ಬಿಗ್ ಬಾಸ್ ಮನೆಯಲ್ಲಿ ನಕ್ಕು ನಗಿಸುವ ಕಿಂಗ್ ! ವಿಫಲವಾದ ಬಹುತೇಕ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿ ನಕ್ಕು ನಗಿಸುವ ಕಿಂಗ್ ! ವಿಫಲವಾದ ಬಹುತೇಕ ಸ್ಪರ್ಧಿಗಳು

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಕೆಲವು ದಿನಗಳಾದ ಬಳಿಕ ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಪರ್ಫಾರ್ಮೆನ್ಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಮನೆಗೆ ವಿವಿಧ ಸ್ಪರ್ದಿಗಳ ಹೆಸರು ಕೇಳಿ ಬಂದಾಗ ಈ ಸ್ಪರ್ಧಿಗಳು ಮನರಂಜನೆ ನೀಡುತ್ತಾರೆ ಈ ಸ್ಪರ್ಧಿಗಳು ಮನರಂಜನೆ ನೀಡುವುದಿಲ್ಲ ಎಂಬ ಲೆಕ್ಕಾಚಾರಗಳು ಆರಂಭವಾದಾಗ ಕೇಳಿ ಬಂದಿದ್ದ ಹೆಸರುಗಳು ಇದೀಗ ಮನೆಯಲ್ಲಿ ಪ್ರೇಕ್ಷಕರ ನಿರೀಕ್ಷೆಯ ಮಟ್ಟ ತಲುಪುವಲ್ಲಿ ವಿಫಲವಾಗಿದೆ

ಹೌದು ಸ್ನೇಹಿತರೇ ಬಿಗ್ ಬಾಸ್ ಮನೆಗೆ ವಿವಿಧ ಸ್ಪರ್ಧಿಗಳು ಹೋಗುತ್ತಿದ್ದಾರೆ ಎಂದು ಹೇಳಿದ ತಕ್ಷಣ ಬಿಗ್ ಬಾಸ್ ಮೇಲಿನ ನಿರೀಕ್ಷೆಯ ಮಟ್ಟ ಹೆಚ್ಚಾಗಿತ್ತು, ಆದರೆ ಬಹುತೇಕರು ಸೇಫ್ ಆಟ ಆಡುವ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಅದೇ ಕಾರಣಕ್ಕಾಗಿ ಅಗತ್ಯವಿದ್ದಲ್ಲಿ ಮಾತ್ರ ಹಾಗೂ ಕೇವಲ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಮಾತ್ರ ತಮ್ಮ ವೈಯಕ್ತಿಕ ಜೀವನ ಬಿಟ್ಟು ನಟನೆ ಮಾಡುತ್ತಿದ್ದಾರೆ ಎಂಬುದು ಬಿಗ್ ಬಾಸ್ ಕಾರ್ಯಕ್ರಮ ನೋಡಿದ ತಕ್ಷಣ ಅರ್ಥವಾಗುತ್ತದೆ.

ಈತನ್ಮಧ್ಯೆ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಜನರನ್ನು ನಕ್ಕುನಗಿಸಲು ಬರುವುದಿಲ್ಲ ಈತ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದು ಬೇಡ ಎಂದು ಟ್ರೋಲ್ ಗೆ ಒಳಗಾಗಿದ್ದ ಹಾಸ್ಯನಟ ಮಂಜು ಪಾವಗಡ ರವರು ಮಾತ್ರ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ದಿವ್ಯ ಸುರೇಶ್ ಅವರ ಜೊತೆ ಪ್ರೀತಿಯಲ್ಲಿ ಇದ್ದೇನೆ ಎಂಬಂತೆ ಮಾತುಗಳನ್ನು ಆಡಿ, ತಮ್ಮ ಹಾವಭಾವಗಳ ಮೂಲಕ ಹಾಗೂ ತಮ್ಮ ‌ವಿಶೇಷ ಹಾಸ್ಯಪ್ರಜ್ಞೆಯ ಮಾತುಗಳ ಮೂಲಕ ಎಲ್ಲರನ್ನು ನಗಿಸುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ