ಉತ್ತರ ಕರ್ನಾಟಕ ವಿಶೇಷ ಈ ಚಟ್ನಿಯನ್ನು ಮಾಡಿ ನೋಡಿ, ಮನೆಯವರೆಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.

ಉತ್ತರ ಕರ್ನಾಟಕ ವಿಶೇಷ ಈ ಚಟ್ನಿಯನ್ನು ಮಾಡಿ ನೋಡಿ, ಮನೆಯವರೆಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಉತ್ತರ ಕರ್ನಾಟಕ ವಿಶೇಷ ಬೆಟಗೇರಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಬೆಟಗೇರಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಅರಿಶಿಣ ಪುಡಿ, 3 – 4 , ಸ್ವಲ್ಪ ಕರಿಬೇವು, 3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಸಕ್ಕರೆ,1 ಬಟ್ಟಲು ಹುರಿಗಡಲೆ,1 ಬಟ್ಟಲು ಮೊಸರು, ಸ್ವಲ್ಪ ಕೊತ್ತಂಬರಿ ಸೊಪ್ಪು.

ಬೆಟಗೇರಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅರಿಶಿನ ಪುಡಿಯನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಜಜ್ಜಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಲು ಬಿಡಿ. 2 ನಿಮಿಷಗಳ ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹಾಗೂ 2 ಚಮಚ ಸಕ್ಕರೆಯನ್ನು ಹಾಕಿ ಸಕ್ಕರೆ ಕರಗುವವರೆಗೂ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.

ಮತ್ತೊಂದು ಕಡೆ ಮಿಕ್ಸಿ ಜಾರಿಗೆ 1 ಬಟ್ಟಲು ಹುರಿಗಡಲೆ ಹಾಕಿ ನುಣ್ಣಗೆ ಪುಡಿ ಪುಡಿಮಾಡಿಕೊಳ್ಳಿ. ನಂತರ ಮತ್ತೊಂದು ಬಟ್ಟಲಿಗೆ 1 ಬಟ್ಟಲು ಗಟ್ಟಿ ಮೊಸರಿಗೆ ಹುರಿಗಡಲೆ ಪುಡಿಯನ್ನು ಹಾಕಿ ಗಂಟು ಕಟ್ಟದ ಹಾಗೆ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಸಹ ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಬಾಣಲೆಯಲ್ಲಿರುವ ಫ್ರೈ ಮಾಡಿಕೊಂಡ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿದರೆ ಉತ್ತರ ಕರ್ನಾಟಕ ವಿಶೇಷ ಬೆಟಗೇರಿ ಚಟ್ನಿ ಸವಿಯಲು ಸಿದ್ಧ.