ಮೊದಲ ದಿನವೇ ದೂಳೆಬ್ಬಿಸಿ ಗೆಲ್ಲುವ ಸೂಚನೆ ನೀಡಿದ ಬಿಗ್ ಬಾಸ್ ಸ್ಪರ್ಧಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮದ ಎಂಟನೇ ಆವೃತ್ತಿ ಇದೀಗ ಆರಂಭವಾಗಿದೆ. ಹಲವಾರು ಸ್ಪರ್ಧಿಗಳ ಹೆಸರುಗಳನ್ನು ಮೊದಲೇ ಊಹೆ ಮಾಡಲಾಗಿತ್ತಾದರೂ, ಕೆಲವೊಂದು ಅಚ್ಚರಿಯ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಆದಕಾರಣ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಬಾರಿಯೂ ಕೂಡ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದು, ಅಧಿಕೃತವಾಗಿ ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ರವರು ಎಲ್ಲಾ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಕರೆಸಿ ಮನೆಯೊಳಗಡೆ ಕಳುಹಿಸಿದ್ದಾರೆ. ಇನ್ನೂ ಯಾವುದೇ ರೀತಿಯ ಪ್ರಮುಖ ಟಾಸ್ಕ್ ಗಳು ಆರಂಭವಾಗದೆ ಇದ್ದರೂ ಈಗಾಗಲೇ ಜನರು ಸೋಲು-ಗೆಲುವಿನ ಲೆಕ್ಕಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಯ್ಕೆ ಈ ಕೆಳಗಿನಂತೆ ಇದು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಹೌದು ಸ್ನೇಹಿತರೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಹಲವಾರು ದಿನಗಳ ಹಿಂದೆ ಕ್ಯಾಬ್ ಓಡಿಸುವ ಮೂಲಕ ಸದ್ದು ಮಾಡಿ, ತದ ನಂತರ ತನ್ನ ಜೀವನದ ಕೆಲವೊಂದು ವೈಯಕ್ತಿಕ ವಿಷಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಜನಪ್ರಿಯತೆ ಗಳಿಸಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಶಂಕರ್ ಅಶ್ವತ್ ರವರ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದ್ದು, ಇವರು ಬಿಗ್ ಬಾಸ್ ಕಾರ್ಯಕ್ರಮದ ವಿಜೇತರಾಗಲು ಎಲ್ಲಾ ಸಾಧ್ಯತೆಗಳಿವೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಅವರ ಅಭಿಪ್ರಾಯಗಳನ್ನು ಕೆಲವೊಂದನ್ನು ಮೇಲುಗಡೆ ಪೋಸ್ಟ್ ಮಾಡಿದ್ದೇವೆ ನೋಡಿ.

Facebook Comments

Post Author: Ravi Yadav