ಚೀನಾಗೆ ಬಿಡೆನ್ ಶಾಕ್ ! ಭಾರತಕ್ಕೆ ಸಿಹಿಸುದ್ದಿ ನೀಡಿದ ಅಮೆರಿಕ ! ಇದು ನವಭಾರತದ ತಾಕತ್ತು.

ಚೀನಾಗೆ ಬಿಡೆನ್ ಶಾಕ್ ! ಭಾರತಕ್ಕೆ ಸಿಹಿಸುದ್ದಿ ನೀಡಿದ ಅಮೆರಿಕ ! ಇದು ನವಭಾರತದ ತಾಕತ್ತು.

ನಮಸ್ಕಾರ ಸ್ನೇಹಿತರೇ ಅಮೇರಿಕಾ ದೇಶದ ಮಾಜಿ ಅಧ್ಯಕ್ಷ ಟ್ರಂಪ್ ಅವರು ಅಧಿಕಾರದಲ್ಲಿ ಇರುವ ಸಂದರ್ಭದ ವರೆಗೂ ಅಮೆರಿಕ ದೇಶದ ಭಾರತದ ಪರ ನಿಲ್ಲುತ್ತಿತ್ತು, ಭಾರತ ಎಂದರೆ ನನ್ನ ಆಪ್ತ ಸ್ನೇಹಿತ ಎಂದು ಬಹಿರಂಗವಾಗಿ ಅಮೇರಿಕ ದೇಶ ಹೇಳುವಷ್ಟು ಸಂಬಂಧಗಳನ್ನು ಕಾಪಾಡಿಕೊಳ್ಳಲಾಗಿದೆ, ಆದರೆ ಬಿಡೆನ್ ರವರು ಅಧಿಕಾರಕ್ಕೆ ಬಂದ ಮೇಲೆ ಚೀನಾ ದೇಶದ ಕಡೆಗೆ ಅಮೇರಿಕಾ ದೇಶದ ಇರಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು, ಕೆಲವೊಂದು ಆಲೋಚನೆಗಳನ್ನು ಮಾಡಿದರೇ ಈಗಲೂ ಕೂಡ ಈ ಮಾತು ಸತ್ಯವೆನಿಸುತ್ತದೆ ಯಾಕೆಂದರೆ ಬಹುತೇಕ ವಿಚಾರಗಳಲ್ಲಿ ಅಮೇರಿಕ ದೇಶ ತಟಸ್ಥವಾಗಿ ನಿಂತಿದೆ, ಅಥವಾ ಪರೋಕ್ಷವಾಗಿ ಚೀನಿಯರ ಪರವಾಗಿ ಧ್ವನಿ ಎತ್ತುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಪ್ರಶ್ನೆಗೆ ನಮ್ಮ ಬಳಿಯಾಗಲಿ ಅಥವಾ ನಿಮ್ಮ ಬಳಿಯಾಗಲಿ ಯಾರ ಬಳಿಯೂ ಉತ್ತರವಿಲ್ಲ ಆದರೆ ಇದೀಗ ಒಂದು ಘಟನೆ ನಡೆದಿದ್ದು ಅಮೇರಿಕ ದೇಶ ಚೀನಾ ದೇಶವನ್ನು ಆಯ್ಕೆ ಮಾಡಿಕೊಳ್ಳ ಬಹುದಾದ ಆಯ್ಕೆ ಇದ್ದರೂ ಕೂಡ ಅದು ಸಾಧ್ಯವಿಲ್ಲವೆಂಬಂತೆ ಕಾಣಿಸುತ್ತಿದೆ, ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಎಲ್ಲೆಡೆ ಕೋರೋನ ಲಸಿಕೆಗಳನ್ನು ಹಂಚಲಾಗುತ್ತಿದೆ.

ಬಹುತೇಕ ರಾಷ್ಟ್ರಗಳು ಭಾರತದ ಕದ ತಟ್ಟಿ ಲಸಿಕೆ ನೀಡುವಂತೆ ಮನವಿ ಮಾಡುತ್ತಿವೆ, ಆದರೆ ಅಮೇರಿಕ ದೇಶ ತನ್ನದೇ ಆದ ಲಸಿಕೆಯನ್ನು ತಯಾರಿಸಿದೆ. ಲಸಿಕೆ ತಯಾರಾದರೂ ಕೂಡ ಇಡೀ ದೇಶದ ಪ್ರಜೆಗಳಿಗೆ ನೀಡಬೇಕು ಎಂದರೆ ಕೋಟಿಗಳ ಲೆಕ್ಕದಲ್ಲಿ ಉತ್ಪಾದನೆ ಮಾಡಬೇಕಾಗುತ್ತದೆ, ಅದೇ ಕಾರಣಕ್ಕಾಗಿ ಇದೀಗ ಅಮೇರಿಕ ದೇಶ ಚೀನಾ ದೇಶವನ್ನು ಉತ್ಪಾದನೆಗೆ ಆಯ್ಕೆ ಮಾಡಿಕೊಳ್ಳುವ ಆಯ್ಕೆ ಇದ್ದರೂ ಕೂಡ ಭಾರತದ ಜೊತೆ ತನ್ನ ಲಸಿಕೆಗಳನ್ನು ಉತ್ಪಾದನೆ ಮಾಡಿಕೊಡಿ ಎಂದು ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ, ಅಮೇರಿಕಾ ದೇಶದ ಲಸಿಕೆಯನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಬೇಕು ಎಂಬ ಮನವಿಯನ್ನು ಬಿಡೆನ್ ಮುಂದಿಟ್ಟಿದ್ದಾರೆ, ಈಗಾಗಲೇ ಭಾರತದಲ್ಲಿ ಹಲವಾರು ಲಸಿಕೆಗಳು ತಯಾರಾಗುತ್ತಿದ್ದರೂ ಕೂಡ ಚೀನಾದಲ್ಲಿ ಉತ್ಪಾದನಾ ಘಟಕಗಳು ಖಾಲಿ ಹೊಡೆಯುತ್ತಿವೆ ಆದರೂ ಕೂಡ ಅಮೇರಿಕ ದೇಶ ಭಾರತ ವನ್ನು ಆಯ್ಕೆ ಮಾಡಿಕೊಂಡಿದೆ.