ಎಲ್ಲೆಡೆ ಟ್ರೆಂಡ್ ಸೃಷ್ಟಿಸಿರುವ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಕನ್ನಡತಿ ನಿಜಕ್ಕೂ ಯಾರು ಗೊತ್ತಾ???

ಎಲ್ಲೆಡೆ ಟ್ರೆಂಡ್ ಸೃಷ್ಟಿಸಿರುವ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಕನ್ನಡತಿ ನಿಜಕ್ಕೂ ಯಾರು ಗೊತ್ತಾ???

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಒಂದು ಸಾಂಪ್ರದಾಯಿಕ ಉಡುಗೆಯಲ್ಲಿ ವಿವಿಧ ಫಂಕ್ಷನ್ ಗಳಲ್ಲಿ ಮಿಂಚುತ್ತಿರುವ ಹುಡುಗಿಯನ್ನು ಸಾಮಾನ್ಯವಾಗಿ ನೋಡಿರುತ್ತೀರಾ, ಅದರಲ್ಲಿಯೂ ಈ ಕೆಳಗೆ ಕಾಣಿಸುವಂತೆ ದಾವಣಿ ಉಡುಗೆ ತೊಟ್ಟಿರುವ ನಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ ಇವರು ಕೇವಲ ಮೊದಲನೇ ಚಿತ್ರದ ಮೂಲಕವೇ 100 ಕೋಟಿ ಗಳಿಸಿದ ಚಿತ್ರದ ನಾಯಕಿಯಾಗಿ ಇದೀಗ ಮಿಂಚುತ್ತಿದ್ದಾರೆ.

ಹೌದು ಸ್ನೇಹಿತರೇ ತೆಲುಗು ಚಿತ್ರರಂಗದ ಖ್ಯಾತ ಕುಟುಂಬಗಳಲ್ಲಿ ಒಂದಾಗಿರುವ ಚಿರಂಜೀವಿ ಕುಟುಂಬದಿಂದ ನಟರಾಗಿ ತೆಲುಗಿನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ವೈಷ್ಣವ್ ತೇಜ್ ರವರ ಜೊತೆ ಕನ್ನಡತಿ ಆಗಿರುವ ಕೃತಿ ಶೆಟ್ಟಿ ರವರು ಉಪ್ಪೆನ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಈ ಚಿತ್ರವು ಕೇವಲ 22 ಕೋಟಿ ಚಿತ್ರಗಳಲ್ಲಿ ತಯಾರಾಗಿದ್ದು ಇಲ್ಲಿಯವರೆಗೂ ನೂರು ಕೋಟಿಗೂ ಹೆಚ್ಚು ಹಣ ಗಳಿಸಿದೆ.

ಅದೇ ಕಾರಣಕ್ಕಾಗಿ ಚಿತ್ರತಂಡ ವಿವಿಧ ನಗರಗಳಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಹಾಗೂ ಪರೋಕ್ಷವಾಗಿ ಚಿತ್ರವನ್ನು ಮತ್ತಷ್ಟು ನೋಡುವಂತೆ ಹುರಿದುಂಬಿಸಲು ಅವರ್ಡ್ ಫಂಕ್ಷನ್ ಗಳನ್ನು ನಡೆಸುತ್ತಿದೆ. ಈ ಫಂಕ್ಷನ್ ಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚುತ್ತಿರುವ ಉಪ್ಪೆನ ಸಿನಿಮಾದ ನಟಿ ಕೃತಿ ಶೆಟ್ಟಿ ರವರು ಮಿಂಚುತ್ತಿದ್ದಾರೆ, ಇವರು ಇದೇ ಮೊಟ್ಟ ಮೊದಲ ಬಾರಿಗೆ ಚಿತ್ರದಲ್ಲಿ ನಟಿಸುತ್ತಿದ್ದರೂ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ಭರವಸೆಯ ನಟಿ ಎಂಬ ಭಾವನೆ ಮೂಡಿಸಿದ್ದಾರೆ. ಇನ್ನು ಮೂಲತಹ ಕನ್ನಡತಿ ಯಾಗಿರುವ ಕೃತಿ ಶೆಟ್ಟಿ ರವರು ಕನ್ನಡಕ್ಕೆ ಯಾವಾಗ ಬರುತ್ತಾರೆ ಎಂದು ಅಭಿಮಾನಿಗಳು ಕೇಳಲು ಆರಂಭಿಸಿದ್ದಾರೆ.