ಈ ಬಾರಿಯ ಬಿಗ್ ಬಾಸ್ ನ ಭರವಸೆಯ ಸ್ಪರ್ದಿಗಳನ್ನು ಹೆಸರಿಸಿದ ಶೈನ್ ಶೆಟ್ಟಿ, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಕನ್ನಡದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಪ್ರೇಕ್ಷಕರಿಂದ ಈ ಬಾರಿಯೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆದು ಕೊಳ್ಳುತ್ತಿದೆ. ದಿನೇ ದಿನೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಹೆಚ್ಚಾದರೂ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮುಟ್ಟುವುದರಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ.

ಇನ್ನು ಕಳೆದ ಬಿಗ್ ಬಾಸ್ ಕನ್ನಡ ಸೀಸನ್ ನಲ್ಲಿ ವಿನ್ನರ್ ಆಗಿ ಹೊರ ಹೊಮ್ಮಿ ಇಡೀ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಶೈನ್ ಶೆಟ್ಟಿ ರವರು ಈ ಬಾರಿಯ ಬಿಗ್ ಬಾಸ್ ಕುರಿತು ಇದೀಗ ಮಾತನಾಡಿದ್ದಾರೆ. ಇದೀಗ ನಡೆದ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತು ಮಾತನಾಡಿರುವ ಶೈನ್ ಶೆಟ್ಟಿ ರವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಕೂಡ ಮಾತನಾಡಿದ್ದಾರೆ.

ನಾನು ಕೂಡ ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ನನಗೆ ಹಲವಾರು ಪ್ರಶ್ನೆಗಳಿದ್ದವು, ಆದರೆ ಬಿಗ್ ಬಾಸ್ ಮನೆಗೆ ಹೋದ ಮೇಲೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಇನ್ನೂ ಈ ಬಾರಿಯ ಬಿಗ್ ಬಾಸ್ ಕುರಿತು ಮಾತನಾಡುವುದಾದರೆ ನನಗೆ ಮೊದಲಿನಿಂದಲೂ ನಿಧಿ ಸುಬ್ಬಯ್ಯ ಎಂದರೆ ಬಹಳ ಇಷ್ಟ ಇನ್ನು ರಘುರವರು ಕೂಡ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಈಗಲೇ ಯಾರು ಗೆಲ್ಲುತ್ತಾರೆ ಎಂಬುದು ಹೇಳುವುದು ಸುಲಭವಲ್ಲ ಆದರೆ ಖಂಡಿತಾ ಇವರಿಬ್ಬರ ಮೇಲೆ ಭರವಸೆ ಇದೆ ಎಂದಿದ್ದಾರೆ

Post Author: Ravi Yadav