ವಜ್ರಮುನಿ ರವರ ಸ್ಥಾನ ತುಂಬಲು ಬಂದ ಮೊಮ್ಮಗ ಆ ಡೈಲಾಗ್ ನೋಡಿ ಸ್ವಾಮಿ, ಹೇಗಿದೆ ಗೊತ್ತಾ?

ವಜ್ರ ಮುನಿ ರವರ ಸ್ಥಾನ ತುಂಬಲು ಬಂದ ಮೊಮ್ಮಗ ಆ ಡೈಲಾಗ್ ನೋಡಿ ಸ್ವಾಮಿ, ಹೇಗಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಖಳನಟ ಯಾರು ಎಂದರೇ ಅಭಿಮಾನಿಗಳು ಇಂದಿಗೂ ಎಂದೆಂದಿಗೂ ಕೂಡ ನಮ್ಮ ನಿಮ್ಮೆಲ್ಲರ ನೆಚ್ಚಿನ ದಿವಂಗತ ವಜ್ರಮುನಿ ಅವರ ಹೆಸರನ್ನು ಹೇಳುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕನ್ನಡ ಚಿತ್ರರಂಗ ಸಾಕಷ್ಟು ವಿಲನ್ ನೋಡಿದ್ದರು ಕೂಡ ವಜ್ರಮುನಿ ರವರಸ್ಟು ಸರಿಸಮಾನ ಮಟ್ಟಕ್ಕೆ ತಲುಪಲು ಸಾಧ್ಯವೇ ಇಲ್ಲ ಎಂಬಂತಹ ನಟನೆ ಮಾಡಿ ವಜ್ರಮುನಿ ರವರು ಸೈ ಎನಿಸಿ ಕೊಂಡಿದ್ದಾರೆ.

ತಮ್ಮ ಜೀವನದಲ್ಲಿ ಬಹಳ ಸೌಮ್ಯ ಸ್ವಭಾವದವರು ಆಗಿದ್ದರೂ ಕೂಡ ನಟನೆಂದು ಬಂದಾಗ ಅದ್ಭುತ ನಟನೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿ ಯಶಸ್ಸಿನ ಉತ್ತುಂಗಕ್ಕೆ ಏರುವಂತೆ ಮಾಡಿದ್ದ ವಜ್ರಮುನಿ ರವರ ನಂತರ ಥೇಟ್ ನೋಡಲು ವಜ್ರಮುನಿ ರವರಂತೆ ಇರುವ ಮಗ ಅವರ ಸ್ಥಾನವನ್ನು ತುಂಬದೇ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ವಜ್ರಮುನಿ ರವರ ಮೂವರು ಗಂಡು ಮಕ್ಕಳು ಕೂಡ ಚಿತ್ರರಂಗ ಕಡೆ ಮುಖ ಮಾಡಿಲ್ಲ. ಆದರೆ ಇದೀಗ ಜೂನಿಯರ್ ವಜ್ರಮುನಿ ಸದ್ದು ಮಾಡದೆ ತಾತನ ಸ್ಥಾನ ತುಂಬಲು ಸಿದ್ಧವಾಗಿರುವಂತೆ ಕಾಣುತ್ತಿದೆ, ಹೌದು ಸ್ನೇಹಿತರೇ ಮೂರನೇ ಪುತ್ರ ಜಗದೀಶ್ ವಜ್ರಮುನಿ ರವರ ಪುತ್ರ ಆಕರ್ಷ್ ರವರು ಇದೀಗ ವಜ್ರಮುನಿ ರವರಂತೆ ಅದ್ಭುತ ಡೈಲಾಗ್ ಹೇಳುವ ಮೂಲಕ ಯೂಟ್ಯೂಬ್ ನಲ್ಲಿ ತಲ್ಲಣವನ್ನು ಸೃಷ್ಟಿಸಿದ್ದಾರೆ. ಇವರ ಅದ್ಭುತ ಡೈಲಾಗ್ ವಿಡಿಯೋ ಮೇಲೆ ಲಗತ್ತಿಸಲಾಗಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.