ರೇಷ್ಮೆಯಂತಹ ಕೂದಲು ಬೇಕೆ? ವಾರಕ್ಕೆ ಒಮ್ಮೆ ಇದನ್ನು ಹಚ್ಚಿ, ಮನೆಯಲ್ಲಿಯೇ ಮಾಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಅಗಸೆ ಬೀಜದ ಜೆಲ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಇದನ್ನು ವಾರಕ್ಕೆ ಒಂದು ದಿನ ಹಚ್ಚುವುದರಿಂದ ಕೂದಲು ಮೃದುವಾಗುತ್ತದೆ.

ಅಗಸೆ ಬೀಜದ ಜೆಲ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ ಎರಡೂವರೆ ಬಟ್ಟಲಿನಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 5 ಚಮಚದಷ್ಟು ಅಗಸೆ ಬೀಜ ಬೀಜವನ್ನು ಹಾಕಿಕೊಳ್ಳಿ. ನಂತರ ಗ್ಯಾಸ್ ನನ್ನು ಮಾಧ್ಯಮ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ತಿರುಗಿಸುತ್ತಾ ಕುದಿಸಿಕೊಳ್ಳಿ. ಸ್ವಲ್ಪ ಸಮಯದ ನಂತರ ಇದು ಜೆಲ್ ರೀತಿಯಾಗುತ್ತದೆ. ನಂತರ ಇದನ್ನು ಕಾಟನ್ ಬಟ್ಟೆಯನ್ನು ಉಪಯೋಗಿಸಿಕೊಂಡು ಸೋಸಿಕೊಂಡರೆ ಅಗಸೆಬೀಜದ ಜೆಲ್ ಸಿದ್ದವಾಗುತ್ತದೆ.

ಇದನ್ನು ತಲೆಗೆ ಹಚ್ಚುವ ಕ್ರಮ: ಮೊದಲಿಗೆ ಕೂದಲನ್ನು ಸಣ್ಣಸಣ್ಣ ಭಾಗಗಳಾಗಿ ಮಾಡಿಕೊಂಡು ಬ್ರಷ್ ನ ಸಹಾಯದಿಂದ ತಲೆಯ ಬುಡಕ್ಕೆ ಹಚ್ಚಿಕೊಳ್ಳಬೇಕು. ನಂತರ ಕೂದಲನ್ನು ನಂತರ ಕೈಯಲ್ಲಿ ಸ್ವಲ್ಪ ಜೆಲ್ ನನ್ನು ತೆಗೆದುಕೊಂಡು ತಲೆಯನ್ನು ಮಸಾಜ್ ಮಾಡಿಕೊಳ್ಳಬೇಕು. ಆನಂತರ ಕೂದಲಿಗೆ ಹಚ್ಚಿಕೊಂಡು 2 ಗಂಟೆಗಳ ಕಾಲ ನೆನೆಯಲು ಬಿಡಬೇಕು.ನಂತರ ತಲೆಗೆ ಸ್ನಾನವನ್ನು ಮಾಡಬೇಕು. ಇದನ್ನು ಹಚ್ಚಿದ ನಂತರ ಕೂದಲು ತುಂಬಾ ಮೃದುವಾಗುತ್ತದೆ ಮತ್ತು ಹೊಳಪು ಬರುತ್ತದೆ. ಅಷ್ಟೇ ಅಲ್ಲದೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದನ್ನು ಬೇಸಿಗೆಕಾಲದಲ್ಲಿ ಹಚ್ಚಿದರೆ ಬಹಳ ಒಳ್ಳೆಯದು.

Facebook Comments

Post Author: Ravi Yadav