ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಗೊತ್ತೆ??

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೆ ಇದೀಗ ಬಿಗ್ ಬಾಸ್ ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟು ಬಹಳ ಯಶಸ್ವಿಯಾಗಿ ಮೂಡಿ ಬರುತ್ತಿದೆ. ಅದರಲ್ಲಿಯೂ ಮನೆಯ ಸದಸ್ಯರ ನಡುವೆ ವಾಗ್ವಾದ ಗಳು ಆರಂಭವಾಗಿದ್ದು ಬಿಗ್ ಬಾಸ್ ಕೊಡುವ ಟಾಸ್ಕ್ ಗಳ ಮೂಲಕ ವಾಗ್ವಾದಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಒಂದು ಕಡೆ ಟಾಸ್ಕ್ ಗಳು ಹಾಗೂ ಮತ್ತೊಂದು ಕಡೆ ಎಲಿಮಿನೇಷನ್ ಕೂಡ ಜೋರಾಗಿ ಸದ್ದು ಮಾಡುತ್ತಿದೆ.

ಈಗಾಗಲೇ ಈ ವಾರ ಮನೆಯಿಂದ ಹೊರಗೆ ಹೋಗಲು ಅವಿನಾಶ್, ಚಂದ್ರಕಲಾ, ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಶುಭ ಪೂಂಜ, ದಿವ್ಯ ಸುರೇಶ್, ಗೀತಾ ಹಾಗೂ ನಿರ್ಮಲಾ ರವರು ನಾಮಿನೇಷನ್ ಆಗಿದ್ದು ಬರೋಬ್ಬರಿ ಎಂಟು ಜನ ಇವರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಅದೇ ಕಾರಣಕ್ಕಾಗಿ ಸ್ಪರ್ಧಿಗಳು ಸಂಪೂರ್ಣ ಪ್ರಯತ್ನಗಳ ಮೂಲಕ ಪ್ರೇಕ್ಷಕರ ಮನಗೆದ್ದದ್ದು ಮನೆಯಲ್ಲಿ ಉಳಿದು ಕೊಳ್ಳಲು ತಯಾರಿ ನಡೆಸಿದ್ದಾರೆ.

ಆದರೆ ಏತನ್ಮದ್ಯೆ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿದ್ದು ಒಬ್ಬರ ಹೆಸರು ಜೋರಾಗಿ ಕೇಳಿ ಬರುತ್ತಿದೆ, ಹೌದು ಸ್ನೇಹಿತರೆ ಕಳೆದ ವಾರವೇ ನಿರ್ಮಲ ರವರು ಮನೆಯಿಂದ ಹೊರಗೆ ಹೋಗ ಬೇಕಾಗಿತ್ತು. ಇವರನ್ನು ಯಾವ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದು ಈ ವಾರ ಖಂಡಿತವಾಗಲೂ ನಿರ್ಮಲ ರವರು ಮನೆಯಿಂದ ಹೊರ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ವಾರ ಕೂಡ ಟಾಸ್ಕ ನಲ್ಲಿ ಉತ್ತಮ ಪ್ರದರ್ಶನ ತೋರಲು ನಿರ್ಮಲಾ ರವರು ವಿಫಲವಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ