ಪ್ರಭಾಸ್ ಆಯ್ತು ಇದೀಗ ಮತ್ತೊಬ್ಬ ಸ್ಟಾರ್ ನಟರ ಕದತಟ್ಟಿದ ಪ್ರಶಾಂತ್ ನೀಲ್ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಚಿತ್ರ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಅಗ್ರ ಸಾಲಿನಲ್ಲಿ ಕಂಡು ಬರುವ ಕೆಜಿಎಫ್ ಚಿತ್ರಕ್ಕಾಗಿ ಸಾಕಷ್ಟು ಅಭಿಮಾನಿಗಳು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ವಿವಾದಗಳು ಸುತ್ತುವರೆದಿದ್ದರೂ ಕೂಡ ಕೆಜಿಎಫ್ ಚಿತ್ರ ಯಶಸ್ಸಿನ ಸಾಲಿಗೆ ಸೇರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಕಾಶ್ ರೈ, ಸಂಜಯ್ ದತ್ ರವರ ಆಯ್ಕೆಯಿಂದ ಕೆಜಿಎಫ್ ಚಿತ್ರ ವಿವಾದದ ಗೂಡಾಗಿತ್ತು, ತದ ನಂತರ ಪ್ರಶಾಂತ್ ನೀಲ್ ರವರು ಪ್ರಭಾಸ್ ರವರ ಜೊತೆ ಚಿತ್ರ ಘೋಷಿಸಿದ ಬಳಿಕ ಅದು ಕೂಡ ಒಂದು ವಿವಾದವಾಗಿ ಮಾರ್ಪಟ್ಟಿತ್ತು.

ಪ್ರಶಾಂತ್ ನೀಲ್ ರವರ ನಿರ್ದೇಶನ ನೋಡಿರುವ ಸ್ಟಾರ್ ನಟರು ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ, ಕೇವಲ ಕನ್ನಡದ ನಟರಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರರಂಗದ ನಟರು ಕೂಡ ಪ್ರಶಾಂತ್ ನೀಲ್ ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಹೀಗಿರುವಾಗ ಪ್ರಶಾಂತ್ ನೀಲ್ ರವರು ಇತರ ಭಾಷೆಯ ನಟರೊಂದಿಗೆ ಸಿನಿಮಾ ಮಾಡುವುದು ಕೆಲವರು ತಪ್ಪು ಎಂದರೆ ಇನ್ನು ಕೆಲವರು ತಪ್ಪು ಇಲ್ಲ ಎನ್ನುತ್ತಿದ್ದಾರೆ.

ಪ್ರಭಾಸ್ ರವರ ಚಿತ್ರ ಘೋಷಿಸಿದ ಬಳಿಕ ಇದೇ ಕಾರಣಕ್ಕಾಗಿ ಹಲವಾರು ವಿವಾದಗಳು ಸೃಷ್ಟಿಯಾಗಿದ್ದವು, ಇದಾದ ಬಳಿಕ ಇದೀಗ ಮತ್ತೊಮ್ಮೆ ಪ್ರಶಾಂತ್ ಅವರು ತೆಲುಗು ಚಿತ್ರರಂಗದ ಖ್ಯಾತ ನಟ ಹಿಂದೆ ಬಿದ್ದಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ಇದೀಗ ಸಲಾರ್ ಸಿನಿಮಾ ದಲ್ಲಿ ಬಿಸಿಯಾಗಿರುವ ಪ್ರಶಾಂತ್ ಇನ್ನೊಬ್ಬರು ಇದೀಗ ಹೈದರಾಬಾದ್ ನಲ್ಲಿರುವ ಗೀತಾ ಆರ್ಟ್ಸ್ ಸ್ಟುಡಿಯೋ ಗೆ ಭೇಟಿ ನೀಡಿದ್ದಾರೆ, ಇದೇ ಸಮಯದಲ್ಲಿ ಈ ಸಂಸ್ಥೆಯ ಪ್ರಮುಖ ಪಾಲುದಾರ ಅಲ್ಲು ಅರ್ಜುನ್ ರವರು ಕೂಡ ಪ್ರಶಾಂತ್ ಇಲ್ಲದವರನ್ನು ಅಲ್ಲಿಗೆ ಬಂದು ಭೇಟಿಯಾಗಿದ್ದಾರೆ. ಈ ಮೂಲಕ ಸ್ಟಾರ್ ನಟರೊಬ್ಬರ ಜೊತೆ ಮತ್ತೊಮ್ಮೆ ಪ್ರಶಾಂತ್ ನೀಲ್ ರವರು ಸಿನಿಮಾಗೆ ಸಹಿ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿವೆ.

Post Author: Ravi Yadav