ಮತ್ತೊಂದು ಟಿಆರ್ಪಿ ಲಿಸ್ಟ್ ಬಿಡುಗಡೆ ! ಜೊತೆ ಜೊತೆಯಲಿ ಬಿಗ್ ಬಾಸ್ ಗೆ ಶಾಕ್ ನೀಡಿದ ಜನತೆ ! ಯಾವ ಧಾರವಾಹಿಗಳು ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಮೇಲೆ ಇದೇ ಮೊಟ್ಟಮೊದಲ ಬಾರಿಗೆ ಟಿಆರ್ಪಿ ಲಿಸ್ಟ್ ಬಿಡುಗಡೆಯಾಗಿದೆ. ವಿಪರ್ಯಾಸವೇನೆಂದರೆ ಇಷ್ಟು ದಿವಸ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಮೊದಲನೇ ವಾರದಲ್ಲಿ ಧಾರವಾಹಿಗಳ ಮುಂದೆ ಮಂಡಿಯೂರಿದೇ, ಮೊದಲನೇ ಸ್ಥಾನ ಬಿಡಿ ಟಾಪ್ ಐದರ ಲಿಸ್ಟಿನಲ್ಲಿ ಕೂಡ ಸ್ಥಾನ ಪಡೆದುಕೊಳ್ಳುವಲ್ಲಿ ಬಿಗ್ ಬಾಸ್ ಕಾರ್ಯಕ್ರಮ ವಿಫಲವಾಗಿದೆ.

ಇನ್ನು ತನ್ನ ಸಮಯ ಬದಲಾವಣೆ ಮಾಡಿದರೂ ಕೂಡ ಕಳೆದ ವಾರ ಎರಡನೇ ಸ್ಥಾನಕ್ಕೆ ಜಾರಿದ್ದ ಸತ್ಯ ಧಾರವಾಹಿ ಈ ವಾರ ಮತ್ತೊಮ್ಮೆ ತನ್ನ ಪ್ರಥಮ ಸ್ಥಾನವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿದೆ. ಇನ್ನು ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಧಾರವಾಹಿಯ ಮುಂದುವರೆದಿದ್ದು ಕಳೆದ ವಾರ ಈ ಧಾರವಾಹಿ ಮೂರನೇ ಸ್ಥಾನಕ್ಕೆ ಜಾರಿತ್ತು.

ಇನ್ನು ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಗಳನ್ನು ಮೂಲಕ ಮತ್ತೊಮ್ಮೆ ತನ್ನ ಮೂಲ ಮೊದಲನೇ ಸ್ಥಾನವನ್ನು ಪಡೆದುಕೊಂಡಿದ್ದ ಜೊತೆ ಜೊತೆಯಲ್ಲಿ ದಾರವಾಹಿ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಅವರ ಮದುವೆ ಮಾಡದೆ ಕಥೆ ಎಳೆದ ಕಾರಣಕ್ಕೆ ಇರಬಹುದು ಮತ್ತೊಮ್ಮೆ ಮೂರನೇ ಸ್ಥಾನಕ್ಕೆ ಜಾರಿದೆ. ನಾಲ್ಕನೇ ಸ್ಥಾನದಲ್ಲಿ ಜೀ ಕನ್ನಡದ ಮತ್ತೊಂದು ಧಾರವಾಹಿ ನಾಗಿಣಿ ಭಾಗ-2 ಧಾರವಾಹಿ ಸ್ಥಾನ ಪಡೆದುಕೊಂಡಿದೆ. ಐದನೇ ಸ್ಥಾನದಲ್ಲಿ ಪಾರು ಧಾರವಾಹಿ ಸ್ಥಾನ ಪಡೆದು ಕೊಂಡಿದೆ. ಇನ್ನು ಈ ವಾರವೂ ಕೂಡ ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಗಳು ಟಾಪ್ ಐದರ ಸಾಲಿಗೆ ಲಗ್ಗೆಯಿಡಲು ವಿಫಲವಾಗಿದೆ.

Post Author: Ravi Yadav