ರಶ್ಮಿಕಾಗೆ ಬಿಗ್ ಶಾಕ್, ತೆಲುಗಿನವರಿಗೆ ಕೈ ಕೊಟ್ಟ ರಶ್ಮಿಕಾ ಎಂದು ರೊಚ್ಚಿಗೆದ್ದ ಅಭಿಮಾನಿಗಳು. ಅಷ್ಟಕ್ಕೂ ರಶ್ಮಿಕಾ ಮಾಡಿದ್ದೇನು ಗೊತ್ತೇ??

ರಶ್ಮಿಕಾಗೆ ಬಿಗ್ ಶಾಕ್, ತೆಲುಗಿನವರಿಗೆ ಕೈ ಕೊಟ್ಟ ರಶ್ಮಿಕಾ ಎಂದು ರೊಚ್ಚಿಗೆದ್ದ ಅಭಿಮಾನಿಗಳು. ಅಷ್ಟಕ್ಕೂ ರಶ್ಮಿಕಾ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬಕೆಟ್ ಹಿಡಿಯೋದು ರಶ್ಮಿಕಾ ನೋಡಿ ಕಲಿಯಬೇಕು ಎಂದು ಇಷ್ಟು ದಿವಸ ರಶ್ಮಿಕಾ ಮಂದಣ್ಣ ರವರಿಗೆ ಕನ್ನಡದ ಟ್ರೊಲ್ ಪೇಜ್ ಗಳು ಟ್ರೊಲ್ ಮಾಡುತ್ತಿದ್ದನ್ನು ನೀವೆಲ್ಲರೂ ನೋಡಿರಬೇಕು, ಯಾಕೆಂದರೆ ನನಗೆ ಕನ್ನಡ ಮಾತನಾಡಲು ಕಷ್ಟ ಎನ್ನುವ ಹೇಳಿಕೆಯಿಂದ ಅತಿ ಹೆಚ್ಚು ಟ್ರೊಲ್ ಗಳಿಗೆ ಗುರಿಯಾಗಿದ್ದರು ರಶ್ಮಿಕಾ ಮಂದಣ್ಣ. ಇಷ್ಟು ಸಾಲದು ಎಂಬಂತೆ ತೆಲುಗಿನ ಚಿತ್ರಗಳನ್ನು ಬಿಡುಗಡೆ ಮಾಡುವ ಸಮಾರಂಭ ಗಳಲ್ಲಿ ತೆಲುಗಿನ ಅಭಿಮಾನಿಗಳನ್ನು ಚಿತ್ರ ನೋಡುವಂತೆ ಸೆಳೆಯಲು ರಶ್ಮಿಕಾ ಮಂದಣ್ಣ ರವರು ತೆಲುಗಿನಲ್ಲಿ ಮಾತನಾಡಲು ಪ್ರಯತ್ನ ಮಾಡಿ, ಕನ್ನಡದ ಮಾತನಾಡಲು ಪ್ರಯತ್ನ ಪಟ್ಟಿಲ್ಲ, ಆದರೆ ತೆಲುಗು ಪ್ರಯತ್ನ ಮಾಡಿದ್ದಾರೆ ಎಂದು ಕನ್ನಡಿಗರ ಕಣ್ಣನ್ನು ಕೆಂಪಗಾಗುವಂತೆ ಮಾಡಿದ್ದರು.

ಅದೇ ಕಾರಣಕ್ಕಾಗಿ ರಶ್ಮಿಕಾ ಮಂದಣ್ಣ ರವರನ್ನು ಈಗಲೂ ಕೂಡ ಟ್ರೊಲ್ ಮಾಡಲಾಗುತ್ತಿದೆ, ಅವರದ್ದೇ ಸಿನಿಮಾ ಪೊಗರು ಡೈಲಾಗು ಹಿಡಿದುಕೊಂಡು ಅಂದರೆ ಮಾತೃ ಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು ಎಂಬ ಹೇಳಿ ಕೂಡ ಟ್ರೊಲ್ ಮಾಡಲಾಗುತ್ತಿದೆ, ಇದೇ ಸಮಯದಲ್ಲಿ ತೆಲುಗುನಲ್ಲಿ ಬಾರಿ ಅಭಿಮಾನಿ ಬಳಗವನ್ನು ಹೊಂದಿರುವ ರಶ್ಮಿಕಾ ಇದೀಗ ಅಲ್ಲಿಯೂ ಕೂಡ ಟ್ರೊಲ್ ಆಗುವಂತಹ ಹೇಳಿಕೆಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಆದ ಕಾರಣ ತೆಲುಗಿನಲ್ಲಿಯೂ ಕೂಡ ಇವರನ್ನು ಹೆಚ್ಚು ಟ್ರೊಲ್ ಮಾಡಲಾಗುತ್ತದೆ.

ಹೌದು ಸ್ನೇಹಿತರೇ, ಇದು ನಡೆದದ್ದು ಕೆಲವು ದಿನಗಳ ಹಿಂದೆ ಆದರೂ ಕೂಡ ಇದೀಗ ವಿಡಿಯೋ ವೈರಲ್ ಆಗಿದೆ. ಕಳೆದ ಕೆಲವು ದಿನಗಳ ಹಿಂದೆ, ತೆಲುಗು ಸ್ಟಾರ್ ನಟರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದ ಮಂದಣ್ಣ ರವರು, ನಿಮ್ಮ ಚಿಕ್ಕ ವಯಸ್ಸಿನ ಕ್ರಶ್ ಯಾರು ಎಂದು ಕೇಳಿದಾಗ, ತಮಿಳು ನಟ ವಿಜಯ್ ಎಂದು ಉತ್ತರ ನೀಡಿದ್ದರು. ಈ ಹೇಳಿಕೆ ರಶ್ಮಿಕಾ ಮಂದಣ್ಣ ರವರಿಗೆ ವಿಜಯ್ ರವರ ಜೊತೆ ಸಿನಿಮಾ ಸಿಗುವಂತೆ ಮಾಡುತ್ತದೆ ಎಂದು ಅಂದು ಕೊಂಡು ಹೇಳಿದ್ದಾರೆ ಎಂದು ಟ್ರೊಲ್ ಪೇಜ್ ಗಳು ರಶ್ಮಿಕಾ ಮಂದಣ್ಣ ರವರನ್ನು ಬಕೆಟ್ ಹಿಡಿಯುತ್ತಿದ್ದಾರೆ ಎಂದು ಟ್ರೊಲ್ ಮಾಡುತ್ತಿದ್ದಾರೆ. ತಮಿಳು ಚಿತ್ರರಂಗಕ್ಕೆ ದೊಡ್ಡ ಎಂಟ್ರಿ ನೀಡುವ ಆಸೆಯಲ್ಲಿರುವ ರಶ್ಮಿಕಾ ರವರು ನಮ್ಮಲ್ಲಿ ತೆಲುಗು ನಟರನ್ನು ಹೊಗಳಿ, ತೆಲುಗು ಮಾತನಾಡಿ ಅಭಿಮಾನಿಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದರು, ಇದೀಗ ತಮಿಳಿನ ಕಡೆಗೆ ಹೋಗಲು ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಪಾಪ ಏನೇ ಹೇಳಿದರೂ ವಿವಾದ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲದಂತಾಗಿದೆ.