ಆರ್ಸಿಬಿ ಗೆ ಕೊರೋನಾ ಶಾಕ್ ! ದೇವದತ್ ರವರ ಬದಲು ಸ್ಥಾನ ಪಡೆಯಬಹುದಾದ ಮೂರು ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಟೂರ್ನಿಗೆ ಇನ್ನು ಕೆಲವೇ ಕೆಲವು ಬೆರಳೆಣಿಕೆಯ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ಆರಂಭಿಕ ಆಟಗಾರ ಹಾಗೂ ಕಳೆದ ಸೀಸನ್ನಲ್ಲಿ ಭರವಸೆ ಮೂಡಿಸುವಂತಹ ಬ್ಯಾಟಿಂಗ್ ಮಾಡಿದ ದೇವದತ್ ಪಡಿಕಲ್ ರವರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಇದರಿಂದ ಭಾರತಕ್ಕೆ ಆರಂಭಿಕರ ಸಮಸ್ಯೆ ಮತ್ತೊಮ್ಮೆ ಕಾಣಬಹುದಾದ ಸಾಧ್ಯತೆ ಇದೆ

ಕಳೆದ ಬಾರಿ ಒಂದೆಡೆ ಆಸ್ಟ್ರೇಲಿಯಾ ದೇಶದ ಆರಂಭಿಕ ಆಟಗಾರ ಅರೋನ್ ಫಿಂಚ್ ರವರು ವಿಫಲವಾಗುತ್ತಿರುವ ಸಂದರ್ಭದಲ್ಲಿ ಆರ್ಸಿಬಿ ತಂಡದಲ್ಲಿ ಗಟ್ಟಿಯಾಗಿ ನಿಂತು ಇನ್ನಿಂಗ್ಸ್ ಕಟ್ಟಿದ ದೇವದತ್ತ ಪಡಿಕಲ್ ರವರು ಈ ಬಾರಿ ದೇಶಿಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಐಪಿಎಲ್ ನಲ್ಲಿಯೂ ಕೂಡ ಭರ್ಜರಿ ಪ್ರದರ್ಶನ ನೀಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಆರ್ಸಿಬಿ ತಂಡ ಇತ್ತು.

ಆದರೆ ಇದೀಗ ಕೋರೋನ ಬಂದಿರುವುದು ನಿಜಕ್ಕೂ ಆರ್ಸಿಬಿಗೆ ತಲೆ ನೋವಾಗಿದೆ, ಅದೇ ಸಮಯದಲ್ಲಿ ದೇವದತ್ ಪಡಿಕಲ್ ರವರ ಸ್ಥಾನವನ್ನು ಮತ್ಯಾವ ಆಟಗಾರರು ತುಂಬಬಹುದು ಎಂಬುದರ ಕುರಿತು ಆರ್ಸಿಬಿ ತಂಡದಲ್ಲಿ ಚರ್ಚೆ ನಡೆಯುತ್ತಿದ್ದು ಮೊಹಮ್ಮದ್ ಅಜರುದ್ದೀನ್, ನ್ಯೂಜಿಲೆಂಡ್ ದೇಶದ ಪಿನ್ ಅಲೆನ್, ಹಾಗೂ ದೇಶೀಯ ಪ್ರತಿಭೆ ರಜತ್ ಪಾಟೀದಾರ್ ರವರು ದೇವದತ್ ಪಡಿಕಲ್ ಅವರ ಸ್ಥಾನವನ್ನು ತುಂಬ ಬಹುದಾಗಿದೆ. ಮೊದಲ ಕೆಲವು ಪಂದ್ಯಗಳಿಗೆ ದೇವದತ್ ಪಡಿಕಲ್ ರವರು ಆಟವಾಡಲು ಸಾಧ್ಯವೇ ಇಲ್ಲ. ಆದ ಕಾರಣ ಪರ್ಯಾಯ ಆಟಗಾರರ ಹುಡುಕಾಟದಲ್ಲಿ ಆರ್ಸಿಬಿ ತಂಡ ಇದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Facebook Comments

Post Author: Ravi Yadav