ಕಷ್ಟ ಎಂದವರಿಗೆ ಸಹಾಯ ಮಾಡಿದ್ದ ಧೀರೇಂದ್ರ ಗೋಪಾಲ್ ರವರ ಕೊನೆಯ ಕ್ಷಣಗಳು ಹೇಗಿದ್ದವು ಗೊತ್ತೆ??

ನಮಸ್ಕಾರ ಸ್ನೇಹಿತರೇ ಶಿವನೇ ಶಂಭುಲಿಂಗ ಎಂಬ ಡೈಲಾಗ್ ಕೇಳಿದರೆ ಸಾಕು ನೀವು ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ವಿಲನ್ ಗಳಲ್ಲಿ ಒಬ್ಬರಾಗಿರುವ ಧೀರೇಂದ್ರ ಗೋಪಾಲ್ ಅವರ ಶೈಲಿಯಲ್ಲಿ ಅನುಕರಣೆ ಮಾಡಲು ಪ್ರಯತ್ನ ಪಡುತ್ತೀರೀ, ನೀವು ಬಹುಶಹ ಡೈಲಾಗನ್ನು ಅವರದೇ ಧ್ವನಿಯಲ್ಲಿ ಓದಲು ಕೂಡ ಪ್ರಯತ್ನ ಪಟ್ಟಿರುತ್ತಾರೆ, ಹೀಗೆ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿಯುವಂತಹ ಡೈಲಾಗ್ ಡೆಲವರಿ ಮಾಡಿ ತಮ್ಮದೇ ಆದ ವಿಶೇಷ ಧ್ವನಿಯ ಮೂಲಕ ಖಳ ನಟನಾಗಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದವರ ವೈಯಕ್ತಿಕ ಜೀವನದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ ಕೇಳಿ

ಸ್ನೇಹಿತರೆ ಎಪ್ಪತ್ತು ಎಂಬತ್ತರ ದಶಕದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯನಟ, ಕಡಕ ವಿಲನ್, ವಿಲನ್ ಪಾತ್ರಕ್ಕೆ ಬಲಗೈ ಬಂಟ ಎಂಬಂತೆ ವಿವಿಧ ರೀತಿಯ ಪಾತ್ರಗಳಿಲ್ಲಿ ಅತ್ಯದ್ಭುತವಾಗಿ ನಟಿಸಿ ಮನೆ ಮಾತಾದ ಧೀರೇಂದ್ರ ಗೋಪಾಲ್ ರವರು ಹಲವಾರು ಪ್ರಶಸ್ತಿಗಳನ್ನು ತಮ್ಮ ನಟನೆಯ ಮೂಲಕ ಗೆದ್ದಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ಧೀರೇಂದ್ರ ಗೋಪಾಲ್ ರವರು ಅಂದಿನ ಕಾಲದಲ್ಲಿ ಬಹುಬೇಡಿಕೆಯ ನಟರಾಗಿ ಇದ್ದ ಕಾರಣ ಉತ್ತಮ ಸಂಪಾದನೆ ಮಾಡುತ್ತಿದ್ದರು

ಆದರೆ ಧೀರೇಂದ್ರ ಗೋಪಾಲ್ ರವರು ತಾವು ಮಾಡುತ್ತಿದ್ದ ಹಣದಿಂದ ಜನರನ್ನು ಅಳೆಯಲಿಲ್ಲ, ಬದಲಾಗಿ ಕಷ್ಟ ಎಂದವರಿಗೆ ಹಣದ ಮುಖ ನೋಡದೆ ಸಾಕಷ್ಟು ಹಣವನ್ನು ಸಾಲದ ರೂಪದಲ್ಲಿ ಹಾಗೂ ದಾನದ ರೂಪದಲ್ಲಿ ನೀಡಿದ್ದರು. ತಮಗಾಗಿ ಯಾವುದೇ ಹಣವನ್ನು ಅವರು ಕೂಡಿರುವ ಆಲೋಚನೆ ಕೂಡ ಮಾಡಲಿಲ್ಲ. ಆದರೆ ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಅವಕಾಶಗಳು ಕಡಿಮೆಯಾಗಿ ಆರೋಗ್ಯ ಕೂಡ ಕೈ ಕೊಡುತ್ತದೆ, ತಾನು ಸಹಾಯ ಮಾಡಿದವರ ಕಡೆಗೆ ತಿರುಗಿ ನೋಡಿದರೆ ಯಾರೂ ಕೂಡ ಸಹಾಯ ಮಾಡುವ ಆಸಕ್ತಿ ಕೂಡ ತೋರುವುದಿಲ್ಲ

ಇದರಿಂದ ಸಾಕಷ್ಟು ಮನಸ್ಸನ್ನು ನೋಯಿಸಿಕೊಂಡು ಧೀರೇಂದ್ರ ಗೋಪಾಲ್ ರವರು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ, ಸಾಲ ಏನೋ ಮಾಡುತ್ತಾರೆ ಆದರೆ ತೀರಿಸಲು ಸಾಧ್ಯವಾಗುವುದಿಲ್ಲ, ಕೊನೆಗೆ ಈ ವಿಚಾರಗಳನ್ನು ನೆನೆಸಿಕೊಳ್ಳುತ್ತಾ ಸಾಲದ ಸುಳಿಯಲ್ಲಿ ಸಿಲುಕಿ ಸಾಕಷ್ಟು ನೋವನ್ನು ಅನುಭವಿಸಿ 2000 ಇಸವಿಯಲ್ಲಿ ಜಾಂ’ಡಿಸ್ ಬಂದಾಗ, ಸರಿಯಾದ ಚಿಕಿತ್ಸೆ ಮಾಡಿಸಿಕೊಳ್ಳಲು ವಿಫಲವಾಗಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿ ನಮ್ಮೆಲ್ಲರಿಂದ ದೂರ ಹೋಗುತ್ತಾರೆ.

Facebook Comments

Post Author: Ravi Yadav