ಅಪ್ಪನ ಆಸ್ತಿ ಬಿಡಿ, ಡಿಕೆಶಿರವರ ಅಳಿಯ ಅಮರ್ಥ್ಯ ಹೆಗ್ಡೆ ರವರ ಒಟ್ಟು ಆಸ್ತಿಯ ಮೌಲ್ಯವೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವೇ ಕೆಲವು ದಿನಗಳ ಹಿಂದೆ ಡಿ’ಕೆಶಿ ರವರ ಪುತ್ರಿ ಹಾಗೂ ಕರ್ನಾಟಕದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ದಿವಂಗತ ಸಿದ್ಧಾರ್ಥ್ ಅವರ ಮಗ ಅಮರ್ತ್ಯ ಹೆಗಡೆ ರವರ ಮದುವೆ ನಡೆದಿದೆ. ಬಹಳ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಐಶ್ವರ್ಯ ಹಾಗೂ ಅಮರ್ತ್ಯ ರವರು ತಮ್ಮ ಜೀವನದ ಹೊಸ ಹಾದಿಯನ್ನು ತುಳಿದಿದ್ದಾರೆ. ಈ ದಂಪತಿಗಳಿಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಹಾಗೂ ಭಾರತದ ವಿವಿಧ ಗಣ್ಯ ವ್ಯಕ್ತಿಗಳಿಂದ ಶುಭಾಶಯಗಳ ಸುರಿಮಳೆಯೇ ಯಾಗಿದೆ.

ಇಬ್ಬರು ಕೂಡ ಪ್ರತಿಷ್ಠಿತ ಕುಟುಂಬಗಳಿಂದ ಬಂದಿರುವ ಕಾರಣ ಬಹುತೇಕ ಸಾಮಾನ್ಯ ಜನರಿಗೆ ಮದುವೆಗೆ ಯಾವುದೇ ಆಹ್ವಾನವನ್ನು ನೀಡಲಾಗಿರಲಿಲ್ಲ, ಕೇವಲ ಗಣ್ಯ ವ್ಯಕ್ತಿಗಳಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಹಾಗೂ ಬಹುತೇಕ ಮಾಧ್ಯಮ ಸಂಸ್ಥೆಗಳನ್ನು ಮದುವೆಯಿಂದ ದೂರ ಇರಿಸಲಾಗಿತ್ತು. ಒಟ್ಟಾರೆಯಾಗಿ ದೇಶದ ಮೂಲೆ ಮೂಲೆಯಿಂದ 800 ಗಣ್ಯ ವ್ಯಕ್ತಿಗಳಿಗೆ ಮಾತ್ರ ಮದುವೆಯ ಕರೆಯೋಲೆ ನೀಡಲಾಗಿತ್ತು.

ಇನ್ನು ಅಮರ್ತ್ಯ ಹೆಗಡೆ ರವರ ಕುರಿತು ಮಾತನಾಡುವುದಾದರೆ, ಕರ್ನಾಟಕ ಕಂಡ ಶ್ರೇಷ್ಠ ಉದ್ಯಮಿ ಗಳಲ್ಲಿ ಒಬ್ಬರಾಗಿರುವ ಸಿದ್ಧಾರ್ಥರವರ ಪುತ್ರ ಈಗಾಗಲೇ ವಿವಿಧ ಉದ್ಯಮಗಳ ಜವಾಬ್ದಾರಿಯನ್ನು ಹೆಗಲಿಗೆ ಏರಿಸಿಕೊಂಡಿದ್ದಾರೆ, ಇನ್ನು ಇವರಿಬ್ಬರ ಆಸ್ತಿಯ ಕುರಿತು ಮಾತನಾಡುವುದಾದರೆ ಕಳೆದ ಕೆಲವು ದಿನಗಳ ಹಿಂದೆ ಐಶ್ವರ್ಯ ರವರ ಆಸ್ತಿ ನೂರು ಕೋಟಿಗೂ ಹೆಚ್ಚು ಇದೆ ಎಂಬುದು ಎಲ್ಲರಿಗೂ ತಿಳಿದೇ ಇತ್ತು, ಆದರೆ ಅಮರ್ತ್ಯ ಹೆಗ್ಡೆ ಅವರು ಅವರಿಗಿಂತ ಹೆಚ್ಚಿನ ನೆಟ್ ವರ್ತ್ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ, ಸಾವಿರಾರು ಕೋಟಿ ಒಡೆಯರಾಗಿದ್ದ ಸಿದ್ದಾರ್ಥ್ ಅವರ ಆಸ್ತಿಯನ್ನು ಬಿಟ್ಟು ಕೇವಲ ಅಮರ್ತ್ಯ ಹೆಗಡೆರವರ ಆಸ್ತಿಯ ಮೊತ್ತ ಮುನ್ನೂರು ಕೋಟಿಯನ್ನು ದಾಟಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

Post Author: Ravi Yadav