ಮನೆಯಲ್ಲಿಯೇ ಸೂಪರ್ ಫೇಮಸ್ ಬಿಡದಿ ತಟ್ಟೆ ಇಡ್ಲಿ ಮಾಡುವುದು ಹೇಗೆ ಗೊತ್ತೇ??

ಮನೆಯಲ್ಲಿಯೇ ಸೂಪರ್ ಫೇಮಸ್ ಬಿಡದಿ ತಟ್ಟೆ ಇಡ್ಲಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಬಿಡದಿ ತಟ್ಟೆ ಇಡ್ಲಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಬಿಡದಿ ತಟ್ಟೆ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳು: 3 ಲೋಟ ಇಡ್ಲಿ ಅಕ್ಕಿ, 1 ಲೋಟ ಉದ್ದಿನ ಬೇಳೆ, ಅರ್ಧ ಲೋಟ ಗಟ್ಟಿ ಅವಲಕ್ಕಿ, ಕಾಲು ಲೋಟ ಸಬ್ಬಕ್ಕಿ, ಸ್ವಲ್ಪ ಮೆಂತ್ಯ, ಅಡುಗೆ ಸೋಡಾ, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಬಿಡದಿ ತಟ್ಟೆ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ತೆಗೆದುಕೊಂಡ ಅಕ್ಕಿ, ಉದ್ದಿನಬೇಳೆ ಹಾಗೂ ಮೆಂತ್ಯವನ್ನು ಹಾಕಿ 2 – 3 ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಮತ್ತೆ ನೀರನ್ನು ಹಾಕಿ 4 – 5 ಗಂಟೆಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಒಂದು ಚಿಕ್ಕ ಬಟ್ಟಲಿಗೆ ತೆಗೆದುಕೊಂಡ ಅವಲಕ್ಕಿ ಹಾಗೂ ಸಬ್ಬಕ್ಕಿಯನ್ನು ಹಾಕಿ ಒಂದು ಬಾರಿ ನೀರಿನಿಂದ ತೊಳೆದು ಮತ್ತೆ ನೀರನ್ನು ಹಾಕಿ 4 – 5 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಮಿಶ್ರಣವನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 7 – 8 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಇದಕ್ಕೆ ಸ್ವಲ್ಪ ಅಡುಗೆ ಸೋಡಾ ವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಇಡ್ಲಿ ಪಾತ್ರೆಯನ್ನು ಇಟ್ಟು ಸ್ವಲ್ಪ ನೀರನ್ನು ಹಾಕಿ ಕಾಯಲು ಬಿಡಿ. ನಂತರ ತಟ್ಟೆ ಇಡ್ಲಿ ಪ್ಲೇಟಿಗೆ ಎಣ್ಣೆಯನ್ನು ಸವರಿಕೊಳ್ಳಿ. ನಂತರ ಹಿಟ್ಟನ್ನು ಹಾಕಿಕೊಳ್ಳಿ. ಕೊನೆಯದಾಗಿ ತಟ್ಟೆ ಇಡ್ಲಿ ಸ್ಟ್ಯಾಂಡನ್ನು ಇಡ್ಲಿ ಪಾತ್ರೆಯೊಳಗೆ ಇಟ್ಟು 10 ನಿಮಿಷಗಳ ಕಾಲ ಬೇಯಿಸಿ ಕೊಂಡರೆ ಬಿಡದಿ ತಟ್ಟೆ ಇಡ್ಲಿ ಸವಿಯಲು ಸಿದ್ಧ.