ನಿನ್ನನ್ನು ಕಂಡರೆ ಇಷ್ಟ ಆಗಿದ್ದು ಹೇಳಿ ಉಲ್ಟಾ ಹೊಡೆದ ವೈಷ್ಣವಿ ಗೌಡ ! ಯಾವ ಸ್ಪರ್ಧೆಯಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಇಡೀ ಕರ್ನಾಟಕದ ಎಲ್ಲೆಡೆ ಜನಪ್ರಿಯತೆ ಪಡೆದು ಕೊಂಡು ಇದೀಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ತೆರಳಿರುವ ಸನ್ನಿಧಿ ಪಾತ್ರದಾರಿ ಖ್ಯಾತಿಯ ವೈಷ್ಣವಿ ಗೌಡ ರವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ಆಟದ ವೈಖರಿಯ ಮೂಲಕ ಉತ್ತಮ ಹೆಸರು ಗಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರು ಚೆನ್ನಾಗಿ ಆಟ ವಾಡುತ್ತಿಲ್ಲ ಬಹಳ ಸೈಲೆಂಟಾಗಿ ಇರುತ್ತಿದ್ದರೆ ಎಂದರೂ ಕೂಡ,

ವೈಷ್ಣವೀ ರವರ ನಿಜ ಜೀವನದ ಗುಣ ಹೀಗೆ ಇರಬಹುದು ಬಿಗ್ ಬಾಸ್ ಮನೆ ಎಂದ ತಕ್ಷಣ ಎಲ್ಲರೂ ಒಂದೇ ರೀತಿ ಇರಬೇಕು ಎಂದೇನಿಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ. ಒಟ್ಟಿನಲ್ಲಿ ವೈಷ್ಣವೀ ರವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುವ ರೀತಿಯ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಇಷ್ಟು ದಿವಸ ಸೈಲೆಂಟಾಗಿದ್ದ ವೈಷ್ಣವಿ ರವರು ಇದೀಗ ಒಂದೇ ಒಂದು ಹೇಳಿಕೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಒಳಗಾಗುವಂತೆ ಮಾಡಿದ್ದಾರೆ.

ಹೌದು ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ನೀಡಿದ ವೈರಸ್ ಟಾಸ್ಕ್ ವಿಫಲಗೊಂಡ ಕಾರಣ ಬಿಗ್ ಬಾಸ್ ಟಾಸ್ಕ್ ವಿಫಲವಾಗಲು ಯಾರು ಕಾರಣ ಎಂದು ತಿಳಿಸಿ ಮಸಿ ಬಳಿಯುವಂತೆ ಆದೇಶ ನೀಡಿದ್ದರು, ಈ ಸಮಯದಲ್ಲಿ ಮಾತನಾಡಿದ ವೈಷ್ಣವಿ ರವರು ಹುಡುಗರು ತುಂಬಾ ಸ್ಟ್ರಾಂಗ್ ಇರುತ್ತಾರೆ. ಅಂತಹ ಸಂದರ್ಭದಲ್ಲಿ ಹುಡುಗರು ಹುಡುಗಿಯರ ಕುರಿತು ಕಾಳಜಿ ತೋರಬೇಕು ಆದರೆ ಶಮಂತ್ ಗೌಡ ಇದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಸಿ ಬಳಿಯಲು ಹೋದರು, ಈ ಸಮಯದಲ್ಲಿ ನಿಮ್ಮನ್ನು ಕಂಡರೆ ತುಂಬಾ ಇಷ್ಟ ಎಂದರು, ಹೀಗೆ ಹೇಳಿದ ತಕ್ಷಣ ಮನೆಯವರೆಲ್ಲರೂ ಓಓಓಓಓ ಎಂದು ಕೂಗಿದಾಗ, ಹೇಳಿಕೆಯನ್ನು ಉಲ್ಟಾ ಮಾಡಲು ನಿಮ್ಮನ್ನು ಕಂಡರೆ ತುಂಬಾ ಇಷ್ಟ ಆಗಿದೆ ಎಂದು ಹೇಳುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಕಾಲೆಳೆಯುವ ಹೇಳಿಕೆಯಾಗಿ ಪರಿವರ್ತನೆ ಮಾಡಿದರು.

Post Author: Ravi Yadav