ಕೇವಲ 5 ನಿಮಿಷಗಳಲ್ಲಿ ಮಾಡಿ ದಿಡೀರ್ ಮಜ್ಜಿಗೆ ಸಾಂಬರ್. ಹೇಗೆ ಗೊತ್ತೇ???

ಕೇವಲ 5 ನಿಮಿಷಗಳಲ್ಲಿ ಮಾಡಿ ದಿಡೀರ್ ಮಜ್ಜಿಗೆ ಸಾಂಬರ್. ಹೇಗೆ ಗೊತ್ತೇ???

ನಮಸ್ಕಾರ ಸ್ನೇಹಿತರೇ, ಇಂದು ನಾವು ಧಿಡೀರ್ ಮಜ್ಜಿಗೆ ಸಾರು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಈ ಸಾಂಬಾರನ್ನು ಕೇವಲ 5 ನಿಮಿಷಗಳಲ್ಲಿ ಮಾಡಬಹುದು. ಮಜ್ಜಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಮೊಸರು, ಸ್ವಲ್ಪ ಉಪ್ಪು, ಸ್ವಲ್ಪ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಉದ್ದಿನಬೇಳೆ, ಅರ್ಧ ಚಮಚ ಕಡಲೆ ಬೇಳೆ, 2 ಒಣಮೆಣಸಿನಕಾಯಿ, 4 – 5 ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, 1 – 2 ಹಸಿಮೆಣಸಿನಕಾಯಿ, 1 ಈರುಳ್ಳಿ, ಅರ್ಧ ಚಮಚ ಶುಂಠಿ, ಚಿಟಿಕೆ ಇಂಗು, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು.

ಮಜ್ಜಿಗೆ ಸಾರು ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು 1 ಬಟ್ಟಲು ಮೊಸರು,1 ಚಮಚ ಉಪ್ಪು, 1 ಬಟ್ಟಲು ನೀರನ್ನು ಹಾಕಿ ಮಿಕ್ಸ್ ಮಾಡಿಕೊಂಡು ಪಕ್ಕಕ್ಕಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಕಾದ ನಂತರ ಅದಕ್ಕೆ ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಅರ್ಧ ಚಮಚ ಉದ್ದಿನಬೇಳೆ, ಅರ್ಧ ಚಮಚ ಕಡ್ಲೆಬೇಳೆ, ಮುರಿದ ಒಣಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಜಜ್ಜಿದ ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ,ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ .ನಂತರ ಇದಕ್ಕೆ ಜಜ್ಜಿದ ಸ್ವಲ್ಪ ಶುಂಠಿ, ಚಿಟಿಕೆ ಇಂಗು, ಚಿಟಿಕೆ ಅರಿಶಿನಪುಡಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಈರುಳ್ಳಿ ಬೇಯುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಫ್ರೈ ಮಾಡಿದ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಮಿಕ್ಸ್ ಮಾಡಿದರೆ ದಿಡೀರ್ ಮಜ್ಜಿಗೆ ಸಾರು ಸವಿಯಲು ಸಿದ್ಧ.