ಕರಿಬೇವು ರೈಸ್ ಮಾಡಲು 100% ಈರುಳ್ಳಿ ಬೆಳ್ಳುಳ್ಳಿ ಬೇಕಿಲ್ಲ, ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕರಿಬೇವು ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಕರಿಬೇವು ರೈಸ್ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಕರಿಬೇವು, 50ml ಎಣ್ಣೆ, 1 ಲೋಟ ಅಕ್ಕಿಯಲ್ಲಿ ಮಾಡಿದ ಅನ್ನ, 5 – 6 ಒಣಮೆಣಸಿನಕಾಯಿ, 2 ಚಮಚ ಕಡ್ಲೆಬೇಳೆ, 2 ಚಮಚ ಉದ್ದಿನಬೇಳೆ, ಸ್ವಲ್ಪ ಕಡಲೇಬೀಜ, ಸ್ವಲ್ಪ ಸಾಸುವೆ, 5 – 6 ಗೋಡಂಬಿ, 1 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಕರಿಬೇವು ರೈಸ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಕಡ್ಲೆಬೇಳೆ, 1 ಚಮಚ ಉದ್ದಿನಬೇಳೆಯನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ಎಣ್ಣೆಯಿಂದ ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಉಳಿದ ಎಣ್ಣೆಗೆ 4 ಒಣ ಮೆಣಸಿನಕಾಯಿಯನ್ನು ಹಾಕಿ ಗರಿ ಗರಿ ಯಾಗುವವರೆಗೂ ಫ್ರೈ ಮಾಡಿಕೊಂಡು ಮತ್ತೆ ಅದೇ ಬಟ್ಟಲಿಗೆ ಹಾಕಿ ಕೊಳ್ಳಿ. ನಂತರ ಅದೇ ಬಾಣಲೆಗೆ ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ 4 – 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ಪುಡಿಮಾಡಿಕೊಳ್ಳಿ. ನಂತರ ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾದ ನಂತರ ಸಾಸುವೆ ಯನ್ನು ಹಾಕಿ ಸಿಡಿಯಲು ಬಿಡಿ. ಸಿಡಿದ ನಂತರ ಇದಕ್ಕೆ ಕಡಲೆಬೀಜವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಕಡ್ಲೆಬೇಳೆ, ಉದ್ದಿನಬೇಳೆ, ಉಳಿದ 2 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಮಾಡಿಕೊಂಡ ಅನ್ನ ಹಾಗೂ ಅದಕ್ಕೆ ಬೇಕಾಗುವಷ್ಟು ಪುಡಿಯನ್ನು ಹಾಕಿ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಕರಿಬೇವು ರೈಸ್ ಸವಿಯಲು ಸಿದ್ಧ.

Post Author: Ravi Yadav