ರುಚಿಗೆ ರುಚಿ ಆರೋಗ್ಯಕ್ಕೆ ಅರೋಗ್ಯ, ನಿಮಿಷಗಳಲ್ಲಿ ಮಾಡಿ ತೆಂಗಿನಕಾಯಿ ರೈಸ್, ಬ್ಯಾಚೆಲರ್ಸ್ ನೋಡ್ರಪ್ಪಾ

ರುಚಿಗೆ ರುಚಿ ಆರೋಗ್ಯಕ್ಕೆ ಅರೋಗ್ಯ, ನಿಮಿಷಗಳಲ್ಲಿ ಮಾಡಿ ತೆಂಗಿನಕಾಯಿ ರೈಸ್, ಬ್ಯಾಚೆಲರ್ಸ್ ನೋಡ್ರಪ್ಪಾ

ನಮಸ್ಕಾರ ಸ್ನೇಹಿತರೇ, ಇಂದು ನಾವು ತೆಂಗಿನಕಾಯಿ ರೈಸ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ತೆಂಗಿನ ಕಾಯಿ ರೈಸ್ ಮಾಡಲು ಬೇಕಾಗುವ ಪದಾರ್ಥಗಳು: 400 ಗ್ರಾಂ ಜೀರ ಅಕ್ಕಿ, 1 ಬಟ್ಟಲು ತೆಂಗಿನಕಾಯಿ ತುರಿ,7 – 8 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆಬೇಳೆ, 10 – 15 ಗೋಡಂಬಿ, 2 ಚಮಚ ಕಡಲೆಕಾಯಿಬೀಜ, ಸ್ವಲ್ಪ ಸಾಸಿವೆ, 1 ಚಮಚ ಜೀರಿಗೆ, ಸ್ವಲ್ಪ ಎಣ್ಣೆ, ಸ್ವಲ್ಪ ತುಪ್ಪ, ಸ್ವಲ್ಪ ಇಂಗು, ರುಚಿಗೆ ತಕ್ಕಷ್ಟು ಉಪ್ಪು.

ತೆಂಗಿನಕಾಯಿ ರೈಸ್ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಜೀರ ಅಕ್ಕಿ ಹಾಗೂ ನೀರನ್ನು ಹಾಕಿ ಒಂದು ಬಾರಿ ತೊಳೆದುಕೊಂಡು ಒಂದು ಕುಕ್ಕರ್ ಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಅಕ್ಕಿ ತೆಗೆದುಕೊಂಡ ಅಳತೆಯ ಬಟ್ಟಲಿನಿಂದ ಒಂದೂವರೆ ಬಟ್ಟಲು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕಷ್ಟು ಉಪ್ಪು ಹಾಗೂ 1 ಚಮಚದಷ್ಟು ಎಣ್ಣೆಯನ್ನು ಹಾಕಿಕೊಂಡು ಮುಚ್ಚುಳವನ್ನು ಮುಚ್ಚಿ 2 ವಿಷಲ್ ಹಾಕಿಸಿಕೊಳ್ಳಿ.ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚ ಎಣ್ಣೆ ಹಾಗೂ 2 ಚಮಚ ತುಪ್ಪವನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಗೋಡಂಬಿಯನ್ನು ಹಾಕಿ ಫ್ರೈ ಮಾಡಿಕೊಂಡು ಎಣ್ಣೆಯಿಂದ ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

ನಂತರ ಅದೇ ಬಾಣಲೆಗೆ ಕಡಲೆಕಾಯಿ ಬೀಜವನ್ನು ಹಾಕಿ ಫ್ರೈ ಮಾಡಿಕೊಂಡು ಎಣ್ಣೆಯಿಂದ ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ.ನಂತರ ಅದೇ ಬಾಣಲೆಗೆ ತೆಗೆದುಕೊಂಡ ಸಾಸಿವೆ, ಜೀರಿಗೆ, ಸ್ವಲ್ಪ ಇಂಗು, 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆಬೇಳೆಯನ್ನು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ ಹಾಗೂ ಸ್ವಲ್ಪ ಕರಿಬೇವು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ ಸ್ವಲ್ಪ ಉಪ್ಪು ಹಾಗೂ ತುರಿದ ತೆಂಗಿನಕಾಯಿಯನ್ನು ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.ಕೊನೆಯದಾಗಿ ಅನ್ನ, ಫ್ರೈ ಮಾಡಿಕೊಂಡ ಕಡಲೆಕಾಯಿಬೀಜ ಹಾಗೂ ಗೋಡಂಬಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ತೆಂಗಿನಕಾಯಿ ರೈಸ್ ಸವಿಯಲು ಸಿದ್ದ.