ಹೊಸ ಮೈಲುಗಲ್ಲು ಸೃಷ್ಟಿಸಿದ ಸೇನೆ ! ಪಾಕ್, ಚೀನಾಗೆ ಸೆಡ್ಡು ! ಇದು ಆತ್ಮ ನಿರ್ಭಾರ್ ನ ಹೊಸ ಭಾರತ

ಹೊಸ ಮೈಲುಗಲ್ಲು ಸೃಷ್ಟಿಸಿದ ಸೇನೆ ! ಪಾಕ್, ಚೀನಾಗೆ ಸೆಡ್ಡು ! ಇದು ಆತ್ಮ ನಿರ್ಭಾರ್ ನ ಹೊಸ ಭಾರತ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತವು ಸ್ವತಂತ್ರ ಕಂಡು ಎಪ್ಪತ್ತು ವರ್ಷಗಳಿಗೂ ಹೆಚ್ಚಿನ ವರ್ಷಗಳನ್ನು ಕಳೆದರೂ ಕೂಡ ವಿದೇಶಗಳಿಂದ ರಕ್ಷಣಾ ಸಾಮಾಗ್ರಿಗಳನ್ನು ಆಮದು ಮಾಡಿ ಕೊಳ್ಳುವುದನ್ನು ನಿಲ್ಲಿಸಿರಲಿಲ್ಲ, ಯಾವುದೇ ಒಂದು ದೇಶದ ಅರ್ಥ ವ್ಯವಸ್ಥೆಗೆ ರಕ್ಷಣಾ ವ್ಯವಸ್ಥೆ ಬಹು ಮುಖ್ಯ ಪಾತ್ರವಹಿಸುತ್ತದೆ ಆದರೂ ಭಾರತವು ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ರಕ್ಷಣಾ ಆಮದು ಮಾಡಿಕೊಳ್ಳುವ ದೇಶವಾಗಿ ಇಷ್ಟು ದಿವಸ ಗುರುತಿಸಿಕೊಂಡಿತ್ತು, ಇದು ನಿಜಕ್ಕೂ ವಿಪರ್ಯಾಸವೇ ಸರಿ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಸೇನೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸಂಸ್ಥೆಯು ಭಾರತಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸುವುದು ಅಷ್ಟೇ ಅಲ್ಲದೆ ವಿದೇಶಗಳಿಗೂ ಕೂಡ ರಫ್ತು ಮಾಡ ಬಹುದಾದಂತಹ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆ ಹಾಗೂ ಅನ್ವೇಷಣೆಯನ್ನು ಆರಂಭಿಸಿದೆ, ಕಳೆದ 5 ವರ್ಷಗಳಲ್ಲಿ 34 ಸಾವಿರ ಕೋಟಿಗೂ ಹೆಚ್ಚು ರಕ್ಷಣಾ ಸಾಮಗ್ರಿಗಳು ಇತರ ದೇಶಕ್ಕೆ ರಪ್ತು ಗೊಂಡಿವೆ, ಇದು ಕೇವಲ ಆರಂಭವಾದರೂ ಕೂಡ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಲಕ್ಷ ಕೋಟಿಗಳಲ್ಲಿ ಇರಲಿದೆ ಎಂಬುದು ಸತ್ಯ.

ಇದೀಗ ಇದೇ ರೀತಿಯ ಮತ್ತೊಂದು ಹೆಜ್ಜೆಯನ್ನು ಇಟ್ಟಿರುವ ಭಾರತೀಯ ಸೇನೆಯು ರಾಜಸ್ಥಾನ ಪೋಕ್ರಾನ್ ಪ್ರದೇಶದಲ್ಲಿ, ಸ್ವದೇಶಿ ನಿರ್ಮಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಪರಿಶೀಲಿಸಿದೆ, ಸುತ್ತ ಮುತ್ತ 40 ಕಿಲೋ ಮೀಟರುಗಳ ಆಸುಪಾಸಿನಲ್ಲಿ ವಿಮಾನಗಳು ಕಂಡು ಬಂದರೇ ಕ್ಷಣಮಾತ್ರದಲ್ಲಿ ಉಡಿಸ್ ಮಾಡಬಹುದಾದ ಆಕಾಶ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ, ಆದರೆ ವಿಪರ್ಯಾಸವೇನು ಗೊತ್ತೆ ಈ ಸುದ್ದಿ ಯಾವುದೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಲ್ಲ ಯಾಕೆಂದರೆ ಎಲ್ಲರಿಗೂ ಸಿಡಿ ಮುಖ್ಯವಾಗಿದೆ.