರಿತು ಹೇಳಿದ ಮಾತುಗಳು ಇಂದಿಗೂ ಕೂಡ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

ಇನ್ನು ವಿವೇಕ್ ರವರು ಹಲವಾರು ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಪಾಲ್ಗೊಂಡಿದ್ದ ಕಾರಣ ಸಾಲುಮರದ ತಿಮ್ಮಕ್ಕ ರವರ ಕುರಿತು ಚೆನ್ನಾಗಿ ತಿಳಿದಿತ್ತು, ಇವರ ಸಾಮಾಜಿಕ ಕಳಕಳಿಯನ್ನು ನೋಡಿದ್ದ ಅಬ್ದುಲ್ ಕಲಾಂರವರು ವಿವೇಕ ರವರನ್ನು ಆತ್ಮೀಯ ಸ್ನೇಹಿತರು ಎಂದು ಕೊಂಡಿದ್ದರಂತೆ, ಅದೇ ಕಾರಣಕ್ಕಾಗಿ ನನಗೆ ಒಂದು ಜವಾಬ್ದಾರಿ ನೀಡುತ್ತಿದ್ದೇನೆ ಎಂದು ಹೇಳಿ ಎರಡು ಹಂತದಲ್ಲಿ ಜವಾಬ್ದಾರಿಗಳನ್ನು ನೀಡಿದ್ದರು, ಮೊದಲಿಗೆ 10 ಲಕ್ಷ ಗಿಡಗಳನ್ನು ನೀಡುವಂತೆ ಅಬ್ದುಲ್ ಕಲಾಂರವರು ವಿವೇಕ್ ರವರಿಗೆ ಹೇಳಿದ್ದರು. ಅಬ್ದುಲ್ ಕಲಾಂ ರವರ ಮಾತಿನಂತೆ ಗ್ರೀನ್ ಕಲಾಂ ಎಂಬ ಅಭಿಯಾನದಡಿಯಲ್ಲಿ ಮರಗಳನ್ನು ನೆಡಲು ಮುಂದಾದಾಗ ನನ್ನ ಹೆಸರು ಬೇಡ ಎಂದು ಅಬ್ದುಲ್ ಕಲಾಂ ರವರು ಹೇಳಿದರು,

ಕೂಡಲೇ ಗ್ರೀನ್ ಗ್ಲೋಬ್ ಎಂದು ಹೆಸರು ಬದಲಾಯಿಸಿ ಕೆಲವೇ ವರ್ಷಗಳಲ್ಲಿ 20 ಲಕ್ಷ ಮರಗಳನ್ನು ನೆಟ್ಟರು, ಇದನ್ನು ನೋಡಿದ ಅಬ್ದುಲ್ ಕಲಾಂರವರು ನಾನು ನೀಡಿದ ಜವಾಬ್ದಾರಿ ಚಿಕ್ಕದಾಗಿತ್ತು ಎನಿಸುತ್ತದೆ ಒಂದು ಕೋಟಿ ಮರವನ್ನು ನೆಡು ಎಂದು ವಿವೇಕ ರವರಿಗೆ ಹೇಳಿದ್ದರು, ವಿವೇಕ್ ರವರು ಮತ್ತೆ ಆರಂಭ ಮಾಡಿ 33 ಲಕ್ಷ ಗಿಡಗಳನ್ನು ನೆಟ್ಟಿದ್ದರು, ಆದರೆ ಇದೀಗ ಅವರು ಇಹಲೋಕ ತ್ಯಜಿಸಿದ್ದಾರೆ, ಅಬ್ದುಲ್ ಕಲಾಂರವರು ನೀಡಿರುವ ಜವಾಬ್ದಾರಿಯನ್ನು ಅರ್ಧಕ್ಕೆ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಅದೇ ಕಾರಣಕ್ಕಾಗಿ ಇದೀಗ ತಮಿಳು ಚಿತ್ರರಂಗದ ದಿಗ್ಗಜರು ಈ ಅಭಿಯಾನವನ್ನು ಮುಂದುವರಿಸಿ ಉಳಿದ 67 ಲಕ್ಷ ಸಸಿಗಳನ್ನು ನೆಡಲು ಮಾತುಕತೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.