ರಶ್ಮಿಕ ರವರಿಗೆ ಖುಲಾಯಿಸಿದ ಅದೃಷ್ಟ, ಅಮಿತಾಬ್ ಜೊತೆ ನಟಿಸಲು ಪಡೆದುಕೊಂಡ ಸಂಭಾವನೆ ಎಷ್ಟು ಕೋಟಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರದ ದಿನಗಳಲ್ಲಿ ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿಯೂ ಕೂಡ ಸಾಲು-ಸಾಲು ಯಶಸ್ಸಿನ ಚಿತ್ರಗಳನ್ನು ನೀಡುವ ಮೂಲಕ ಸದ್ದು ಮಾಡಿ ತಮಿಳು ಚಿತ್ರರಂಗಕ್ಕೆ ಕೂಡ ಪಾದರ್ಪಣೆ ಮಾಡಿರುವ ರಶ್ಮಿಕಾ ರವರು ಈಗಾಗಲೇ ಬಾಲಿವುಡ್ ಚಿತ್ರರಂಗದ ಕದ ತಟ್ಟಿದ್ದಾರೆ.

ಬಾಲಿವುಡ್ ಚಿತ್ರರಂಗದ ಬಹು ನಿರೀಕ್ಷಿತ ಮ್ಜನು ಚಿತ್ರದಲ್ಲಿ ನಟನೆ ಮಾಡುತ್ತಿರುವ ರಶ್ಮಿಕಾ ಈಗಾಗಲೇ ಅದಕ್ಕಾಗಿ ಪ್ರತ್ಯೇಕ ವಾಗಿ ಮುಂಬೈನಲ್ಲಿ ನೆಲೆಸಲು ಮನೆಯೊಂದನ್ನು ಕೂಡ ಖರೀದಿ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ, ಈ ಮುನ್ನ ತೆಲುಗಿನಲ್ಲಿ ನಟಿಸಲು ಹೈದರಾಬಾದ್ ನಲ್ಲಿ ಮನೆ ಖರೀದಿ ಮಾಡಿದ್ದ ರಶ್ಮಿಕಾ ರವರು ಇದೀಗ ಮುಂಬೈನಲ್ಲಿ ಕೂಡ ಸ್ವಂತ ಮನೆ ಹೊಂದಿದ್ದಾರೆ.

ಇನ್ನು ಈ ಚಿತ್ರದ ಚಿತ್ರೀಕರಣ ಇದೀಗ ಆರಂಭವಾಗಿರುವ ಬೆನ್ನಲ್ಲೇ, ಅಮಿತಾ ಬಚ್ಚನ್ ರವರ ಜೊತೆ ಚಿತ್ರದಲ್ಲಿ ನಟನೆ ಮಾಡಲು ರಶ್ಮಿಕ ಅವರು ಸಹಿ ಹಾಕಿರುವ ಸುದ್ದಿ ಕೇಳಿ ಬಂದಿದೆ, ಹಲವಾರು ದಿನಗಳಿಂದ ಸಂಭಾವನೆ ಕುರಿತು ನಡೆಯುತ್ತಿದ್ದ ಡೀಲ್ ಇದೀಗ ಓಕೆ ಆಗಿದ್ದು, ರಶ್ಮಿಕಾ ರವರು ಈ ಸಿನಿಮಾದಲ್ಲಿ ನಟನೆ ಮಾಡಲು ಬರೋಬ್ಬರಿ ನಾಲ್ಕು ಕೋಟಿ ಬೇಡಿಕೆ ಇಟ್ಟಿದ್ದರಂತೆ, ನಿರ್ಮಾಪಕರು ರಶ್ಮಿಕ ರವರ ಬೇಡಿಕೆಗೆ ಒಪ್ಪಿಕೊಂಡು ಇದೀಗ ಅಧಿಕೃತವಾಗಿ ಸಿನಿಮಾಗೆ ಡೇಟಾ ಬುಕ್ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಇದೇ ವರ್ಷದ ಏಪ್ರಿಲ್ ನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ ಹಾಗೂ ಅನುಭವಿ ನಟಿ ನೀನಾ ಗುಪ್ತಾ ರವರು ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬುದು ತಿಳಿದು ಬಂದಿದೆ.

Post Author: Ravi Yadav