ಖ್ಯಾತ ನಟಿಯರ ಬಯೋಪಿಕ್ ನಲ್ಲಿ ನಟಿಸುವಾಸೆ ಎಂದ ರಶ್ಮಿಕ ! ಬೇಡವೇ ಬೇಡ ಎಂದ ಕನ್ನಡಿಗರು. ಯಾಕೆ ಗೊತ್ತೇ??

ಖ್ಯಾತ ನಟಿಯರ ಬಯೋಪಿಕ್ ನಲ್ಲಿ ನಟಿಸುವಾಸೆ ಎಂದ ರಶ್ಮಿಕ ! ಬೇಡವೇ ಬೇಡ ಎಂದ ಕನ್ನಡಿಗರು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕಾ ಮಂದಣ್ಣ ರವರು ಇದೀಗ ಕೇವಲ ಕನ್ನಡದ ಸ್ಟಾರ್ ನಟಿಯಾಗಿ ಉಳಿದಿಲ್ಲ. ಬದಲಾಗಿ ತೆಲುಗು ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ಕೂಡ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಅಂತೂ ಬಹು ಬೇಡಿಕೆಯ ನಟಿಯರ ಸಾಲಿನಲ್ಲಿ ರಶ್ಮಿಕ ಮಂದನ್ನ ರವರ ಹೆಸರು ಕೇಳಿ ಬರುತ್ತದೆ. ಈಗಾಗಲೇ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡು ‌ಬಿಜಿ ಯಾಗಿರುವ ರಶ್ಮಿಕ ಮಂದನ್ನ ರವರು ಇದೀಗ ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಇಬ್ಬರು ನಟಿಯರ ಬಯೋಪಿಕ್ ನಲ್ಲಿ ನಟಿಸುವ ಆಸೆ ಎಂದಿದ್ದಾರೆ

ಆದರೆ ಇವರು ಈ ರೀತಿ ಹೇಳಿಕೆ ನೀಡಿದ ತಕ್ಷಣ ರಶ್ಮಿಕ ಮಂದನ್ನ ರವರು ಇವರಿಬ್ಬರ ಬಯೋಪಿಕ್ ನಲ್ಲಿ ನಟಿಸಿದರೇ ಚೆನ್ನಾಗಿರುತ್ತದೆ ಎಂದರೆ ಇನ್ನೂ ಕೆಲವರು ದಯವಿಟ್ಟು ಬೇಡವೇ ಬೇಡ ಯಾವುದೇ ಕಾರಣಕ್ಕೂ ರಶ್ಮಿಕ ಮಂದನ್ನ ರವರು ಇವರಿಬ್ಬರ ಬಯೋಪಿಕ್ ನಲ್ಲಿ ನಟಿಸುವುದು ಬೇಡ ಎಂದಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು ನೀವು ಕೂಡ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

ಸ್ನೇಹಿತರೇ ಇತ್ತೀಚಿಗೆ ನಡೆದ ಒಂದು ಸಂದರ್ಶನದಲ್ಲಿ ರಶ್ಮಿಕಾ ರವರು ಭಾರತದ ವಿವಿಧ ಚಿತ್ರರಂಗಗಳಲ್ಲಿ ಹಲವಾರು ವ್ಯಕ್ತಿಗಳ ನಿಜ ಜೀವನದ ಆಧಾರಿತ ಕಥೆಗಳನ್ನು ಇಟ್ಟುಕೊಂಡು ಬಯೋಪಿಕ್ ಸಿನಿಮಾಗಳನ್ನು ನಿರ್ಮಾಣ ಮಾಡಲಾಗುತ್ತಿದೆ, ನಿಮಗೆ ಯಾರ ಬಯೋಪಿಕ್ ನಲ್ಲಿ ನಟಿಸುವ ಆಸಕ್ತಿ ಇದೆ ಎಂದಾಗ,

ಇದಕ್ಕೆ ಉತ್ತರ ನೀಡಿರುವ ರಶ್ಮಿಕಾ ರವರು ನನಗೆ ಚಿಕ್ಕಂದಿನಿಂದಲೂ ದಕ್ಷಿಣ ಭಾರತದ ಖ್ಯಾತ ನಟಿ ಸೌಂದರ್ಯ ರವರು ಎಂದರೆ ಬಹಳ ಇಷ್ಟ ಆದ ಕಾರಣ ನಾನು ಅವರ ಬಯೋಪಿಕ್ ನಲ್ಲಿ ನಟಿಸುವ ಅವಕಾಶ ಪಡೆದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ ಹಾಗೂ ಖ್ಯಾತ ನಟಿ ಶ್ರೀದೇವಿ ರವರ ಬಯೋಪಿಕ್ ನಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.